ನವದೆಹಲಿ: ಸರ್ಕಾರದ ನಿಯಂತ್ರಣ ಮತ್ತು ಸೆನ್ಸಾರ್‌ಶಿಪ್‌ಗೆ ಹೆಸರುವಾಸಿಯಾದ ಚೀನಾದ ಸಾಮಾಜಿಕ ಮಾಧ್ಯಮವು ಗಡಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಮತ್ತು ಭಾರತದ ಅಧಿಕೃತ ಹೇಳಿಕೆಗಳನ್ನು ತೆಗೆದುಹಾಕಿದೆ.
ದೇಶದ ಗಡಿ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿಯವರ ಜೂನ್ 18ರಂದು ನೀಡಿದ್ದ ಹೇಳಿಕೆಗಳು ವೀಚಾಟ್(WeChat) ಬಳಕೆದಾರರಿಗೆ ಸಿಗುತ್ತಿಲ್ಲ.
ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಈ ಬಗ್ಗೆ ಮಾತನಾಡಿದ ಮೋದಿ, ಭಾರತವು ಶಾಂತಿಯನ್ನು ಬಯಸುತ್ತದೆಯಾದರೂ, ಪ್ರಚೋದಿಸಿದಾಗ ಸೂಕ್ತವಾದ ಉತ್ತರವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಹೇಳಿದರು.
ಇತ್ತ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್ ಜೂನ್ 18ರಂದು ನೀಡಿದ್ದ ಹೇಳಿಕೆಯನ್ನು ವೀಚಾಟ್ನಿಂದ ಡಿಲೀಟ್ ಮಾಡಲಾಗಿದೆ. ಸಿನಾ ವೀಬೊ ಸೋಷಿಯಲ್ ಮೀಡಿಯಾದಲ್ಲೂ ಇಬ್ಬರ ಹೇಳಿಕೆಯನ್ನು ಅಳಿಸಿಹಾಕಲಾಗಿದೆ.
2015 ರಲ್ಲಿ ಚೀನಾ ಭೇಟಿಗೆ ಮುಂಚಿತವಾಗಿ, ಮೋದಿ ಅವರು ಸಿನಾ ವೀಬೊದಲ್ಲಿ ಖಾತೆಯನ್ನು ತೆರೆದಿದ್ದರು. ಇದನ್ನು ಚೀನಾದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ಗೆ ಸಮಾನವೆಂದು ಪರಿಗಣಿಸಲಾಗಿದೆ.