ETV Bharat / bharat

ಜಗತ್ತಿನಲ್ಲಿ ಕುಸಿಯುತ್ತಿದೆ ಆರ್ಥಿಕತೆ ಬಲ.. ಈಗ ಹೇಗಿದೆ ಗೊತ್ತಾ ಭಾರತದ ಪರಿಸ್ಥಿತಿ? - corona effect on indian Economie

ಕೊರೊನಾ ವೈರಸ್ ದೀರ್ಘಕಾಲದವರೆಗೂ ಜನರಿಗೆ ಬಾಧಿಸುತ್ತಿದ್ರೆ, ಬೆಂಕಿಯಿಂದ ಬಾಣಲೆಗೆ ಬಿದ್ದಂಥ ಅನುಭವ ಜಗತ್ತಿಗೆ ಆಗಲಿದೆ ಎಂದು ಐಎಂಎಫ್ ಎಚ್ಚರಿಸಿದೆ. ಜಾಗತಿಕ ಸಂಸ್ಥೆ ಆಕ್ಸ್‌ಫಾಮ್ ಅಂದಾಜು ಮಾಡಿರುವ ಪ್ರಕಾರ, ಕೊರೊನಾ ಸಮಸ್ಯೆ ಪರಿಹಾರವಾಗುವವರೆಗೆ ಜಗತ್ತಿನ ಅರ್ಧದಷ್ಟು ಜನಸಂಖ್ಯೆ ಬಡತನವನ್ನು ಎದುರಿಸಲಿದೆ.

Collapsing Economies
ಜಗತ್ತಿನಲ್ಲಿ ಕುಸಿಯುತ್ತಿದೆ ಆರ್ಥಿಕತೆ ಬಲ
author img

By

Published : Apr 13, 2020, 2:15 PM IST

ಕೊರೊನಾ ವೈರಸ್ ಮನುಕುಲದ ಜೀವಗಳನ್ನು ನಿಧಾನವಾಗಿ ತನ್ನ ಅಗ್ನಿ ಕುಂಡದಲ್ಲಿ ಹಾಕಿ ಸುಡುತ್ತಿದೆ. ಇಡೀ ವಿಶ್ವದಲ್ಲಿ 16 ಲಕ್ಷಕ್ಕೂ ಹೆಚ್ಚು ಜನ ಕೋವಿಡ್-19 ಸೋಂಕಿನಿಂದ ಬಾಧಿತರಾಗಿದ್ದು, 1 ಲಕ್ಷಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗಿದ್ದಾರೆ. ಬಹುತೇಕ ದೇಶಗಳ ಆರ್ಥಿಕತೆಯು ಕುಸಿತದ ಸ್ಥಿತಿಯನ್ನು ತಲುಪಿದೆ.

ಅಂತಾರಾಷ್ಟ್ರೀಯ ಆರ್ಥಿಕ ನಿಧಿ (ಐಎಂಎಫ್) ಮೂರು ತಿಂಗಳ ಹಿಂದೆ ಮಾಡಿದ ನಿರೀಕ್ಷೆಗಳು ತಲೆಕೆಳಗಾಗಿವೆ. 170 ದೇಶಗಳ ತಲಾ ಆದಾಯ ತಳಮಟ್ಟಕ್ಕೆ ಕುಸಿದಿದೆ. ವಿಶ್ವದ ಶೇ.81 ರಷ್ಟು ಜನರಿಗೆ (330 ಬಿಲಿಯನ್) ಉದ್ಯೋಗ ಒದಗಿಸುತ್ತಿದ್ದ ಉದ್ಯಮಗಳು ಭಾಗಶಃ ಅಥವಾ ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂದು ವಿಶ್ವಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ತಿಳಿದು ಬಂದಿದೆ.

ಕೊರೊನಾ ವೈರಸ್ ದೀರ್ಘಕಾಲದವರೆಗೂ ಜನರಿಗೆ ಬಾಧಿಸುತ್ತಿದ್ರೆ, ಬೆಂಕಿಯಿಂದ ಬಾಣಲೆಗೆ ಬಿದ್ದಂಥ ಅನುಭವ ಜಗತ್ತಿಗೆ ಆಗಲಿದೆ ಎಂದು ಐಎಂಎಫ್ ಎಚ್ಚರಿಸಿದೆ. ಜಾಗತಿಕ ಸಂಸ್ಥೆ ಆಕ್ಸ್‌ಫಾಮ್ ಅಂದಾಜು ಮಾಡಿರುವ ಪ್ರಕಾರ, ಕೊರೊನಾ ಸಮಸ್ಯೆ ಪರಿಹಾರವಾಗುವವರೆಗೆ ಜಗತ್ತಿನ ಅರ್ಧದಷ್ಟು ಜನಸಂಖ್ಯೆ ಬಡತನವನ್ನು ಎದುರಿಸಲಿದೆ.

ಉದ್ಯಮಗಳು ಮುಚ್ಚಲಿವೆ. ಉದ್ಯೋಗಾವಕಾಶಗಳು ಸ್ಥಗಿತಗೊಳ್ಳಲಿವೆ. ಅಮೆರಿಕ ಒಂದರಲ್ಲೇ 70 ಮಿಲಿಯನ್ ನಿರುದ್ಯೋಗಿಗಳು ಉದ್ಯೋಗ ಹುಡುಕುತ್ತಿದ್ದಾರೆ. ಇದು ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳುವ ಮುನ್ನೆಚ್ಚರಿಕೆ ನೀಡುತ್ತಿದೆ. 1930ರಲ್ಲಿ ಉಂಟಾದ ಭಾರಿ ಆರ್ಥಿಕ ಕುಸಿತಕ್ಕೆ ಐಎಂಎಫ್ ಈ ಸನ್ನಿವೇಶವನ್ನು ಹೋಲಿಕೆ ಮಾಡಿದೆ. ಇದು ಇನ್ನೂ ಭೀಕರವಾಗಿದೆ.

ಐದು ಮಿಲಿಯನ್ ಜನರನ್ನು ಹತ್ಯೆಗೈದಿದ್ದ ಸ್ಪಾನಿಶ್ ಫ್ಲೂ: ವಿಶ್ವಯುದ್ಧ-1 ಮುಗಿಯುವ ಹೊತ್ತಿಗೆ ಸ್ಪಾನಿಶ್ ಫ್ಲೂ ದಾಳಿ ಮಾಡಿ ಐದು ಮಿಲಿಯನ್ ಜನರನ್ನು ಬಲಿ ಪಡೆದಿತ್ತು. ಹತ್ತು ವರ್ಷಗಳ ನಂತರ ಭೀಕರ ಆರ್ಥಿಕ ಕುಸಿತ ಕಂಡು ಬಂದಿತ್ತು. ಇದು ಅಮೆರಿಕದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿತ್ತು. ಇದರಿಂದಾಗಿ ಹಲವು ದೇಶಗಳು ಆರ್ಥಿಕ ಅಸ್ಥಿರತೆಯನ್ನು ಎದುರಿಸಿದ್ದವು. ಈಗ ಕೊರೊನಾ ವೈರಸ್​ ದಾಳಿ ಕೂಡ ಎಲ್ಲ ಖಂಡಗಳ ಜೀವಕ್ಕೆ ಮತ್ತು ಆರ್ಥಿಕತೆಗೆ ಸವಾಲೊಡ್ಡಿದೆ. ನೂರಕ್ಕೂ ಹೆಚ್ಚು ದೇಶಗಳು ತಮ್ಮ ಗಡಿಗಳನ್ನು ಮುಚ್ಚಿ, ವೈರಸ್ ಹರಡುವುದನ್ನು ತಡೆದಿವೆ. ಆಮದು ಮತ್ತು ರಫ್ತುಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ವ್ಯಾಪಾರ ಸ್ಥಗಿತಗೊಂಡಿದ್ದರಿಂದ, ಅತಿ ಹೆಚ್ಚಿನ ಪ್ರಮಾಣದ ಹಾನಿ ಅಭಿವೃದ್ಧಿಗೊಳ್ಳುತ್ತಿರುವ ದೇಶಗಳಿಗೆ ಉಂಟಾಗಿದೆ.

ಜಿ-20 ದೇಶಗಳು ಈಗಾಗಲೇ ದೇಶೀಯ ವಲಯವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿವೆ. ಇದಕ್ಕಾಗಿ 5 ಟ್ರಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿವೆ. ಆರ್ಥಿಕ ಸಾಮರ್ಥ್ಯವನ್ನು ಹೊಂದಿಲ್ಲದ ದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಾಯ ಯಾಚಿಸುತ್ತಿವೆ. ಈ ವರ್ಷ ಜಾಗತಿಕ ವ್ಯಾಪಾರ ವಹಿವಾಟು ಶೇ.13ರಿಂದ ಶೇ.32ರಷ್ಟು ಕುಸಿಯುವ ನಿರೀಕ್ಷೆ ವ್ಯಕ್ತಪಡಿಸಿರುವ ಡಬ್ಲ್ಯೂಟಿಒ, 1930ರ ಕಾಲದಲ್ಲಿ ಕಂಡು ಬಂದಿದ್ದ ರಕ್ಷಣಾತ್ಮಕ ನೀತಿಗಳು ಮತ್ತೆ ಜಾರಿಗೆ ಬರುವ ಅಪಾಯ ಮನಗಂಡಿವೆ. ಅಭಿವೃದ್ಧಿಗೊಳ್ಳುತ್ತಿರುವ ದೇಶಗಳಿಗೆ ಎರಡೂವರೆ ಟ್ರಿಲಿಯನ್ ಡಾಲರ್ ಪ್ಯಾಕೇಜ್‌ಗೆ ವಿಶ್ವಸಂಸ್ಥೆ ಅನುಮತಿ ನೀಡದೇ ಇದ್ರೇ, ವಿಶ್ವದೆಲ್ಲೆಡೆ ಇರುವ ಬಡ ಜನರಿಗೆ ಈ ಆರ್ಥಿಕ ಕುಸಿತ ಭಾರಿ ಪ್ರಮಾಣದಲ್ಲಿ ಬಾಧಿಸಲಿದೆ.

ಭಾರತೀಯ ಕಾರ್ಯತಂತ್ರ: ಮನುಕುಲದ ಭವಿಷ್ಯಕ್ಕೆ ಈ ಕೊರೊನಾ ವೈರಸ್ ಯಮ ಸ್ವರೂಪಿಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿರುವುದು ನಿಜ ಎನಿಸುತ್ತಿದೆ. ವಿಶ್ವದ ಆರ್ಥಿಕತೆಯನ್ನು ವಾರ್ಷಿಕ ಐದು ಟ್ರಿಲಿಯನ್ ಡಾಲರ್​ಗಳಿಗೆ ಕುಸಿಯುವಂಥ ಪರಿಸ್ಥಿತಿಯನ್ನು ಕೊರೊನಾ ನಿರ್ಮಿಸುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಇದು ಜಪಾನ್​ನ ಒಟ್ಟು ದೇಶೀಯ ಉತ್ಪನ್ನಕ್ಕಿಂತ ಸ್ವಲ್ಪವೇ ಹೆಚ್ಚಿದೆ ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ. ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವವರೆಗೂ ಈ ಸಮಸ್ಯೆ ಮುಗಿಯುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಕಷ್ಟದ ಸನ್ನಿವೇಶದಲ್ಲಿ ಎಲ್ಲಾ ದೇಶಗಳು ಪರಸ್ಪರ ಸಹಾಯ ಮಾಡುತ್ತಿವೆ.

ಫಿಕ್ಕಿ(ವಾಣಿಜ್ಯ ಮತ್ತು ಉದ್ಯಮದ ಭಾರತೀಯ ಚೇಂಬರ್‌ಗಳ ಸಂಘಟನೆ) ಜೊತೆಗೆ ದೇಶದ ಹಣಕಾಸು ತಜ್ಞರೂ ಕೂಡ, ಭಾರತವು 10 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿವೆ. ಮೂರು ವಾರದ ಲಾಕ್​ಡೌನ್ ಅವಧಿಯಲ್ಲಿ ಭಾರತ 9 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಧ್ಯಯನಗಳು ಹೇಳಿವೆ. ದೇಶವನ್ನು ಆರ್ಥಿಕ ಸುಸ್ಥಿರತೆಯ ಕಡೆಗೆ ಕೊಂಡೊಯ್ಯಲು ಉದ್ಯಮಗಳಿಗೆ ₹4ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಲಾಗಿದೆ. ಭಾರತದ ಕಾರ್ಯತಂತ್ರ ಇನ್ನಷ್ಟು ವೈವಿಧ್ಯಮಯವಾಗಿರಬೇಕಿದೆ. ಮಾರಣಾಂತಿಕ ಕೊರೊನಾದಿಂದ ಜನರನ್ನು ರಕ್ಷಿಸಲು ಸರ್ಕಾರಗಳು ತಮ್ಮ ನೀತಿಗಳನ್ನು ಇನ್ನಷ್ಟು ಹರಿತಗೊಳಿಸಬೇಕು ಮತ್ತು ದೇಶದ ಅಭಿವೃದ್ಧಿ ಸುಸ್ಥಿರವಾಗಿ ಸಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.