ಸಾಂಕ್ರಾಮಿಕ ರೋಗ ಕೊರೊನಾ ವೈರಸ್ಗೆ ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 7,000 ದಾಟಿದೆ, 145 ದೇಶಗಳಲ್ಲಿ 1,81,587 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಭಯದ ವಾತಾವರಣ ಸೃಷ್ಟಿಸುತ್ತಿದೆ. ಆಯಾ ದೇಶದ ಸರ್ಕಾರಗಳು ನಿಯಂತ್ರಣ ಕ್ರಮಗಳನ್ನು ವೇಗವಾಗಿ ಕೈಗೊಂಡಿವೆ.
ಚೀನಾದಲ್ಲಿ ಹೆಚ್ಚು ಬಲಿ:
ಕೊರೊನಾ ಕೇಂದ್ರ ಬಿಂದುವಾಗಿರುವ ಚೀನಾ ದೇಶದಲ್ಲಿ ಇಲ್ಲಿಯವರೆಗೆ 3,230 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 80,045 ಮಂದಿ ಈ ವೈರಸ್ನಿಂದ ಬಳಲುತ್ತಿದ್ದಾರೆ. ಸುಮಾರು 68,777 ಜನ ಈ ಕೊರೊನಾ ವೈರಸ್ನಿಂದ ಮುಕ್ತರಾಗಿದ್ದಾರೆ.
ಎರಡನೇ ಸ್ಥಾನದಲ್ಲಿದೆ ಇಟಲಿ:
ಚೀನಾ ಹೊರತುಪಡಿಸಿ ಉಳಿದ ದೇಶಗಳಲ್ಲಿ ಒಟ್ಟು 1,01,544 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದರೆ, 3,909 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಇಟಲಿ ಎರಡನೇ ಸ್ಥಾನದಲ್ಲಿದ್ದರೆ, ಇರಾನ್ ಮೂರನೇ ಸ್ಥಾನದಲ್ಲಿದೆ.
ಭಾರತದಲ್ಲಿ ಕೊರೊನಾ ವೈರಸ್ಗೆ ಮೂವರು ಸಾವನ್ನಪ್ಪಿದ್ದಾರೆ. 26 ದೇಶಗಳಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.