ಮುಂಬೈ/ಮಹಾರಾಷ್ಟ್ರ: ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಜನರನ್ನು ಗುಂಪುಗಳಿಂದ ದೂರವಿಡುವ ಕ್ರಮಗಳಲ್ಲಿ ಒಂದಾಗಿ ಮುಂಬೈನ ಲೈಫ್‌ಲೈನ್, ಸ್ಥಳೀಯ ರೈಲು ಸೇವೆಗಳನ್ನು ಕೆಲವು ದಿನಗಳವರೆಗೆ ಸ್ಥಗಿತಗೊಳಿಸುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗುವುದು. ಈ ನಿರ್ಧಾರವು ಉಪನಗರ ರೈಲುಗಳಲ್ಲದೇ, ಮುಂಬೈ ಮೆಟ್ರೋ, ಮೊನೊರೈಲ್‌ನಂತಹ ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದು. ರೈಲು ಸಂಚಾರ ಸ್ಥಗಿತ ನಿರ್ಧಾರ ಬಿಟ್ಟರೆ ರೈಲು ಬೋಗಿಗಳಲ್ಲಿ ಧೂಮಪಾನ ಮಾಡುವುದು, ಜನಸಂದಣಿ ತಪ್ಪಿಸಲು, ಪ್ರತಿ ಬೋಗಿಯಲ್ಲಿ ಲಭ್ಯವಿರುವ ಆಸನಗಳಿಗೆ ಪ್ರಯಾಣಿಕರ ಸಂಖ್ಯೆಯನ್ನು ಸೀಮಿತಗೊಳಿಸುವಂತಹ ಆಯ್ಕೆಗಳಿವೆ ಎಂದು ಅವರು ಹೇಳಿದ್ರು.
ಸೆಂಟ್ರಲ್ ರೈಲ್ವೆ ಮತ್ತು ಅದರ ಹಾರ್ಬರ್ ಲೈನ್ ಮತ್ತು ವೆಸ್ಟರ್ನ್ ರೈಲ್ವೆಗಳಲ್ಲಿ ವ್ಯಾಪಿಸಿರುವ ಉಪನಗರ ರೈಲುಗಳು ಮುಂಬೈನ ಜೀವನಾಡಿಯಾಗಿದ್ದು, ಮುಂಬೈ, ಥಾಣೆ, ಪಾಲ್ಘರ್ ಮತ್ತು ರಾಯಗಡ್ ಜಿಲ್ಲೆಗಳಿಗೆ ಪ್ರತಿದಿನ 8.50 ಮಿಲಿಯನ್ ಪ್ರಯಾಣಿಕರನ್ನು ಕರೆದೊಯ್ಯುತ್ತದೆ.