ETV Bharat / bharat

ದೀದಿಗೆ ತಲೆನೋವು ತಂದ ಕಿರಿಯ ವೈದ್ಯರ ಮುಷ್ಕರ: ಕೆಲಸಕ್ಕೆ ಹಿಂದಿರುಗಲು ಕಟ್ಟಪ್ಪಣೆ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಿರಿಯ ವೈದ್ಯರಿಗೆ ಪತ್ರ ಬರೆದು, ಎಲ್ಲ ಜಿಲ್ಲೆಗಳಿಂದ ಬರುವ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಎಂದಿದ್ದಾರೆ. ಅಲ್ಲದೆ, ಮುಷ್ಕರ ಹೂಡಿರುವ ಕಿರಿಯ ವೈದ್ಯರೊಂದಿಗೆ ತಾನು ಯಾವುದೇ ಕಾರಣಕ್ಕೂ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

author img

By

Published : Jun 13, 2019, 8:23 PM IST

Mamata Banerjee

ಕೋಲ್ಕತ್ತಾ: ರಾಜಕೀಯ ಸಂಘರ್ಷದಿಂದ ಸುದ್ದಿಯಾಗುತ್ತಿರುವ ಪಶ್ಚಿಮ ಬಂಗಾಳ, ಇದೀಗ ಕಿರಿಯ ವೈದ್ಯರ ಮುಷ್ಕರದಿಂದ ಸಂಕಷ್ಟಕ್ಕೆ ಸಿಲುಕಿದೆ. ಕಿರಿಯ ವೈದ್ಯರ ಮುಷ್ಕರದಿಂದ ಗರಂ ಆಗಿರುವ ದೀದಿ, ಕೆಲಸಕ್ಕೆ ಹಾಜರಾಗುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ.

ಹಿರಿಯ ವೈದ್ಯರು ಹಾಗೂ ವೈದ್ಯಕೀಯ ಕಾಲೇಜುಗಳ ಪ್ರೊಫೆಸರ್​ಗಳಿಗೆ ಪತ್ರ ಬರೆದು, ರೋಗಿಗಳ ಕಡೆ ಗಮನ ಕೊಡಿ ಎಂದು ಮನವಿ ಮಾಡಿದ್ದಾರೆ. ಎಲ್ಲ ಜಿಲ್ಲೆಗಳಿಂದ ಬರುವ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ. ಅಲ್ಲದೆ, ಮುಷ್ಕರ ಹೂಡಿರುವ ಕಿರಿಯ ವೈದ್ಯರೊಂದಿಗೆ ತಾನು ಯಾವುದೇ ಕಾರಣಕ್ಕೂ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • West Bengal CM writes to Senior Doctors/Professors of Medical Colleges & Hospitals, states, "Please take care of all patients, poor people are coming from all districts. I'll be obliged & honored if you all please take full care of hospitals. they must run smoothly & peacefully," pic.twitter.com/sSl9JwpDjY

    — ANI (@ANI) June 13, 2019 " class="align-text-top noRightClick twitterSection" data=" ">

ಇಂದು ಬೆಳಗ್ಗೆಯೇ, ಪ್ರತಿಭಟನಾನಿರತ ಕಿರಿಯ ವೈದ್ಯರಿಗೆ ಮಧ್ಯಾಹ್ನ 2 ಗಂಟೆಯೊಳಗೆ ಕೆಲಸಕ್ಕೆ ಹಿಂದಿರುಗುವಂತೆ ಖಡಕ್ ಆಗಿ ಸೂಚನೆ ನೀಡಿದ್ದರು. ಇಲ್ಲವಾದರೆ ಅವರು ವಾಸಿಸುತ್ತಿರುವ ಹಾಸ್ಟೆಲ್​ಗಳಿಂದ ಹೊರಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದರು. ಆದರೂ ವೈದ್ಯರು ಪ್ರತಿಭಟನೆ ಹಿಂಪಡೆದಿಲ್ಲ.

  • " class="align-text-top noRightClick twitterSection" data="">

ಪ್ರತಿಭಟನೆಗೆ ಕಾರಣವೇನು?

ಸೋಮವಾರ ಎನ್​ಆರ್​ಎಸ್​ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಲೇ ರೋಗಿಯೊಬ್ಬರು ಮೃತಪಟ್ಟಿರುವುದಾಗಿ ಆರೋಪಿಸಿ ಮೃತರ ಸಂಬಂಧಿಕರು ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಸರ್ಕಾರಿ ಅನುದಾನಿತ ಆಸ್ಪತ್ರೆಗಳಲ್ಲಿರುವ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಸಿದ ಕೆಲವರನ್ನು ಬಂಧಿಸಿದ್ದಾರೆಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಬಗ್ಗೆ ಸಿಪಿಐ(ಎಂ) ನಾಯಕ ಮೊಹಮ್ಮದ್​ ಸಲೀಂ ಮಾತನಾಡಿ, ರಾಜ್ಯಪಾಲರು ನಡೆಸಿದ ಸರ್ವಪಕ್ಷಗಳ ಸಭೆಯಲ್ಲಿ ಕಿರಿಯ ವೈದ್ಯರ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿ, ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದೇವೆ. ಮಮತಾ ಸಮಸ್ಯೆಗೆ ಪರಿಹಾರ ಹುಡುಕುವ ಬದಲು, ವೈದ್ಯರನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Intro:Body:

Mamata Banerjee 

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.