ETV Bharat / bharat

ತೃಪ್ತಿ ನೀಡದ ಮೋದಿ ಸರ್ಕಾರದ ವಿರುದ್ಧ ಜನಾಂದೋಲನಕ್ಕೆ ನಿಂತ ರೈತಪರ ಸಂಘಟನೆಗಳು.. - ಕಾರ್ಮಿಕ ಸಂಘಗಳು

ಎಲ್ಲರಿಗೂ ಉಚಿತ ಸಾರ್ವತ್ರಿಕ ಆರೋಗ್ಯ ಸೇವೆ, ಎಲ್ಲರಿಗೂ ಮುಂದಿನ ಆರು ತಿಂಗಳುಗಳ ಕಾಲ ತಿಂಗಳಿಗೊಮ್ಮೆ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಆಹಾರ ಧಾನ್ಯ, ಎಂಎನ್‌ಆರ್‌ಇಜಿಎ ಯೋಜನೆಯಡಿ 200 ದಿನಗಳ ಖಾತರಿ ಕೆಲಸ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನಾಂದೋಲನ.

CITU, AIKS and AIAWU announce joint movement against Modi government
ಸಂಗ್ರಹ ಚಿತ್ರ
author img

By

Published : Jun 12, 2020, 10:04 PM IST

ನವದೆಹಲಿ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಭಾರತೀಯ ಕಾರ್ಮಿಕ ಸಂಘಗಳ ಕೇಂದ್ರ, ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ ಮತ್ತು ಅಖಿಲ ಭಾರತ ಕಿಸಾನ್ ಸಭೆ ಜಂಟಿ ಆಂದೋಲನವನ್ನು ಪ್ರಕಟಿಸಿವೆ.

ಮೂರೂ ಸಂಘಟನೆಗಳ ಮುಖಂಡರು ಇಂದು ನವದೆಹಲಿಯಲ್ಲಿ ಜಂಟಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಾ, ಅಗಸ್ಟ್‌ 9ರಂದು ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಿಂದ ಕೇಂದ್ರ ಸರ್ಕಾರದ ವಿರುದ್ಧ ಆಂದೋಲನ ಪ್ರಾರಂಭಿಸುವ ಮೂಲಕ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ. ಆಂದೋಲನದ ಪ್ರತೀಕವಾಗಿ ಮೂರೂ ಸಂಘಟನೆಗಳು ಭಾರತದ ರಾಷ್ಟ್ರಪತಿಗೆ 20,000 ಪತ್ರಗಳನ್ನು ಕಳುಹಿಸಲಿವೆ ಎಂದು ತಿಳಿಸಿರುವ ಮುಖಂಡರು, ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.

ಎಲ್ಲರಿಗೂ ಉಚಿತ ಸಾರ್ವತ್ರಿಕ ಆರೋಗ್ಯ ಸೇವೆ, ಎಲ್ಲರಿಗೂ ಮುಂದಿನ ಆರು ತಿಂಗಳುಗಳ ಕಾಲ ತಿಂಗಳಿಗೊಮ್ಮೆ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಆಹಾರ ಧಾನ್ಯ, ಎಂಎನ್‌ಆರ್‌ಇಜಿಎ ಯೋಜನೆಯಡಿ 200 ದಿನಗಳ ಖಾತರಿ ಕೆಲಸ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಂದೋಲನವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಕೇಂದ್ರದ ಎಪಿಎಂಸಿ ಕಾಯ್ದೆ ತಿದ್ದುಪಿಡಿಯಿಂದ ದೊಡ್ಡಮಟ್ಟದ ಕಾರ್ಪೊರೇಟ್ ಸಂಸ್ಥೆಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ರೈತರು ಕಾರ್ಪೊರೇಟರ್​ಗಳ ಗುಲಾಮರಾಗುತ್ತಾರೆ ಎಂದು ಅಭಿಪ್ರಾಯಪಟ್ಟಿರುವ ಮೂರೂ ಸಂಘಟನೆಗಳ ಮುಖಂಡರು, ಕೊರೊನಾ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಕೇಂದ್ರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಆರ್​ಎಸ್​ಎಸ್​ ನೇತೃತ್ವದ ಪಡೆಗಳು ಕೊರೊನಾ ರೋಗವನ್ನು ಕೋಮುವಾದಿ ಹಬ್ಬಿಸಲು ಬಳಸುತ್ತಿದೆ ಎಂದು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.