ನವದೆಹಲಿ: ಚೀನಾದ ಪಡೆಗಳು ತಮ್ಮ ಫಾರ್ವರ್ಡ್ ಪೋಸ್ಟ್‌ಗಳಲ್ಲಿ ಧ್ವನಿವರ್ಧಕಗಳನ್ನು ಸ್ಥಾಪಿಸಿದ್ದು, ಪಂಜಾಬಿ ಗೀತೆಗಳನ್ನು ಹಾಕಲಾಗುತ್ತಿದೆ.
ಪೀಪಲ್ಸ್ ಲಿಬರೇಶನ್ ಆರ್ಮಿ ಸ್ಥಾನಗಳನ್ನು ಕಡೆಗಣಿಸಿ ಭಾರತೀಯ ಪಡೆಗಳು ಫಿಂಗರ್ 4 ಬಳಿಯ ಎತ್ತರದ ಪ್ರದೇಶದಲ್ಲಿ ವೀಕ್ಷಣಾ ಟವರ್ ಸ್ಥಾಪಿಸಿದ ಹಿನ್ನೆಲೆಯಲ್ಲಿ ಚೀನಾ ಸೇನೆ ಈ ರೀತಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಚೀನಾದ ಸೈನ್ಯವು ಧ್ವನಿವರ್ಧಕಗಳನ್ನು ಹಾಕಿರುವ ಪೋಸ್ಟ್ ಭಾರತೀಯ ಸೈನಿಕರಿಂದ 24x7 ನಿರಂತರ ವೀಕ್ಷಣೆಯಲ್ಲಿದೆ. ನಮ್ಮ ಸೈನ್ಯದ ಗಮನವನ್ನು ಬೇರೆಡೆಗೆ ಸೆಳೆಯಲು ಅಥವಾ ಬಹುಶಃ ಒತ್ತಡವನ್ನು ನಿವಾರಿಸಲು ಚೀನಿಯರು ಇಂತಹ ನಾಟಕದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಸೆ. 8ರಂದು ಫಿಂಗರ್ 4 ಬಳಿ ಉಭಯ ಕಡೆಯ ಪಡೆಗಳು 100ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿಕೊಂಡಿದ್ದವು. ಕಳೆದ 20 ದಿನಗಳಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತದ ಯೋಧರು ಮತ್ತು ಚೀನಾ ಸೈನಿಕರ ನಡುವೆ ಕನಿಷ್ಠ ಮೂರು ಸಲ ಗುಂಡಿನ ದಾಳಿ ನಡೆದಿದೆ.