ಮುಂಬೈ: ಮುಂಬೈ ವಿಮಾನ ನಿಲ್ದಾಣದ ಮುಖಾಂತರ ಹಾಂಕಾಂಗ್‌ಗೆ ಹೊರಟಿದ್ದ ಪ್ರಯಾಣಿಕನಿಂದ ಅತೀ ಹೆಚ್ಚು ಮೌಲ್ಯದ ದಾಖಲೆರಹಿತ ವಿದೇಶಿ ಕರೆನ್ಸಿಯನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಎಪಿ ಮೆಹ್ತಾ ಎಂಬ ವ್ಯಕ್ತಿಯಿಂದ ಸುಮಾರು 99,550 ಅಮೆರಿಕನ್ ಡಾಲರ್ ಕರೆನ್ಸಿ ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 71 ಲಕ್ಷ ರೂ. ಗಳನ್ನು ಭದ್ರತಾ ಪರಿಶೀಲನೆ ವೇಳೆ ಸಿಐಎಸ್ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಎಪಿ ಮೆಹ್ತಾ ಇದೇ ಸೆಪ್ಟೆಂಬರ್ 19 ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕವಾಗಿ ಹಾಕಾಂಗ್ಗೆ ತೆರಳಲು ಸಜ್ಜಾಗಿದ್ದರು. ಈ ಸಂದರ್ಭ ಸೆಕ್ಯೂರಿಟಿ ಚೆಕ್ಕಿಂಗ್ ನಡೆಸಿದಾಗ ಆತನ ಬಳಿ ಇದ್ದ ಬ್ಯಾಗ್ನಲ್ಲಿ ಇಷ್ಟು ದೊಡ್ಡ ಮೊತ್ತದ ದಾಖಲೆರಹಿತ ವಿದೇಶಿ ಹಣ ದೊರೆತಿದೆ.
ಕರೆನ್ಸಿಯನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.