ನವದೆಹಲಿ: ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿದ್ದಾರೆ.
-
WB CM Mamata Banerjee: I handed over a letter to him (HM Amit Shah), told him that of the 19 Lakh people left out of NRC, many are Hindi speaking, Bengali speaking & local Assamese. Many genuine voters have been left out. This should be looked into. I submitted an official letter pic.twitter.com/PiBPbZM02M
— ANI (@ANI) September 19, 2019 " class="align-text-top noRightClick twitterSection" data="
">WB CM Mamata Banerjee: I handed over a letter to him (HM Amit Shah), told him that of the 19 Lakh people left out of NRC, many are Hindi speaking, Bengali speaking & local Assamese. Many genuine voters have been left out. This should be looked into. I submitted an official letter pic.twitter.com/PiBPbZM02M
— ANI (@ANI) September 19, 2019WB CM Mamata Banerjee: I handed over a letter to him (HM Amit Shah), told him that of the 19 Lakh people left out of NRC, many are Hindi speaking, Bengali speaking & local Assamese. Many genuine voters have been left out. This should be looked into. I submitted an official letter pic.twitter.com/PiBPbZM02M
— ANI (@ANI) September 19, 2019
ಕೇಂದ್ರ ಗೃಹ ಸಚಿವಾಲಯದಲ್ಲಿ ಅಮಿತ್ ಶಾ ಅವರನ್ನ ಭೇಟಿ ಮಾಡಿ ಅಸ್ಸೋಂ ರಾಷ್ಟ್ರೀಯ ಪೌರ ನೋಂದಣಿ (ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್) ಪಟ್ಟಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಸ್ಸೋಂ ಪೌರ ನೋಂದಣಿ ಪಟ್ಟಿಯಿಂದ 19 ಲಕ್ಷ ಜನರ ಹೆಸರು ಕೈಬಿಡಲಾಗಿದೆ. ಅವರಲ್ಲಿ ಹಿಂದಿ, ಬಂಗಾಳಿ ಭಾಷಿಕರಿದ್ದು, ಸ್ಥಳೀಯ ಅಸ್ಸೋಂ ಜನರನ್ನೂ ಪಟ್ಟಿಯಿಂದ ಕೈ ಬಿಡಲಾಗಿದೆ. ನಿಜವಾದ ಮತದಾರರನ್ನೇ ಪಟ್ಟಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ಗೃಹ ಸಚಿವರಿಗೆ ಪತ್ರ ನೀಡಿದ್ದೇನೆ ಎಂದಿದ್ದಾರೆ.
-
Delhi: Chief Minister of West Bengal, Mamata Banerjee meets Union Home Minister Amit Shah. pic.twitter.com/Ar168beWuG
— ANI (@ANI) September 19, 2019 " class="align-text-top noRightClick twitterSection" data="
">Delhi: Chief Minister of West Bengal, Mamata Banerjee meets Union Home Minister Amit Shah. pic.twitter.com/Ar168beWuG
— ANI (@ANI) September 19, 2019Delhi: Chief Minister of West Bengal, Mamata Banerjee meets Union Home Minister Amit Shah. pic.twitter.com/Ar168beWuG
— ANI (@ANI) September 19, 2019
ಅಲ್ಲದೇ ಪಶ್ಚಿಮ ಬಂಗಾಳಕ್ಕೆ ರಾಷ್ಟ್ರೀಯ ಪೌರ ನೋಂದಣಿ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಇದಕ್ಕೆ ಗೃಹ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿದ ವೇಳೆ ಹಲವು ವಿಷಯಗಳನ್ನ ಕುರಿತು ಚರ್ಚೆ ನಡೆಸಿದ್ದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನ 'ಬಾಂಗ್ಲಾ' ಎಂದು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು.