ನವದೆಹಲಿ : ಕರ್ನಾಟಕದ ಕರಾವಳಿ ಭಾಗಗಳಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ, ಆಂಧ್ರಪ್ರದೇಶ ಕರಾವಳಿ ಭಾಗಗಳು, ಕರ್ನಾಟಕದ ಒಳನಾಡಿನಲ್ಲಿ, ಒಡಿಶಾ, ಕೊಂಕಣ, ಗೋವಾ, ತೆಲಂಗಾಣ, ರಾಯಲಸೀಮಾ, ಕೇರಳ ಮತ್ತು ಮಾಹೆಯಲ್ಲಿ ವರುಣಾರ್ಭಟದ ಮುನ್ಸೂಚನೆ ನೀಡಿದೆ.
ಇವುಗಳನ್ನು ಹೊರತುಪಡಿಸಿ ಛತ್ತೀಸ್‌ಗಢ, ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಸಹ ದಿನವಿಡೀ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರ, ವಿದರ್ಭ, ಬಿಹಾರ, ಜಾರ್ಖಂಡ್, ಗಂಗಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲೆ ಬಲವಾದ ಗಾಳಿ ವೇಗ 45-55 ಕಿ.ಮೀ.ಗೆ ತಲುಪಲಿದೆ. ಮಹಾರಾಷ್ಟ್ರ-ಗೋವಾ ಕರ್ನಾಟಕ-ಕೇರಳ ತೀರಗಳು, ಲಕ್ಷದ್ವೀಪ ಪ್ರದೇಶ ಮತ್ತು ಉತ್ತರ ತಮಿಳುನಾಡು-ಆಂಧ್ರಪ್ರದೇಶ-ಒಡಿಶಾ ತೀರಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಮುಂದಿನ ಎರಡು ದಿನಗಳವರೆಗೆ ಮೀನುಗಾರಿಕೆ ಸ್ಥಗಿತಗೊಳಿಸುವಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.