ETV Bharat / bharat

ಐಎನ್​ಎಕ್ಸ್​ ಮೀಡಿಯಾ ಕೇಸ್​... 'ಕೈ' ಮಾಜಿ ಸಚಿವ ಚಿದಂಬರಂಗಿಲ್ಲ ಜಾಮೀನು!

ಐಎನ್​ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಸಿಬಿಐನಿಂದ ಬಂಧನವಾಗಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್​ ನಿರಾಕರಿಸಿದೆ.

ಪಿ.ಚಿದಂಬರಂ
author img

By

Published : Sep 30, 2019, 4:08 PM IST

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಹಗರಣದಲ್ಲಿ ತಿಹಾರ್​ ಜೈಲು ಸೇರಿರುವ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂಗೆ ದೆಹಲಿ ಕೋರ್ಟ್​​ ಜಾಮೀನು ನಿರಾಕರಣೆ ಮಾಡಿದ್ದು, ಹೀಗಾಗಿ ತಿಹಾರ್​ ಜೈಲಿನಲ್ಲಿ ಅವರ ವಾಸ ಮುಂದುವರೆಯಲಿದೆ.

ಚಿದಂಬರಂಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ದೆಹಲಿ ಹೈಕೋರ್ಟ್​ ಅಭಿಪ್ರಾಯಪಟ್ಟಿದ್ದು, ಅವರಿಗೆ ಜಾಮೀನು ನೀಡಲು ಹಿಂದೇಟು ಹಾಕಿದೆ.

ಐಎನ್​ಎಕ್ಸ್​ ಮೀಡಿಯಾ ಹಗರಣದಲ್ಲಿ ಸಿಬಿಐನಿಂದ ಕೇಂದ್ರದ ಮಾಜಿ ಸಚಿವ ಬಂಧನವಾಗಿದ್ದಾರೆ. ಸೆ.5 ರಿಂದ ನ್ಯಾಯಾಂಗ ಬಂಧನದಲ್ಲಿರುವ 70 ವರ್ಷದ ಪಿ.ಚಿದಂಬರಂ ಅವರನ್ನ ತಿಹಾರ್ ಜೈಲಿನ 7ನೇ ನಂಬರ್​​ನ ಸೆಲ್​ನಲ್ಲಿ ಇರಿಸಲಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್​ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತಿಹಾರ್​ ಜೈಲಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಣೆ ನಡೆಸಿದ್ದರು.

Intro:Body:

ಐಎನ್​ಎಕ್ಸ್​ ಮೀಡಿಯಾ ಕೇಸ್​... 'ಕೈ' ಮಾಜಿ ಸಚಿವ ಚಿಂದಬರಂಗಿಲ್ಲ ಜಾಮೀನು! 

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಹಗರಣದಲ್ಲಿ ತಿಹಾರ್​ ಜೈಲು ಸೇರಿರುವ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂಗೆ ದೆಹಲಿ ಕೋರ್ಟ್​​ ಜಾಮೀನು ನಿರಾಕರಣೆ ಮಾಡಿದ್ದು, ಹೀಗಾಗಿ ತಿಹಾರ್​ ಜೈಲಿನಲ್ಲಿ ಅವರ ವಾಸ ಮುಂದುವರೆಯಲಿದೆ. 

ಚಿದಂಬರಂಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ದೆಹಲಿ ಹೈಕೋರ್ಟ್​ ಅಭಿಪ್ರಾಯಪಟ್ಟಿದ್ದು, ಅವರಿಗೆ ಜಾಮೀನು ನೀಡಲು ಹಿಂದೇಟು ಹಾಕಿದೆ. 

ಐಎನ್​ಎಕ್ಸ್​ ಮೀಡಿಯಾ ಹಗರಣದಲ್ಲಿ ಸಿಬಿಐನಿಂದ ಕೇಂದ್ರದ ಮಾಜಿ ಸಚಿವ ಬಂಧನವಾಗಿದ್ದಾರೆ. ಸೆ.5 ರಿಂದ ನ್ಯಾಯಾಂಗ ಬಂಧನದಲ್ಲಿರುವ 70 ವರ್ಷದ ಪಿ.ಚಿದಂಬರಂ ಅವರನ್ನ ತಿಹಾರ್ ಜೈಲಿನ 7ನೇ ನಂಬರ್​​ನ ಸೆಲ್​ನಲ್ಲಿ ಇರಿಸಲಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್​ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತಿಹಾರ್​ ಜೈಲಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಣೆ ನಡೆಸಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.