ಚೆನ್ನೈ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯದಮಟ್ಟ ಮೀರಿದ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಇದೇ ವೇಳೆ, ದಕ್ಷಿಣ ಭಾರತದ ರಾಜ್ಯವೊಂದು ವಾಯುಮಾಲಿನ್ಯ ವಿಚಾರದಲ್ಲಿ ದೆಹಲಿಯನ್ನೇ ಮೀರಿಸಲು ಹೊರಟಿದೆ.
ಗುರುವಾರ ಮುಂಜಾನೆ ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿತ್ತು. ಚೆನ್ನೈ, ವೆಲ್ಲಶೇರಿ, ರಾಮಪುರಂ, ಕೊಡುಂಗೈಯೂರ್, ಅಣ್ಣಾ ನಗರ ಹಾಗೂ ಚೆನ್ನೈ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಗಾಳಿಯ ಗುಣಮಟ್ಟ ಜನತೆಯನ್ನು ಕಂಗೆಡಿಸಿದೆ.
ಚೆನ್ನೈನಲ್ಲಿ ಇಂದು ಮುಂಜಾನೆ ಗಾಳಿ ಗುಣಮಟ್ಟ ಸೂಚ್ಯಂಕ 264 ದಾಖಲಾಗಿದೆ. ದೆಹಲಿಯಲ್ಲಿ ಈ ಪ್ರಮಾಣ 254 ಇದೆ. ಇನ್ನುಳಿದಂತೆ ನ್ನೈ, ವೆಲ್ಲಶೇರಿ, ರಾಮಪುರಂ, ಕೊಡುಂಗೈಯೂರ್, ಅಣ್ಣಾ ನಗರ ಹಾಗೂ ಚೆನ್ನೈ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಸೂಚ್ಯಂಕ 341 ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ತಮಿಳುನಾಡಿನಲ್ಲಿ ದಾಖಲಾಗಿರುವ ಈ ವಾಯುಮಾಲಿನ್ಯ ಇನ್ನೆರಡು ದಿನ ಮುಂದುವರೆಯಲಿದೆ. ಮಳೆಯಾದರೆ ಪರಿಸ್ಥಿತಿ ಸುಧಾರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ವಾಯು ಗುಣಮಟ್ಟ ಸೂಚ್ಯಂಕ:
- 0 - 50 - ಉತ್ತಮ
- 51 - 100 - ತೃಪ್ತಿದಾಯಕ
- 101 - 200 - ಸಾಧಾರಣ
- 201 - 300 - ಕಳಪೆ
- 301 - 400 - ಅತ್ಯಂತ ಕಳಪೆ
- 401 - 500 - ಅಪಾಯಕಾರಿ