ETV Bharat / bharat

ಡಬಲ್ ಮರ್ಡರ್​ ಪ್ರಕರಣ: ಆರೋಪಿ 9ನೇ ತರಗತಿ ವಿದ್ಯಾರ್ಥಿಯ ಬಂಧನ - ಗೋರಖ್​ಪುರ ಕ್ರೈಮ್​ ಸುದ್ದಿ

ಗೋರಖ್​ಪುರದ ಬರ್ಗದ್ವಾ ಗ್ರಾಮದ ಗೊರ್ರಾ ನದಿಯ ಬಳಿ ಮೇ 24 ರಂದು ನಡೆದಿದ್ದ ಇಬ್ಬರು ಯುವಕರ ಹತ್ಯೆಗೆ ಸಂಬಂಧಪಟ್ಟಂತೆ ಒಂಬತ್ತನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

Class 9 student held for double murder in UP
ಆರೋಪಿ ಒಂಬತ್ತನೆ ತರಗತಿ ವಿದ್ಯಾರ್ಥಿಯ ಬಂಧನ
author img

By

Published : Jun 12, 2020, 4:29 PM IST

ಗೋರಖ್‌ಪುರ(ಉತ್ತರ ಪ್ರದೇಶ): ಜಿಲ್ಲೆಯಲ್ಲಿ ನಡೆದ ಡಬಲ್ ಮರ್ಡರ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿ ಒಂಬತ್ತನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ಮೇ 24 ರಂದು ಬರ್ಗದ್ವಾ ಗ್ರಾಮದ ಗೊರ್ರಾ ನದಿಯ ಬಳಿ ಕೃಷ್ಣ (25) ಮತ್ತು ದಿವಾಕರ್ (23) ಎಂಬ ಇಬ್ಬರು ಸೋದರ ಸಂಬಂಧಿಗಳನ್ನು 9 ಎಂಎಂ ಪಿಸ್ತೂಲಿನಿಂದ ಗುಂಡಿಕ್ಕಿ ಕೊಲ್ಲಲಾಗಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಈ ಹಿಂದೆ ಒಂಬತ್ತು ಜನರನ್ನು ಬಂಧಿಸಿದ್ದರು. ಇದೀಗ ಪ್ರಾಥಮಿಕ ತನಿಖೆಯ ನಂತರ ಪ್ರಕರಣದ ಮತ್ತೋರ್ವ ಆರೋಪಿ ಒಂಬತ್ತನೆ ತರಗತಿಯ ವಿದ್ಯಾರ್ಥಿಯನ್ನು ದುಬಿಯಾರಿ ಸೇತುವೆ ಬಳಿ ಬಂಧಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 147, 148, 149, 302, 120 ಬಿ ಮತ್ತು 216 ರಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.

ಆರೋಪಿಯನ್ನು ಜೈಲಿಗೆ ಕರೆದೊಯ್ಯುವ ಮೊದಲು ಪೊಲೀಸರು ಮಾಧ್ಯಮಗಳ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಆತನ ವಯಸ್ಸು 17 ಎಂದು ಹೇಳಲಾಗಿತ್ತು. ಆದರೆ ಆರೋಪಿ ಸುಮಾರು 20 ವರ್ಷದವನಾಗಿರಬಹದು. ಆತ ಅಪ್ರಾಪ್ತ ಎಂದು ಖಾತ್ರಿ ಪಡಿಸಲು ಕುಟುಂಬಸ್ಥರ ಬಳಿ ಯಾವುದೇ ಪುರಾವೆಗಳು ಇಲ್ಲವೆಂದು ಜಹಂಘಾ ಠಾಣೆಯ ಅಧಿಕಾರಿ ಅನಿಲ್ ಕುಮಾರ್​ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಎರಡು ಗ್ರೂಪ್​ ರಚಿಸಿದ್ದ​ ಇವರು, ಪರಸ್ಪರ ಫೋಟೋ ಅಪ್ಲೋಡ್​ ಮಾಡುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಇಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಅರವಿಂದ್ ಪಾಂಡೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.