ETV Bharat / bharat

ಜೀವ ವೈವಿಧ್ಯ ನಾಶ ಮತ್ತು ಹವಾಮಾನ ಬದಲಾವಣೆ.. ಇದೇ ಈ ದಶಕದ ಆಪತ್ತು ..

author img

By

Published : Nov 18, 2020, 11:14 PM IST

ಇಂದು ನಾವು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳ ಪರಿಹಾರ ಶಿಕ್ಷಣದಲ್ಲಿ ಅಡಗಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಇಡೀ ಜಗತ್ತು ಒಗ್ಗಟ್ಟಾಗಬೇಕು ಎನ್ನುವುದು ಹೌದಾದರೂ ಹಾಗಾಗುವುದು ಸಾಧ್ಯವಿಲ್ಲ ಎಂಬುದು ಸಹ ವಾಸ್ತವವಾಗಿದೆ.

ಜೀವ ವೈವಿಧ್ಯ ನಾಶ ಮತ್ತು ಹವಾಮಾನ ಬದಲಾವಣೆ.. ಇದೇ ಈ ದಶಕದ ಆಪತ್ತು ..
ಜೀವ ವೈವಿಧ್ಯ ನಾಶ ಮತ್ತು ಹವಾಮಾನ ಬದಲಾವಣೆ.. ಇದೇ ಈ ದಶಕದ ಆಪತ್ತು ..

2020 ರಿಂದ 2030 ಕ್ಕೆ ಕೊನೆಗೊಳ್ಳುವ ಈ ದಶಕದಲ್ಲಿ ಜಗತ್ತನ್ನು ಕಾಡಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಯುನೆಸ್ಕೊ ಸಮೀಕ್ಷೆಯೊಂದನ್ನು ನಡೆಸಿದೆ. '2030 ರಲ್ಲಿನ ವಿಶ್ವ' ಎಂಬ ಹೆಸರಿನ ಈ ಸಾರ್ವಜನಿಕ ಸಮೀಕ್ಷೆಯನ್ನು ಜಗತ್ತಿನಾದ್ಯಂತ ನಡೆಸಲಾಗಿದೆ. ಪ್ರಸಕ್ತ ದಶಕದಲ್ಲಿ ಜೀವ ವೈವಿಧ್ಯ ನಾಶ ಹಾಗೂ ಹವಾಮಾನ ಬದಲಾವಣೆಯ ವಿಷಯಗಳೇ ಮುಖ್ಯವಾಗಿ ಜಗತ್ತನ್ನು ಕಾಡಲಿವೆ ಎಂದು ಬಹುತೇಕ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೇ ದಿಂದ ಸೆಪ್ಟೆಂಬರ್​ವರೆಗೆ ನಡೆಯಿತು ಸಮೀಕ್ಷೆ

ವಿಶ್ವ-2030 ಸಮೀಕ್ಷೆಯು 2020ರ ಮೇ ತಿಂಗಳಿಂದ ಸೆಪ್ಟೆಂಬರ್​ವರೆಗೆ ನಡೆಯಿತು. ಈ ದಶಕದ ಪ್ರಮುಖ ಸವಾಲುಗಳ ಬಗೆಗಿನ ಈ ಸಮೀಕ್ಷೆಯಲ್ಲಿ 15 ಸಾವಿರ ಜನ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಸ್ಯೆಗಳನ್ನು ಅರಿತುಕೊಳ್ಳಲು ಈ ಸಮೀಕ್ಷೆ ಸಹಕಾರಿಯಾಗಿದೆ.

ಹಿಂಸಾಚಾರ, ಅಸಮಾನತೆ, ಆಹಾರ ಕೊರತೆ .. ಇನ್ನೂ ಇವೆ ಸಮಸ್ಯೆಗಳು

ಹವಾಮಾನ ಬದಲಾವಣೆ, ಜೀವ ವೈವಿಧ್ಯ ನಾಶ, ಹಿಂಸಾಚಾರ, ಗಲಭೆಗಳು, ಯುದ್ಧ, ಅಸಮಾನತೆ, ಆಹಾರ ಕೊರತೆ, ನೀರು, ಮನೆ ಇವು ಬರುವ 10 ವರ್ಷಗಳಲ್ಲಿನ ಪ್ರಮುಖ ಸವಾಲುಗಳಾಗಿವೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಜನತೆ ಹೇಳಿದ್ದಾರೆ. ಇಂದು ನಾವು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳ ಪರಿಹಾರ ಶಿಕ್ಷಣದಲ್ಲಿ ಅಡಗಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಇಡೀ ಜಗತ್ತು ಒಗ್ಗಟ್ಟಾಗಬೇಕು ಎನ್ನುವುದು ಹೌದಾದರೂ ಹಾಗಾಗುವುದು ಸಾಧ್ಯವಿಲ್ಲ ಎಂಬುದು ಸಹ ವಾಸ್ತವವಾಗಿದೆ.

ಪರಿಸರ ಸ್ನೇಹಿ ಕ್ರಮಗಳು, ಸಹಕಾರ ಅಗತ್ಯ

ಹವಾಮಾನ ಬದಲಾವಣೆ, ಜೀವ ವೈವಿಧ್ಯ ನಾಶ, ಆಹಾರ ಕೊರತೆಯಂಥ ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಪರಿಸರ ಸ್ನೇಹಿ ಕ್ರಮಗಳಲ್ಲಿ ಮತ್ತಷ್ಟು ಬಂಡವಾಳ ಹೂಡಿಕೆ ಮಾಡುವುದು ಅಗತ್ಯವಾಗಿದೆ. ಜೊತೆಗೆ ಸುಸ್ಥಿರ ಅಭಿವೃದ್ಧಿಗಾಗಿ ಸೂಕ್ತ ಶಿಕ್ಷಣ, ಜಾಗತಿಕ ಸಹಕಾರ ಮತ್ತು ವಿಜ್ಞಾನ ಕ್ಷೇತ್ರದಲ್ಲಿನ ಮಾಹಿತಿ ಹಂಚಿಕೊಳ್ಳುವಿಕೆ ಇವತ್ತು ಬಹಳ ಅವಶ್ಯಕ.

ಭಯೋತ್ಪಾದನೆ ಬಹುದೊಡ್ಡ ಸವಾಲು

ಧಾರ್ಮಿಕ ಮೂಲಭೂತವಾದ ಹಾಗೂ ಅದರಿಂದ ಹುಟ್ಟುವ ಭಯೋತ್ಪಾದನೆಯ ಬಗ್ಗೆ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಯುದ್ಧ, ಪರಮಾಣು ಅಸ್ತ್ರಗಳ ಬಳಕೆ ಹಾಗೂ ಕೆಲ ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಸಹ ಪ್ರಮುಖ ಸಮಸ್ಯೆಗಳಾಗಿ ಕಾಡಲಿವೆ.

ತಾರತಮ್ಯ ಮತ್ತು ಅಸಮಾನತೆ

ಮಹಿಳೆಯರು ಮತ್ತು ಅಲ್ಪಸಂಖ್ಯಾತರ ವಿರುದ್ಧದ ಹಿಂಸೆಯಲ್ಲಿ ಹೆಚ್ಚಳ, ದ್ವೇಷದ ಮಾತುಗಳು, ಆನ್ಲೈನ್ ಕಿರುಕುಳ, ಲೈಂಗಿಕ ಅಲ್ಪಸಂಖ್ಯಾತರ ವಿರುದ್ಧ ಶೋಷಣೆಗಳು ಸಹ ಈ ದಶಕದ ಪ್ರಮುಖ ಸವಾಲುಗಳಾಗಿರಲಿವೆ.

ಆಹಾರ ಮತ್ತು ವಸತಿಯ ಕೊರತೆ

ಈ ದಶಕದಲ್ಲಿ ಕುಡಿಯುವ ನೀರಿನ ಕೊರತೆಯು ಬಹುವಾಗಿ ಜಗತ್ತನ್ನು ಕಾಡಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇದರ ಜೊತೆಗೆ ಆಹಾರ ಮತ್ತು ವಸತಿಯ ಕೊರತೆಗಳು ಸಹ ಬಾಧಿಸಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.