ETV Bharat / bharat

ವಿಶೇಷ ಅಂಕಣ: ದೇಶದ ಮಕ್ಕಳ ಬಾಲ್ಯ ಸುರಕ್ಷಿತ ಕೈಗಳಲ್ಲಿದೆಯೇ? - ವಿಶ್ವ ಆರೋಗ್ಯ ಸಂಸ್ಥೆ

ಇಂದಿನ ಮಕ್ಕಳ ಸುರಕ್ಷಿತ ಭವಿಷ್ಯ ಖಾತರಿಪಡಿಸುವುದಕ್ಕಾಗಿ ಜಗತ್ತಿನ ಎಲ್ಲ ದೇಶಗಳು ತಲಾ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು 2020ರೊಳಗೆ ತಗ್ಗಿಸಲು ಸಮರ್ಥವೂ ಆಗಿವೆ ಎಂಬ ಅಂಶವನ್ನೂ ಅಧ್ಯಯನ ವರದಿಯೊಂದು ಅಂದಾಜಿಸಿದೆ.

children
ಮಕ್ಕಳು
author img

By

Published : Feb 27, 2020, 8:56 PM IST

ಶೇಕಡಾ 23ರಷ್ಟು ನವಜಾತ ಶಿಶುಗಳ ಸಾವಿಗೆ ಪರಿಸರ ಮಾಲಿನ್ಯವೇ ಕಾರಣ ಎಂಬ ವಿಶ್ವ ಬ್ಯಾಂಕ್‌ನ ದೃಢೀಕರಣ ಸಮಾಜದ ಹಲವು ವರ್ಗಗಳಿಗೆ ಆಘಾತ ಉಂಟು ಮಾಡಿದೆ. ತಮ್ಮ ಮಕ್ಕಳ ಆರೋಗ್ಯ, ಪರಿಸರ ಅಥವಾ ಭವಿಷ್ಯದ ರಕ್ಷಣೆಗೆ ಯಾವೊಂದು ದೇಶವೂ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಮಾಡಿಲ್ಲ ಎಂಬ ಇತ್ತೀಚಿನ ವರದಿಗಳು ಬಹಳಷ್ಟು ಜನರಿಗೆ ಆಘಾತ ತಂದಿವೆ.

ವಿಶ್ವ ಆರೋಗ್ಯ ಸಂಸ್ಥೆ (ವರ್ಲ್ಡ್‌ ಹೆಲ್ತ್‌ ಆರ್ಗನೈಸೇಷನ್‌), ಯುನಿಸೆಫ್‌ ಮತ್ತು ದಿ ಲಾನ್ಸೆಟ್‌ ಸಂಸ್ಥೆಗಳು ನಡೆಸಿದ ವಿಸ್ತೃತ ಅಧ್ಯಯನದ ಪ್ರಕಾರ, ಇತರ ದೇಶಗಳೊಂದಿಗೆ ಹೋಲಿಸಿದಾಗ ನಾರ್ವೆ, ದಕ್ಷಿಣ ಕೊರಿಯಾ, ನೆದರ್‌ಲ್ಯಾಂಡ್‌ ಮತ್ತು ಫ್ರಾನ್ಸ್‌ನಂತಹ ದೇಶಗಳು ನವಜಾತ ಶಿಶುಗಳ ಯೋಗಕ್ಷೇಮದಲ್ಲಿ ಉತ್ತಮ ಸಾಧನೆ ಮಾಡಿವೆ. ಮಧ್ಯ ಆಫ್ರಿಕಾ, ಸೊಮಾಲಿಯಾ ಮತ್ತು ಚಾಡ್‌ನಂತಹ ದೇಶಗಳು ಮಕ್ಕಳ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ತೀರಾ ಕಳಪೆ ಸಾಧನೆ ಮಾಡಿದ ದೇಶಗಳ ಪೈಕಿ ಅಗ್ರಸ್ಥಾನದಲ್ಲಿವೆ. ವಿಶ್ವ ಸಂಸ್ಥೆಯ ಪಟ್ಟಿಯಲ್ಲಿ ಭಾರತ 131ನೇ ಸ್ಥಾನದಲ್ಲಿದ್ದು, ಸಮೀಕ್ಷೆಗೆ ಒಳಪಟ್ಟಿರುವ 180 ದೇಶಗಳ ಪೈಕಿ, ಮಕ್ಕಳ ಉಳಿವು ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಉತ್ತಮ ಅವಕಾಶ ಹೊಂದಿದೆ.

ಇಂದಿನ ಮಕ್ಕಳ ಸುರಕ್ಷಿತ ಭವಿಷ್ಯವನ್ನು ಖಾತರಿಪಡಿಸುವುದಕ್ಕಾಗಿ ಜಗತ್ತಿನ ಎಲ್ಲ ದೇಶಗಳು ತಲಾ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು 2020ರೊಳಗೆ ತಗ್ಗಿಸಲು ಸಮರ್ಥವೂ ಆಗಿವೆ ಎಂಬ ಅಂಶವನ್ನೂ ಈ ಅಧ್ಯಯನ ವರದಿ ಅಂದಾಜಿಸಿದೆ. ಅಲ್ಬೇನಿಯಾ, ಆರ್ಮೇನಿಯಾ, ಗ್ರೆನಡಾ, ಜೋರ್ಡಾನ್, ಮಾಲ್ಡೊವಾ, ಶ್ರೀಲಂಕಾ, ಟುನೇಷಿಯಾ, ಉರುಗ್ವೆ ಮತ್ತು ವಿಯೆಟ್ನಾಂನಂತಹ ದೇಶಗಳು ಈ ಪಟ್ಟಿಗೆ ಸೇರಲು ಸಮರ್ಥವಾಗಬಲ್ಲವು. ಇನ್ನು ಭಾರತದಂತಹ ದೇಶವು ಮೇಲ್ಕಾಣಿಸಿದ ದೇಶಗಳ ಮಟ್ಟಕ್ಕೆ ತಲುಪಬೇಕೆಂದರೆ, ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಕಸರತ್ತು ನಡೆಸಬೇಕಿದೆ ಎಂಬ ಅಂಶವನ್ನೂ ವರದಿಯ ಸಾರಾಂಶ ಹೇಳಿದೆ.

ಸದ್ಯ ಕಳಪೆಯಾಗಿರುವ, ಪರಿಸರಕ್ಕೆ ಸಂಬಂಧಿಸಿದ ಸಾಧನೆ ಇನ್ನೂ ಉತ್ತಮಗೊಳ್ಳುವ ಅವಕಾಶಗಳಿವೆ. ಸದ್ಯ 39.7 ಗಿಗಾ ಟನ್‌ಗಳಷ್ಟಿರುವ ಇಂಗಾಲದ ಹೊರಸೂಸುವಿಕೆ ಪ್ರಮಾಣವನ್ನು ಮುಂದಿನ ಹತ್ತು ವರ್ಷಗಳಲ್ಲಿ 22.8 ಗಿಗಾ ಟನ್‌ಗೆ ಇಳಿಸಿದರೆ ಮಾತ್ರ ಪರಿಸ್ಥಿತಿ ಉತ್ತಮಗೊಳ್ಳಬಹುದು. ಇದನ್ನು ಸಾಧ್ಯವಾಗಿಸಲು ಅರಣ್ಯನಾಶ ತಡೆಯುವುದು, ಇಂಗಾಲ ಉತ್ಪತ್ತಿ ಮಾಡುವ ಇಂಧನಗಳ ಬಳಕೆಯನ್ನು ತಗ್ಗಿಸುವುದು, ಆಹಾರ ನಷ್ಟವಾಗುವುದನ್ನು ಕಡಿತಗೊಳಿಸುವುದು ಹಾಗೂ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವಂತಹ ಬಹುಮುಖಿ ತಂತ್ರಗಳನ್ನು ಜಗತ್ತಿನ ಎಲ್ಲ ದೇಶಗಳು ಜಾರಿಗೊಳಿಸಬೇಕಾದ ಅವಶ್ಯಕತೆಯಿದೆ.

ಸುರಕ್ಷಿತ ಮತ್ತು ಗೌರವಪೂರ್ಣ ಜೀವನವನ್ನು ಹೊಂದುವ ಭವಿಷ್ಯದ ತಲೆಮಾರಿನ ಹಕ್ಕುಗಳನ್ನು ಎತ್ತಿ ಹಿಡಿಯುವ ವಾಗ್ದಾನವನ್ನು ವಿಶ್ವ ಸಂಸ್ಥೆಯು ಮೂರು ದಶಕಗಳ ಹಿಂದೆಯೇ ಮಾಡಿದೆ. ಇದರ ಪರಿಣಾಮಗಳನ್ನ ಅಂದಾಜಿಸಬೇಕು ಎಂದಿದೆ. ವಿವಿಧ ದೇಶಗಳಲ್ಲಿರುವ ಪರಿಸ್ಥಿತಿಗಳನ್ನು ನಾವು ಆಳವಾಗಿ ವಿಶ್ಲೇಷಣೆಗೆ ಒಳಪಡಿಸಬೇಕಾಗುತ್ತದೆ. ಒಂದು ತಲೆಮಾರಿನ ಹಿಂದಕ್ಕೆ ಹೋಗಿ ನೋಡುವುದಾದರೆ, ಆಗ ಒಂದು ಲಕ್ಷ ನವಜಾತ ಶಿಶುಗಳ ಪೈಕಿ ಪ್ರತಿ ವರ್ಷ 44 ಮಕ್ಕಳು ಮೃತಪಡುತ್ತಿದ್ದವು, 9.5 ಕೋಟಿ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದರು ಹಾಗೂ 11.5 ಕೋಟಿ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಹಿಂದಿನ ಇಂತಹ ಪರಿಸ್ಥಿತಿಗೆ ಹೋಲಿಸಿದರೆ ಈಗಿನ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಅದಾಗ್ಯೂ, ಎರಡು ಅಂಶಗಳನ್ನು, ಹವಾಮಾನ ಬದಲಾವಣೆ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ವಿವೇಚನಾಹೀನ ವಾಣಿಜ್ಯೀಕರಣ ಅಂಶವನ್ನು ಕೇಂದ್ರೀಕರಿಸಿಕೊಂಡು ನೋಡುವುದಾದರೆ. ಈಗಿನ ತಲೆಮಾರಿನ ಶಿಶುಗಳ ಭವಿಷ್ಯ ಮಸುಕಾಗಿ ಗೋಚರಿಸುತ್ತದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನ, ಆಹಾರ ಉತ್ಪಾದನೆ ಮತ್ತು ಇಳುವರಿ ಕುಸಿತವು ಜಗತ್ತನ್ನು ಪೌಷ್ಠಿಕಾಂಶಗಳ ಕೊರತೆಯತ್ತ ಕೊಂಡೊಯ್ಯುತ್ತಿದೆ.

ಉಷ್ಣವಲಯದ ರೋಗಗಳಾದ ಡೆಂಗ್ಯೂ ಮಲೇರಿಯಾ ಮತ್ತು ಕಾಲರಾಗಳು ಮತ್ತೆ ಹೆಚ್ಚುತ್ತಿವೆ. ಫಾಸ್ಟ್ ಫುಡ್, ತಂಪು ಪಾನೀಯಗಳು, ತಂಬಾಕು ಮತ್ತು ಅಲ್ಕೋಹಾಲ್‌ನಂತಹ ವಸ್ತುಗಳಿಗೆ ಸಂಬಂಧಿಸಿದಂತೆ ಉದ್ಭವವಾಗಿರುವ ವಿಪರೀತ ವಾಣಿಜ್ಯ ಅಭಿರುಚಿಗಳು ಪ್ರಸಕ್ತ ತಲೆಮಾರಿನ ಮಕ್ಕಳ ಮೇಲೆ ಹಿಂದೆಂದೂ ಕಾಣದ ಹಾಗೂ ಅನಪೇಕ್ಷಿತವಾದ ಪರಿಣಾಮಗಳನ್ನು ಉಂಟು ಮಾಡುತ್ತಿವೆ. 1975ರಲ್ಲಿ ಮಕ್ಕಳು ಹಾಗೂ ಹದಿವಯಸ್ಕರಲ್ಲಿ 1.10 ಕೋಟಿಯಷ್ಟಿದ್ದ ಸ್ಥೂಲಕಾಯದ ಪ್ರಕರಣಗಳ ಸಂಖ್ಯೆ 2016ರಲ್ಲಿ 12.40 ಕೋಟಿಗೆ ಏರಿಕೆಯಾಗಿದೆ. ಶ್ರೀಮಂತ ಮತ್ತು ಬಡ ದೇಶಗಳೆನ್ನದೇ ಸ್ಥೂಲಕಾಯದ ಸಮಸ್ಯೆ ಇಂದು ಎಲ್ಲೆಡೆ ವ್ಯಾಪಕವಾಗಿಬಿಟ್ಟಿದೆ. ಶೇಕಡಾ 7ಕ್ಕೂ ಹೆಚ್ಚು ಪ್ರಮಾಣದ ಮಕ್ಕಳು ಮೂತ್ರಪಿಂಡದ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದಾರೆ. 19 ವರ್ಷದೊಳಗಿನ ಅಂದಾಜು ಶೇಕಡಾ 10ರಷ್ಟು ಮಕ್ಕಳು ಮಧುಮೇಹದಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಒಟ್ಟಾರೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜೀವನಶೈಲಿ ಮತ್ತು ವಾತಾವರಣ ಬದಲಾವಣೆ ತಂದಿರುವ ದುಷ್ಪರಿಣಾಮಗಳನ್ನು ಈ ಅಂಕಿ ಅಂಶಗಳು ತೋರಿಸುತ್ತವೆ. ಅದರಲ್ಲಿಯೂ ಸ್ಥೂಲಕಾಯದ ಪ್ರಕೋಪ ದೊಡ್ಡಪ್ರಮಾಣದಲ್ಲಿ ಹೆಚ್ಚತೊಡಗಿದೆ. ಆಹಾರಕ್ಕೆ ಸಂಬಂಧಿಸಿದ ಎರಡು ತೀವ್ರ ರೀತಿಯ ವೈರುಧ್ಯಗಳನ್ನು ಹೊಂದಿರುವ ದೇಶವಾಗಿರುವ ಭಾರತದಲ್ಲಿ ಸ್ಥೂಲಕಾಯ ಮತ್ತು ಪೋಷಕಾಂಶಗಳ ಕೊರತೆಗಳೆರಡೂ ಹೆಚ್ಚಿನ ಪ್ರಮಾಣದಲ್ಲಿವೆ. ರಾಷ್ಟ್ರೀಯ ಆರೋಗ್ಯ ಯೋಜನೆಯನ್ನು ತಕ್ಷಣ ಬದಲಿಸುವ ಹಾಗೂ ಪೋಷಕಾಂಶಗಳ ಕೊರತೆಯನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆಯನ್ನು ಇದು ಸೂಚಿಸುತ್ತದೆ.

ಕಳೆದ 20 ವರ್ಷಗಳಲ್ಲಿ, ಪೋಷಕಾಂಶಗಳ ಕೊರತೆಯಿಂದ ಮೃತಪಡುತ್ತಿದ್ದವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಇನ್ನೂ 7 ಲಕ್ಷ ಮಕ್ಕಳು ಹಸಿವು ಮತ್ತು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವುದು ದುರಂತದ ಸಂಗತಿ. ವಿಶ್ವ ಸಂಸ್ಥೆಯ ವರದಿಯ ಪ್ರಕಾರ, 2015 ರಿಂದ 2020ರೊಳಗೆ ಜಗತ್ತಿನಾದ್ಯಂತ 7 ಕೋಟಿಗೂ ಅಧಿಕ ನವಜಾತ ಶಿಶುಗಳು ಮೃತಪಡಲಿದ್ದು, ಈ ಒಟ್ಟು ಸಾವಿನ ಪ್ರಮಾಣದಲ್ಲಿ ಭಾರತವು ಶೇಕಡಾ 18 ಪಾಲು ಹೊಂದಲಿದೆ. ಪ್ರತಿ ವರ್ಷ 5 ವರ್ಷದೊಳಗಿನ 60,000 ಮಕ್ಕಳು ಸಾವಿಗೀಡಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಾಕುವ ಲಸಿಕೆಗಳಿಂದಲೇ ಇದನ್ನು ತಡೆಗಟ್ಟಬಹುದು. ಪೌಷ್ಠಿಕಾಂಶಗಳ ಕೊರತೆಯನ್ನು 2022ರೊಳಗೆ ಇಲ್ಲವಾಗಿಸುವ ಉದ್ದೇಶದಿಂದ ಜಾರಿಗೆ ತಂದಿದ್ದ ಪೋಷಣಾ ಅಭಿಯಾನವು ಇನ್ನಷ್ಟೇ ತೀವ್ರಗತಿಯನ್ನು ಪಡೆದುಕೊಳ್ಳಬೇಕಿದೆ.

ಅಮೆರಿಕ ಮತ್ತು ಯುರೋಪ್‌ನ ತಮ್ಮ ಸಹವಯಸ್ಕರಿಗೆ ಹೋಲಿಸಿದಲ್ಲಿ, ಭಾರತೀಯ ಮಕ್ಕಳು 40 ಪಟ್ಟು ಹೆಚ್ಚು ಕಲಬೆರಕೆ ಆಹಾರವನ್ನು ಸೇವಿಸುತ್ತಿದ್ದಾರೆ ಎಂಬುದನ್ನು ರಾಷ್ಟ್ರೀಯ ಪೌಷ್ಠಿಕಾಂಶ ಸಂಸ್ಥೆ (ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆಫ್‌ ನ್ಯೂಟ್ರಿಶನ್‌ – ಎನ್‌ಐಎನ್‌) ಬಹಿರಂಗಪಡಿಸಿದೆ. ಈ ಕಾರಣಕ್ಕಾಗಿ ಸರ್ಕಾರಗಳು ಪ್ರಾರಂಭಿಸಿದ್ದ ವಿಟಮಿನ್‌ ಮತ್ತು ಖನಿಜಾಂಶಗಳ ಸರಬರಾಜು ಯೋಜನೆಯು ಇನ್ನಷ್ಟೇ ಬೆಳಕು ಕಾಣಬೇಕಿದೆ. ಉತ್ತಮ ಪೋಷಕಾಂಶಗಳು, ಕಾಲಕಾಲಕ್ಕೆ ಸೂಕ್ತ ಲಸಿಕೆ ಮತ್ತು ಆಂಟಿಬಯೋಟಿಕ್‌ಗಳನ್ನು ಅಗ್ಗದ ದರದಲ್ಲಿ ಸರಬರಾಜು ಮಾಡುವ ಮೂಲಕ ದೊಡ್ಡ ಪ್ರಮಾಣದ ಸಾವುಗಳನ್ನು ತಡೆಗಟ್ಟಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಸರಕಾರಗಳನ್ನು ಈ ದಿಕ್ಕಿನಲ್ಲಿ ಹೋಗುವಂತೆ ಅವರು ಮಾಡುತ್ತಿದ್ದರೂ, ವಾಂತಿಭೇದಿ ಮತ್ತು ರಕ್ತಹೀನತೆಯಂತಹ ಕಾಯಿಲೆಗಳು ಪ್ರತಿ ವರ್ಷ ಸಾವಿರಾರು ಜೀವಗಳನ್ನು ಬಲಿತೆಗೆದುಕೊಳ್ಳುತ್ತಲೇ ಇವೆ. ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸುವ ಹೊಣೆಗಾರಿಕೆಯನ್ನು ಅಂಗನವಾಡಿ ಕೇಂದ್ರಗಳಿಗೆ ಹಸ್ತಾಂತರಿಸಬೇಕು ಎಂದು ನೀತಿ ಆಯೋಗ ಸಲಹೆ ನೀಡಿದ್ದರೂ, ವ್ಯವಸ್ಥೆಯಲ್ಲಿನ ದೋಷಗಳು ಮತ್ತು ತಾಯಿ ಹಾಗೂ ಮಗುವಿನ ಯೋಗಕ್ಷೇಮ ಯೋಜನೆಗಳಲ್ಲಿಯ ದೊಡ್ಡ ಪ್ರಮಾಣದಲ್ಲಿ ನಡೆಯುವ ಭ್ರಷ್ಟಾಚಾರಗಳ ಕಡೆ ಜಾಣಕುರುಡು ನಡೆಯನ್ನು ತೋರಲಾಗುತ್ತಿದೆ. ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ತಾಯಿ ಮತ್ತು ಮಗುವಿನ ಯೋಗಕ್ಷೇಮದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದಾಗ ಮಾತ್ರ ದೇಶಕ್ಕೆ ಅದು ದೀರ್ಘಕಾಲೀನ ಪರಿಣಾಮಗಳನ್ನು ಉಂಟು ಮಾಡಬಲ್ಲುದು. ಆಗ ಮಾತ್ರ ಭಾರತ ತನ್ನ ತಲೆಯನ್ನು ಎತ್ತಿಕೊಂಡು ನಿಲ್ಲಲು ಸಾಧ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.