ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ಉಗ್ರರು ಒಬ್ಬ ಕಾರ್ಮಿಕ ಹಾಗೂ ಸೇಬು ಹಣ್ಣಿನ ವ್ಯಾಪಾರಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಛತ್ತೀಸ್ಗಢ ಮೂಲದ ಸೆತಿ ಕುಮಾರ್ ಸಾಗರ್ ಮೃತ ಕಾರ್ಮಿಕ. ದಕ್ಷಿಣ ಕಾಶ್ಮೀರದ ನಿಹಾಮ ಪ್ರದೇಶದ ಕಾಕ್ಪೋರ ರೈಲ್ವೆ ನಿಲ್ದಾಣದ ಬಳಿ ಸೆತಿ ಕುಮಾರ್ ಮತ್ತು ಇನ್ನೋರ್ವ ವ್ಯಕ್ತಿ ನಡೆದುಕೊಂಡು ಹೋಗುವಾಗ ದಾಳಿ ನಡೆಸಲಾಗಿದೆ.
ಇಬ್ಬರು ಬಂದೂಕು ದಾರಿಗಳು ಏಕಾಏಕಿ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಉಗ್ರರನ್ನ ಹಿಡಿಯಲು ಹಲವು ತಂಡಗಳನ್ನ ರಚನೆ ಮಾಡಲಾಗಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಇದರ ಮಧ್ಯೆ ಮತ್ತೋರ್ವ ಸೇಬು ಹಣ್ಣಿನ ವ್ಯಾಪಾರಿಯನ್ನ ಉಗ್ರರು ಹತ್ಯೆ ಮಾಡಿದ್ದಾರೆ.ಚರಜೀತ್ ಸಿಂಗ್ ಎಂಬ ವ್ಯಕ್ತಿ ಮೇಲೆ ಉಗ್ರರು ದಾಳಿ ನಡೆಸಿದ್ದು, ಆತನನ್ನು ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಗುಂಡೇಟಿನಿಂದ ಸಾವನ್ನಪ್ಪಿರುವ ಸೇಬು ಹಣ್ಣಿನ ವಾಹನದ ಡ್ರೈವರ್ನನ್ನ ಶೇತಿ ಕುಮಾರ್ ಸಾಗರ್ ಎಂದು ಗುರುತಿಸಲಾಗಿದೆ. ಈತ ಮೂಲತ ಛತ್ತೀಸಘಡದವನ್ನಾಗಿದ್ದು, ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು.
ಸೋಮವಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್ ಸೇವೆ ಆರಂಭಿಸಲಾಗಿದ್ದು, ಅಂದೇ ಸೇಬು ಹಣ್ಣಿನ ಲಾರಿ ಚಾಲಕನ ಮೇಲೆ ದಾಳಿ ನಡೆಸಿದ್ದ ಉಗ್ರರು, ಮಾಲೀಕನನ್ನ ಥಳಿಸಿ ಚಾಲಕನನ್ನ ಕೊಂದು ಹಾಕಿದ್ದರು. ಕಳೆದ 3 ದಿನಗಳಲ್ಲಿ ಉಗ್ರರು, ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರನ್ನು ಹತ್ಯೆ ಮಾಡಿದ್ದಾರೆ.