ETV Bharat / bharat

ಯಾವುದೇ ಲಸಿಕೆ ಸಂಶೋಧಿಸಿದರೂ ಜಾಗತಿಕ ಮಾರುಕಟ್ಟೆಗೆ: ಚೀನಾ ಸಚಿವರ ಸ್ಪಷ್ಟನೆ - ವಾಂಗ್​ ಝಿಗ್ಯಾಂಗ್​

ಯಾವುದೇ ಲಸಿಕೆ ಕಂಡುಹಿಡಿದರೂ ಕೂಡಾ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಚೀನಾ ಸಚಿವ ವಾಂಗ್​ ಝಿಗ್ಯಾಂಗ್​ ಸ್ಪಷ್ಟನೆ ನೀಡಿದ್ದಾರೆ.

Wang Zhigang
ವಾಂಗ್​ ಝಿಗ್ಯಾಂಗ್​
author img

By

Published : Jun 8, 2020, 11:49 AM IST

ಬೀಜಿಂಗ್​ (ಚೀನಾ): ಕೊರೊನಾಗೆ ಲಸಿಕೆ ಕಂಡು ಹಿಡಿದರೆ ಅದನ್ನು ಜಾಗತಿಕ ಮಾರುಕಟ್ಟೆಗೆ ನೀಡಲಾಗುತ್ತದೆ ಎಂದು ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವಾಂಗ್​ ಝಿಗ್ಯಾಂಗ್​ ಸ್ಪಷ್ಟಪಡಿಸಿದ್ದಾರೆ.

ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ವ್ಯಾಕ್ಸಿನ್​ ತಯಾರಿಕೆಯಲ್ಲಿ ಚೀನಾ ಪ್ರಯತ್ನಿಸುತ್ತಿದ್ದು, ಅಂತಾರಾಷ್ಟ್ರೀಯ ಸಹಕಾರ ನೀಡುತ್ತಿದೆ ಎಂದರು. ಇದರ ಜೊತೆಗೆ ಕೊರೊನಾ ವೈರಸ್​ಗೆ ಚೀನಾ ನಿಯಂತ್ರಿಸಿದ ಬಗ್ಗೆ ಮಾಹಿತಿ ನೀಡಿದರು.

ಈ ಹಿಂದೆ ಕೆಲ ಸುದ್ದಿ ಮಾಧ್ಯಮಗಳು ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಕೊರೊನಾ ವಿಚಾರವಾಗಿ ಕೆಲವೊಂದು ವಿಚಾರಗಳನ್ನು ಬಚ್ಚಿಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿ ಮಾಡಿದ್ದವು.

ಅದಾದ ನಂತರ ಚೀನಾ ವೈರಸ್​ನ ಜೀನೋಮ್​ ಹಾಗೂ ಇತರ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೊಡನೆ ಹಂಚಿಕೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.