ಹೈದರಾಬಾದ್: ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ದೇಶ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಇದರಿಂದ ಪುಟಿದೇಳಲು ಭಾರತ ಹರಸಾಹಸ ಪಡೆಬೇಕಾಗಿದ್ದು, ಇಂತಹ ಸ್ಥಿತಿಯಿಂದ ಹೊರಬರಲು ತೆಲಂಗಾಣ ಈಗಾಗಲೇ ಒಂದು ಹೆಜ್ಜೆ ಮುಂದೆ ಇಟ್ಟಿದೆ.
ತೆಲಂಗಾಣ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ, ರಾಜ್ಯ ಕ್ಯಾಬಿನೆಟ್, ಎಂಎಲ್ಸಿ, ಶಾಸಕರು, ರಾಜ್ಯ ವಿವಿಧ ನಿಗಮದ ಅಧ್ಯಕ್ಷರು ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ವೇತನದಲ್ಲಿ ಶೇ.75ರಷ್ಟು ಕಡಿತ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕೆಸಿಆರ್ ಇಂದು ಮಹತ್ವದ ತೀರ್ಮಾನ ಹೊರಡಿಸಿದ್ದಾರೆ.
ಇದರ ಜತೆಗೆ ರಾಜ್ಯದಲ್ಲಿ ಐಎಎಸ್, ಐಪಿಎಸ್,ಐಎಫ್ಎಸ್ ಅಧಿಕಾರಿಗಳ ಸ್ಯಾಲರಿಯಲ್ಲಿ ಶೇ.60ರಷ್ಟು ಹಾಗೂ ವಿವಿಧ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಸಂಬಳದಲ್ಲಿ ಶೇ. 50ರಷ್ಟು ಹಾಗೂ ಕ್ಲಾಸ್ 4 ಸಿಬ್ಬಂದಿ, ಕಾಂಟ್ರ್ಯಾಕ್ಟ್ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಯಲ್ಲಿರುವವರ ಸ್ಯಾಲರಿಯಲ್ಲಿ ಶೇ. 10ರಷ್ಟು ಕಡಿತ ಮಾಡುವುದಾಗಿ ಅವರು ಘೋಷಣೆ ಮಾಡಿದ್ದಾರೆ.