ನವದೆಹಲಿ: ದೇಶದ ರಕ್ಷಣೆಗಾಗಿ ಎಂತಹ ಸವಾಲನ್ನಾದರೂ ಎದುರಿಸಲು ಭಾರತದ ಯೋಧರು ಸದಾ ಸಿದ್ಧರಾಗಿ ಇರುತ್ತಾರೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಗಡಿ ಸಮೀಪದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಡಿಎಸ್ ರಾವತ್, ಸರಹದ್ದಿನಲ್ಲಿ ಕೈಗೊಂಡಿರುವ ಭದ್ರತೆ ಬಗ್ಗೆ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆರ್ಮಿ, ಐಟಿಬಿಪಿ, ಎಸ್‌ಎಫ್ಎಫ್ ದಳಗಳೊಂದಿಗೆ ಮಾತುಕತೆ ನಡೆಸಿದರು. ಸಮರ್ಥವಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದೀರಿ ಎಂದು ಸೇನಾ ಸಿಬ್ಬಂದಿಯ ಸೇವೆಯನ್ನು ಕೊಂಡಾಡಿದರು.
ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಭಾರತ-ಚೀನಾ ಸೇನೆಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಅರುಣಾಚಲಪ್ರದೇಶ, ಸಿಕ್ಕಿಂ ಸೇರಿದಂತೆ ಗಡಿ ಪ್ರದೇಶದಲ್ಲಿ ಸೇನಾ ಬಲವನ್ನು ಹೆಚ್ಚಿಸಲಾಗಿದ್ದು, ಚೀನಾ ಸೈನ್ಯದ ಮೇಲೆ ಹದ್ದಿನ ಕಣ್ಣಿಡಲಾಗಿದೆ.