ETV Bharat / bharat

ಲಾಕ್​​ಡೌನ್​​ನಲ್ಲೂ ಕಡಿಮೆಯಾಗಿಲ್ಲ ರಾಜಸ್ಥಾನದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ - ರಾಜಸ್ಥಾನ

ರಾಜಸ್ಥಾನದಲ್ಲಿ ಕೊರೊನಾ ಲಾಕ್​​ಡೌನ್​​ ಜಾರಿಯಲ್ಲಿದ್ರೂ ಕೂಡ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆ ಆಗಿಲ್ಲ.

children-of-child-shelter-home-getting-corona-test-in-rajasthan-special-story
ಲಾಕ್​​ಡೌನ್​​ನಲ್ಲೂ ಕಡಿಮೆಯಾಗಿಲ್ಲ ರಾಜಸ್ಥಾನದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ!
author img

By

Published : May 1, 2020, 8:22 PM IST

ರಾಜಸ್ಥಾನ/ಜೋಧಪುರ್​​: ಮಕ್ಕಳಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜಸ್ಥಾನದಲ್ಲಿ ಮಕ್ಕಳ ಸುಧಾರಣಾ ಮನೆ ತೆರೆಯಲಾಗಿದ್ದು, ಅಲ್ಲಿಯೇ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ.

ಮಕ್ಕಳ ಪೋಷಕರಿಗೆ ಕೊರೊನಾ ಪಾಸಿಟಿವ್​ ಬಂದ ನಂತರ ಮಕ್ಕಳನ್ನು ಸಹ ಕ್ವಾರಂಟೈನ್​ ಮಾಡಲಾಗಿತ್ತು. ಆದರೆ ಅವರ ಮನೆಯಲ್ಲೇ ಮಕ್ಕಳಿಗೆ ಟೆಸ್ಟ್​​ ಮಾಡಿ ಚಿಕಿತ್ಸೆ ನೀಡುವಂತೆ ಜೋಧ್​ಪುರ್​ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಈ ಹಿನ್ನೆಲೆ ಮಕ್ಕಳಿಗಾಗಿ ಮಕ್ಕಳ ಸುಧಾರಣಾ ಮನೆ ತೆರೆಯಲಾಗಿದೆ. ಆ ಮನೆಗೆ ಬರುವ ಮಕ್ಕಳ ಸ್ಕ್ರೀನಿಂಗ್​ ಕೂಡ ನಡೆಸಲಾಗ್ತಿದೆ.

ಕೊರೊನಾ ಹಾಟ್​​ ಸ್ಪಾಟ್ ಜಿಲ್ಲೆಗಳ ಮಕ್ಕಳ ಸುಧಾರಣಾ ಮನೆಗಳಲ್ಲಿ ವಾಸಿಸುವ ಮಕ್ಕಳಿಗೆ ಪರೀಕ್ಷೆಗಳನ್ನು ಸಹ ನಡೆಸಲಾಗಿದ್ದು, ಇಲ್ಲಿದ್ದ ಮಕ್ಕಳ ವರದಿ ನೆಗೆಟಿವ್​ ಬಂದಿದೆ.

ಮಾರ್ಚ್ 25 ರಿಂದ 10 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲು:

ಇನ್ನು ವೇಳೆ ಲಾಕ್​​ಡೌನ್​​ ಅವಧಿಯಲ್ಲಿ ಕೂಡ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಿಂತಿಲ್ಲ ಎಂಬ ಆಘಾತಕಾರಿ ಅಂಶ ಕೂಡ ಹೊರಬಿದ್ದಿದೆ. ಮಕ್ಕಳ ಆರೈಕೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ವ್ಯವಸ್ಥೆಗಳ ಬಗ್ಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗವೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ.

ಲಾಕ್​ಡೌನ್​ ಇದ್ರೂ ಮಾರ್ಚ್ 25 ರಿಂದ 10 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಆದರೆ ಪ್ರಸ್ತುತ ಪೊಲೀಸ್​ ಇಲಾಖೆ ಕೊರೊನಾ ಕೆಲಸದಲ್ಲಿ ನಿರತವಾಗಿರುವುದರಿಂದ ಈ ದೌರ್ಜನ್ಯ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳುವುದು ಸದ್ಯ ಕಷ್ಟವಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಜಿಲ್ಲೆಯ ಸಮಿತಿಗಳ ಮೂಲಕ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಾ ಸಮಿತಿಗಳಿಗೆ ವೀಡಿಯೊ ಕಾನ್ಫರೆನ್ಸ್​​ ಮೂಲಕ ನಿರ್ದೇಶನಗಳನ್ನು ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.