ETV Bharat / bharat

ವಿಶೇಷ ಅಂಕಣ: ಕೊರೊನಾ ಹರಡುವಿಕೆ ತಡೆಯಲು ಬಟ್ಟೆಯಿಂದ ತಯಾರಿಸಿದ ಮಾಸ್ಕ್​ ಸಾಕು - ಬಟ್ಟೆಯ ಮುಖಗವಸಿನಿಂದ ಕೋವಿಡ್ 19

ಬಟ್ಟೆಯ ಮುಖಗವಸು ಮೇಲ್ಮೈಯಲ್ಲಿನ ಹಾಗೂ ಗಾಳಿಯ ಮೂಲಕ ರೋಗಾಣು ಪಸರಿಸುವುದನ್ನು ತಪ್ಪಿಸಬಲ್ಲದು ಎನ್ನುತ್ತವೆ ಈ ಕುರಿತ ಸಂಶೋಧನಾ ಸಾಕ್ಷ್ಯಗಳು. ಇದು ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸೂಕ್ತ ನೀತಿ ನಿರ್ಣಯ ತೆಗೆದುಕೊಳ್ಳಲು ಸಾಕು. ಬಟ್ಟೆ, ಮುಖದಿಂದ ಸಿಡಿಯುವ ಹನಿಗಳನ್ನು ಹಾಗೂ ಗಾಳಿಯನ್ನು ತಡೆಯಬಲ್ಲದು. ಬಟ್ಟೆಗಳನ್ನು ಹಲವು ಪದರಗಳನ್ನಾಗಿಸಿ ತಯಾರಿಸಿದ ಮುಖಗವಸು ಇನ್ನಷ್ಟು ಪರಿಣಾಮಕಾರಿಯಾದುದು.

Cloth masks may prevent transmission of COVID-
ಬಟ್ಟೆಯ ಮುಖಗವಸಿನಿಂದ ಕೋವಿಡ್ 19ರ ಹರಡುವಿಕೆಯನ್ನು ತಪ್ಪಿಸಬಹುದು
author img

By

Published : May 27, 2020, 12:22 PM IST

ಹೈದರಾಬಾದ್: ದೈಹಿಕ ಅಂತರ, ಕೈ ಶುದ್ದತೆ ಹಾಗೂ ಮೇಲ್ಮೆಯನ್ನು ಸೋಂಕು ನಿವಾರಕಗಳ ಸಿಂಪಡಣೆ ಮೂಲಕ ಸ್ವಚ್ಛಗೊಳಿಸುವುದು, ಈ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಗಟ್ಟುವ ಸುಲಭೋಪಾಯಗಳು. ಇದೇ ಸಂದರ್ಭದಲ್ಲಿ, ಸರಕಾರ, ಅಂತಾರಾಷ್ಟ್ರೀಯ ಸಂಸ್ಥೆಗಳು, ನೀತಿ ನಿರೂಪಕರು, ಹಾಗೂ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು, ಕೋವಿಡ್ 19 (ಸಾರ್ಸ್ -ಸಿಒವಿ-2) ಸೋಂಕು ಹರಡದಂತೆ ತಡೆಯಲು ವೈದ್ಯಕಿಯೇತರ ಮುಖಗವಸನ್ನು ಬಳಸಲು ಸಾರ್ವಜನಿಕರಿಗೆ ಶಿಫಾರಸು ಮಾಡುವ ಬಗ್ಗೆ ಚರ್ಚಿಸುತ್ತಿದ್ದಾರೆ.

ಬಟ್ಟೆಯಿಂದ ತಯಾರಿಸಿದ ಮುಖಗವಸು ಕೋವಿಡ್ 19 ಹರಡದಂತೆ ತಡೆಯುತ್ತದೆ ಎಂಬುದರ ಬಗ್ಗೆ ನೇರ ಸಾಕ್ಷ್ಯಗಳು ಲಭ್ಯವಿಲ್ಲವಾದರೂ, ಅವುಗಳು ಕೊರೊನಾ ವೈರಸ್ ಗಾಳಿ ಹಾಗೂ ಮೇಲ್ಮೆ ಮೂಲಕ ಈ ಸೋಂಕು ಹರಡುವುದನ್ನು ನಿಯಂತ್ರಿಸುತ್ತದೆ ಎಂದು ದೃಢಪಟ್ಟಿದೆ. ಇದು ನೀತಿ ನಿರೂಪಕರಿಗೆ, ಮುಖಗವಸನ್ನು ಬಳಸುವಂತೆ ಸಾರ್ವಜನಿಕರಿಗೆ ಪ್ರೇರೆಪಿಸಲು ಸಾಕು. ಬಟ್ಟೆ, ಒಂದೊಂದಾಗಿರುವ ವೈರಸ್‍ಗಳ ಪ್ರಸರಣವನ್ನು ತಡೆಯುವುದಿಲ್ಲ. ಆದರೆ ಖಂಡಿತವಾಗಿಯೂ, ದೊಡ್ಡ ಪ್ರಮಾಣದಲ್ಲಿ ವೈರಸ್‍ಗಳ ಹರಡುವಿಕೆಯನ್ನು ಅದು ನಿಯಂತ್ರಿಸುತ್ತದೆ.

ಆದರೆ ದೊಡ್ಡ ಮಟ್ಟದಲ್ಲಿ ವಾಯುವಿನಲ್ಲಿ (<5 µm) ಅಥವಾ ಹನಿಗಳಲ್ಲಿ (>5 µm) ಈ ವೈರಾಣು ವ್ಯಕ್ತಿಯ ದೇಹ ಪ್ರವೇಶಿಸುವುದನ್ನು ಇದು ತಡೆಯುತ್ತದೆ. ಮಾತನಾಡುವಾಗ, ತಿನ್ನುವಾಗ, ಕೆಮ್ಮುವಾಗ, ಅಥವಾ ಸೀನುವಾಗ, ವಾಯುಕಣಗಳು ಉತ್ಪತ್ತಿಯಾಗುತ್ತವೆ ಹಾಗೂ ಹನಿಗಳು ಹರಡುತ್ತವೆ. ಎಲ್ಲವನ್ನೂ ಬಟ್ಟೆಯ ಮುಖಗವಸು ತಡೆಯತ್ತದೆ ಎಂದು ಅರ್ಥವಲ್ಲ. ಬದಲಿಗೆ ಹೊರಗೆ ನೇರವಾಗಿ ಹರಡುವ ಹನಿಗಳನ್ನು ಅವು ನಿಲ್ಲಿಸುತ್ತವೆ. ಹೀಗೆ ತಡೆಯಲ್ಪಟ್ಟ ಹನಿಗಳು ನೆಲದ ಮೇಲೆ ಬೀಳುತ್ತವೆ. ಏಕೆಂದರೆ ಅವುಗಳಿಗೆ ಗಾಳಿಯಲ್ಲಿ ಸದಾ ಕಾಲ ಸಕ್ರಿಯವಾಗಿರಲು ಸಾಧ್ಯವಿಲ್ಲ. ಹೀಗೆ ನೆಲದ ಮೇಲ್ಮೈ ಸೇರುವ ವೈರಸ್, ಅದನ್ನು ಮುಟ್ಟಿದಾಗ ಮಾನವ ದೇಹದೊಳಕ್ಕೆ ಪ್ರವೇಶಿಸುತ್ತವೆ.

ಒಂದು ವಸ್ತುವಿನ ಪರಿಣಾಮಕಾರಿಯು ಅದು ಹೇಗೆ ವೈರಸ್ ಇರುವ ಹನಿಗಳನ್ನು ತಡೆದು ನಿಲ್ಲಿಸುತ್ತದೆ ಎಂಬುದರ ಮೇಲೆ ಆಧರಿಸಿರುತ್ತದೆ. ಪ್ರಯೋಗಾಲಯದಲ್ಲಿ ಭೌತಿಕ ಹಾಗೂ ಜೈವಿಕ ಪರೀಕ್ಷಾ ಉಪಕರಣಗಳನ್ನು ಬಳಸಿಕೊಂಡು, ಇವುಗಳನ್ನು ಪರೀಕ್ಷಿಸಲಾಗುತ್ತದೆ. ಮುಖಗವಸಿನ ಗುಣಮಟ್ಟವನ್ನು ಎಸ್‍ಟಿಎಂ ಇಂಟರ್‍ನ್ಯಾಷನಲ್ ನಿರ್ಧರಿಸುತ್ತಿದ್ದು, ಇವುಗಳನ್ನು ಲಾಟೆಕ್ಸ್ ಸ್ಪೇರ್ಸ್ ಹಾಗೂ ಏರೋಸೊಲಿಸ್ಡ್ ಸ್ಟೆಪಿಲೊಕೊಕೊಸ್ ಆರ್ಸ್ ಮೂಲಕ ಇದನ್ನು ಪರೀಕ್ಷಿಸಲಾಗುತ್ತದೆ. ಆದರೆ ಮುಖಗವಸನ್ನು ಬೇರೆ ಬೇರೆ ವೈರಸ್‍ಗಳಿಗೆ ಪ್ರತ್ಯೇಕವಾಗಿ ಪರೀಕ್ಷಿಸಲಾಗುವುದಿಲ್ಲ. ಒಂದು ಮುಖಗವಸಿನ ಸಾಮಥ್ರ್ಯ ಅದು ಹೇಗೆ, ಬೇರೆ ಬೇರೆ ಗಾತ್ರದ ವಸ್ತುಗಳನ್ನು ತಡೆ ಹಿಡಿಯುತ್ತದೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ.

ಬಟ್ಟೆ ದ್ರವದಹನಿಗಳನ್ನು ಹಾಗೂ ಗಾಳಿಯ ಕಣಗಳನ್ನು ಯಶಸ್ವಿಯಾಗಿ ಹೊರಗಡೆಯೆ ತಡೆಹಿಡಿಯುತ್ತದೆ. ಏಕ ಮಡಿಕೆಯ ಹತ್ತಿಯ ಬಟ್ಟೆ, ಪ್ರಯೋಗಾಲಯದಲ್ಲಿ 43% ದಿಂದ 94%ದ ವರೆಗೆ ಈ ಕಣಗಳನ್ನು ತಡೆ ಹಿಡಿದರೆ, ಅದು ವೈದ್ಯಕೀಯ ಮಾಸ್ಕ್‍ಗಳಲ್ಲಿ 98% ರಿಂದ99% ರಷ್ಟಿರುತ್ತದೆ. ಇಂತಹುದೆ ಇನ್ನೊಂದು ಪ್ರಯೋಗದ ಸಾರಾಂಶವೆಂದರೆ, ಏಕ ಮಡಿಕೆಯ ಸ್ಕಾರ್ಫ್, ಅಂಗಿ, ಟಿಶರ್ಟ್, ಟವಲ್‍ಗಳ ತಡೆ ಹಿಡಿಯುವಿಕೆಯ ಸಾಮಥ್ರ್ಯ 10%ದಿಂದ 40%ದಷ್ಟಿರುತ್ತದೆ.

ಇದೇ ರೀತಿಯ ಅಧ್ಯಯನಕ್ಕೆ ಟಿ-ಟವಲ್‍ಗಳನ್ನು ವಾಯುಕಣಗಳನ್ನು ಬಳಸಿಕೊಂಡು, ಬ್ಯಾಕ್ಟೀರಿಯಾಗಳ ವಿರುದ್ಧ ಒಳಪಡಿಸಿದಾಗ, ಅದರ ಸಾಮಥ್ರ್ಯ ಏಕಮಡಿಕೆಯಲ್ಲಿ 83% ಹಾಗೂ ಎರಡು ಮಡಿಕೆಯಲ್ಲಿ 97%. ಮೆಡಿಕಲ್ ಮಾಸ್ಕ್‍ನ ಸಾಮಥ್ರ್ಯ 96% ಎಂದು ಪರೀಕ್ಷೆಗಳಲ್ಲಿ ತಿಳಿದು ಬಂದಿದೆ. ವೈರಸ್‍ಗಳಲ್ಲಿ ಈ ಅಧ್ಯಯನ ನಡೆಸಿದಾಗ, ಏಕ ಮಡಿಕೆಯ ಟಿ-ಟವಲ್ 72% ಪರಿಣಾಮ ತೋರಿಸಿದರೆ, ಏಕ ಮಡಿಕೆಯ ಟಿ ಶರ್ಟ್ 51% ತಡೆಹಿಡಿಯುವಿಕೆಯ ಸಾಮಥ್ರ್ಯ ತೋರಿಸಿತು. ಮೆಡಿಕಲ್ ಮುಖಗವಸಿನ ಪರಿಣಾಮಕಾರಿತ್ವ 90%.

2020ರಲ್ಲಿ ಕೈಗೊಳ್ಳಲಾದ ಒಂದು ಸಂಶೋಧನೆ ಪ್ರಕಾರ, ಕೆಲವು ವಸ್ತ್ರಗಳು ಸೋಂಕು ಕಾರಕ ಜೀವಾಣುಗಳ ಹರಡುವಿಕೆ ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಒಂದು ಮಡಿಕೆಯ ಮೂಲಕ ಗಾಳಿ ಮೂಲಕ ಹರಡಬಲ್ಲ ಜೀವಾಣುಗಳನ್ನು ಅವು ತಡೆ ಹಿಡಿಯಬಲ್ಲುವಾದರೆ, ಬಹು ಮಡಿಕೆ ಮಾಡಿಕೊಂಡು ಬಳಸಿದರೆ, ಅವುಗಳು ಇನ್ನಷ್ಟು ಉಪಯುಕ್ತ.

ದಶಕಗಳ ಹಿಂದೆಯೇ, ಬಟ್ಟೆ ಮುಖಗವಸುಗಳು ನಮಗೆ ಕೊಡುವ ರಕ್ಷಣೆಯ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ ಇವುಗಳ ಫಲಿತಾಂಶ ಈಗ ಅತ್ಯಮೂಲ್ಯವಾದುದು ಹಾಗೂ ಅತ್ಯಂತ ಸಾಂದರ್ಭಿಕವಾದುದು. ಮುಖಗವಸು ಹಾಕದ ಸ್ವಯಂಸೇವಕರಿಗಿಂತ, ಮಸ್ಲಿನ್ ಹಾಗೂ ಫ್ಲಾನೆಲ್ ಬಟ್ಟೆ ಹಾಕಿದ ಸ್ವಯಂ ಸೇವಕರ ಮುಖಗವಸಿನಿಂದ 99.3% ರಿಂದ 99.9% ಬ್ಯಾಕ್ಟೀರಿಯಾಗಳನ್ನು ಪತ್ತೆ ಹಚ್ಚಲಾಯಿತು. 99.5%ದಿಂದ 99.8%ದಷ್ಟು ಗಾಳಿಯಲ್ಲಿ ಪಸರಿಸುವ ಜೀವಾಣುಗಳು ಕೂಡಾ ಮುಖಗವಸಿನಲ್ಲಿ ಪತ್ತೆಯಾದವು. ಈ ಗಾಳಿ ಸ್ವೀಕರಿಸುವ ಮೂಲದಿಂದ ಪತ್ತೆಯಾದ ಬ್ಯಾಕ್ಟೀರಿಯಾಗಳ ಪ್ರಮಾಣ 88%ದಿಂದ 99%. 1975ರಲ್ಲಿ ಕೂಡಾ ಇಂತಹ ಒಂದು ಪ್ರಯೋಗ ನಡೆಸಯಲಾಯಿತು.

ಈ ಪ್ರಯೋಗದಲ್ಲಿ 4 ವೈದ್ಯಕೀಯ ಮುಖಗವಸುಗಳನ್ನು, 4 ಹೊದಿಕೆಯ ಹತ್ತಿಯಿಂದ ತಯಾರಿಸಿದ ಮಸ್ಲಿನ್ ಬಟ್ಟೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ತಯಾರಾದ ಮುಖಗವಸಿನ ಜೊತೆಗೆ ಅಧ್ಯಯನ ನಡೆಸಲಾಯಿತು. ಬ್ಯಾಕ್ಟೀರಿಯವನ್ನು ತಡೆ ಹಿಡಿಯುವ ಸಾಮಥ್ರ್ಯ ಹತ್ತಿ ಬಟ್ಟೆಯ ಮುಖಗವಿಸಿನದ್ದು 99% ವಾದರೆ, ಇದು ವೈದ್ಯಕೀಯ ಮುಖಗವಸಿನಲ್ಲಿ 96% ದಿಂದ 99%ರಷ್ಟಿತ್ತು. ಗಾಳಿ ಸ್ವೀಕರಿಸುವ ಮೂಲದಲ್ಲಿ ಇದು 72%ದಿಂದ 89% ಹಾಗೂ 89%ರಷ್ಟಾಗಿತ್ತು. ಪ್ರಾಣಿಗಳಲ್ಲಿ ನಡೆದ ಈ ಸಂಶೋಧನೆ ಪ್ರಕಾರ, ಬಟ್ಟೆಯ ಮುಖಗವಸು ಟ್ಯುಬರ್‍ಸೆಲ್ ಬ್ಯಾಸಿಲಿ ಬ್ಯಾಕ್ಟೀರಿಯಾ ಹರಡುವಿಕೆಯನ್ನು ಕೂಡಾ ಇದು ತಡೆಹಿಡಿದಿತ್ತು.

ಇಂತಹ ಪ್ರಯತ್ನ ಮೊಲಗಳಲ್ಲಿ ಕೂಡಾ ನಡೆದಿತ್ತು. 3ರಿಂದ 6 ಮಡಿಕೆಯ ಮುಖಗವಸನ್ನು ಸುತ್ತಿ, ಈ ಮೊಲಗಳನ್ನು ಟ್ಯುಬರ್‍ಸೆಲ್ ಬ್ಯಾಸಿಲಿ ಬ್ಯಾಕ್ಟೀರಿಯಾದ ಜೀವಾಣಗಳಿಗೆ ಒಡ್ಡಲಾಗಿತ್ತು. ಬಳಿಕ ಪರೀಕ್ಷಿಸಿದಾಗ ಮುಖಗವಸು ರಕ್ಷಣೆ ಇಲ್ಲದ 28.5% ಮೊಲಗಳಲ್ಲಿ ಈ ಬ್ಯಾಕ್ಟೀರಿಯಾ ಕಂಡು ಬಂದರೆ, ಈ ಪ್ರಮಾಣ ಕೇವಲ 1.4% ಮುಖಗವಸಿನ ರಕ್ಷಣೆ ಇದ್ದ ಮೊಲಗಳಲ್ಲಿ ಕಂಡು ಬಂದಿತ್ತು. ಇದರ ಅರ್ಥ ಮುಖಗವಸಿನಿಂದ ದೊರೆಯುವ ರಕ್ಷಣಾ ಸಾಮಥ್ರ್ಯ 95%.

ಇದರ ಜೊತೆಗೆ ಅತ್ಯಂತ ಕಳಪೆ ದರ್ಜೆಯ ಮಾಸ್ಕ್‍ಗಳನ್ನು ಮೆಡಿಕಲ್ ಮಾಸ್ಕ್‍ಗಳ ಜೊತೆಗೆ ತುಲನಾತ್ಮಕ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇಲ್ಲಿ ಮಾಸ್ಕ್ ರಹಿತ ಅಧ್ಯಯನ ನಡೆಸಿಲ್ಲ. ಇನ್‍ಪ್ಲೂಯೆಂಜಾ ಲೈಕ್ ಇಲ್‍ನೆಸ್ (ಐಎಲ್‍ಐ )ಗೆ ಸಂಬಂಧಿಸಿ, ಮುಖಗವಸು ಧರಿಸಿದ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕಿನ ಪ್ರಮಾಣ 2.3%. ಇದು ವೈದ್ಯಕೀಯ ಮುಖಗವಸು ಬಳಸಿದ ಆರೋಗ್ಯ ಕಾರ್ಯಕರ್ತರಲ್ಲಿ 0.7%. ಸದಾ ವೈದ್ಯಕೀಯ ಮುಖಗವಸು ಧರಿಸುತ್ತಿದ್ದವರಲ್ಲಿ ಈ ಪ್ರಮಾಣ 0.2%. ಈ ಪ್ರಯೋಗದ ಫಲಿತಾಂಶವನ್ನು ತಪ್ಪಾಗಿ ವಿಶ್ಲೇಷಿಸಲಾಗಿದೆ. ಏಕೆಂದರೆ ಈ ವಿಶ್ಲೇಷಣೆ ಪ್ರಕಾರ ಮುಖಗವಸು ಧರಿಸಿದವರಲ್ಲಿ ಈ ಸೋಂಕಿನ ಪ್ರಮಾಣ ಹೆಚ್ಚಿರುತ್ತದೆ.

ಆದರೆ ಮುಖಗವಸು ಧರಿಸದವರೊಂದಿಗೆ ಯಾವುದೇ ತುಲನಾತ್ಮಕ ಅಧ್ಯಯನ ನಡೆದಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ, 3% ಸೋಸುವಿಕೆ ಸಾಮಥ್ರ್ಯದ ಬಟ್ಟೆಗಳನ್ನು ಈ ಮುಖಗವಸು ತಯಾರಿಕೆ ಬಳಸಲಾಗಿತ್ತು. ಸಮುದಾಯವೊಂದರಲ್ಲಿ ಮುಖಗವಸು ಬಳಸುವಿಕೆ-ಬಳಸದಿರುವಿಕೆ ಬಗ್ಗೆ, ಅದರ ಅನುಕೂಲ-ಅನಾನುಕೂಲಗಳ ಬಗ್ಗೆ ಇಲ್ಲಿ ಯಾವುದೇ ಅಧ್ಯಯನ ನಡೆದಿಲ್ಲ. ಇನ್ನೂ ಪ್ರಕಟವಾಗದಿರುವ ಅಧ್ಯಯನವೊಂದರ ಪ್ರಕಾರ ಐಎಲ್‍ಐ ಕಳಪೆ ದರ್ಜೆಯ ವೈದ್ಯಕೀಯ ಮುಖಗವಸು ಬಳಸುವುದರಿಂದ ಹರಡುವುದಿಲ್ಲ ಎಂಬ ವಾದಕ್ಕೆ ತದ್ವಿರುದ್ದವಾದ ಫಲಿತಾಂಶ ಪಡೆದಿದೆ. ಆದರೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ನೀತಿ ನಿರೂಪಣೆಗೆ, ಆಧಾರ ಹೊಂದಿದ ಸಂಶೋಧನೆಗಳನ್ನು ಗಣನೆಗೆ ತೆಗೆದುಕೊಂಡರೆ, ಬಟ್ಟೆಯ ಮುಖಗವಸು ದ್ರವಹನಿಗಳನ್ನು ಹಾಗೂ ಮೂಗು-ಬಾಯಿಯ ಮೂಲಕ ಹರಡುವ ಸೋಂಕುಗಳನ್ನು ಕಡಿಮೆಗೊಳಿಸುತ್ತದೆ.

ಇದು ಕೋವಿಡ್ 19 ಉಂಟು ಮಾಡುವ ಎಸ್‍ಎಆರ್‍ಎಸ್-ಸಿಒವಿ-2ಗೆ ಕೂಡಾ ಅನ್ವಯಿಸುತ್ತದೆ. ಸಾರ್ವಜನಿಕರೆಲ್ಲರೂ ಮುಖಗವಸು ಧರಿಸುವುದರಿಂದ ಸೋಂಕಿನಿಂದ ರಕ್ಷಣೆ ದೊರಕುತ್ತದೆ ಎಂಬ ಬಗ್ಗೆ ನೇರ ಸಾಕ್ಷ್ಯಗಳಿಲ್ಲ. ಆದರೆ ಈ ಸೋಂಕಿನ ತೀವ್ರತೆ ಆಧರಿಸಿ ಹಾಗೂ ಅದು ಹರಡದಂತೆ ತಡೆಯಲು ನಾವು ಎದುರಿಸುತ್ತಿರುವ ಸವಾಲನ್ನು ಗಮನಿಸಿದರೆ, ಈ ಬಟ್ಟೆಯ ಮುಖಗವಸಿನಿಂದ ಆಗಬಹುದಾದ ಲಾಭವನ್ನು ಇಲ್ಲಿ ಪ್ರಸ್ತಾವಿಸುತ್ತದೆ. ಏಕೆಂದರೆ ಈ ಮುಖಗವಸು, ಸೋಂಕು ಹರಡುವಿಕೆಯನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆ, ಮುಖ್ಯವಾಗುತ್ತದೆ ಏಕೆಂದರೆ ಅದರಲ್ಲಿ ಏನೂ ಹಾನಿಯಿಲ್ಲ.

ರೋಗಿಗಳಿಂದ ಸೋಂಕಿನ ಹರಡುವಿಕೆ ಹಾಗೂ ಪರಿಸರದ ಮೇಲಿನ ದುಷ್ಪರಿಣಾಮವನ್ನು ಇದರಿಂದ ತಗ್ಗಿಸಬಹುದು. ಇದರ ಜೊತೆಗೆ ಇನ್ನೊಂದು ಭೀತಿಯಿದೆ. ಅದೇನೆಂದರೆ, ಜನ ಸಾಮಾನ್ಯರೆಲ್ಲರೂ, ವೈಯಕ್ತಿಕ ರಕ್ಷಣಾ ಸಾಧನಗಳನ್ನು ಬಳಸಲು ಆರಂಭಿಸುವುದು, ಬಟ್ಟೆಯ ಮುಖಗವಿಸಿನ ತಪ್ಪಾದ ಬಳಕೆ, ಮಿಥ್ಯ ಸುರಕ್ಷತೆಯ ಕಲ್ಪನೆಯಲ್ಲಿ ಕೈ ಶುಚಿತ್ವ ಕಾಪಾಡಿಕೊಳ್ಳದಿರುವುದು ಹೀಗೆ ನಾನಾ ಸವಾಲುಗಳು ನಮ್ಮ ಮುಂದಿವೆ. ಇವೆಲ್ಲವನ್ನೂ ವೈಯಕ್ತಿಕ ರಕ್ಷಣಾ ಉಪಕರಣದ ವಿತರಣೆಯಲ್ಲಿ ನಿಯಂತ್ರಣ, ಸರಿಯಾದ ಮಾಹಿತಿ ರವಾನೆ, ಸಾರ್ವಜನಿಕ ಶಿಕ್ಷಣ, ಹಾಗೂ ಸಾಮಾಜಿಕ ಒತ್ತಡಗಳ ಮೂಲಕ ಸಾಧಿಸಬಹುದಾಗಿದೆ.

ಜನರನ್ನು ಮುಖಗವಸು ಬಳಸುವಂತೆ ಮಾಡುವುದರ ಮೂಲಕ, ಆರೋಗ್ಯ ರಕ್ಷಣೆಗಾಗಿ ಸಾರ್ವಜನಿಕ ಸಂಪನ್ಮೂಲಗಳ ಖರ್ಚನ್ನು ಕಡಿಮೆ ಮಾಡಿ, ವೈಯಕ್ತಿಕ ಜವಾಬ್ದಾರಿಗಳನ್ನು ಹೆಚ್ಚಿಸ ಬಹುದಾಗಿದೆ. ಕಡಿಮೆ ಸಂಪನ್ಮೂಲ ಪ್ರದೇಶಗಳಲ್ಲಿ ಹಾಗೂ ಬಡತನದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಇದು ಅತ್ಯಂತ ಸೂಕ್ತವಾದುದು. ಸಾಕ್ಷ್ಯಾಧಾರಗಳ ಮೂಲಕ ಸೋಂಕು ಹರಡದಂತೆ ತಡೆಯುವ ಮುಖಗವಸನ್ನು ಸ್ಥಳೀಯವಾಗಿ ಉತ್ಪಾದಿಸಿ, ಎಲ್ಲರಿಗೂ ತಲುಪಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.