ETV Bharat / bharat

ಜಿಎಸ್‌ಟಿ ನಕಲಿ ಇನ್‌ವಾಯ್ಸ್ ವಂಚನೆ ಪ್ರಕರಣ: 258 ಜನರಲ್ಲಿ 8 ಚಾರ್ಟರ್ಡ್ ಅಕೌಂಟೆಂಟ್‌ಗಳ ಬಂಧನ

author img

By

Published : Jan 25, 2021, 10:10 AM IST

ಕಳೆದ ಎರಡೂವರೆ ವರ್ಷಗಳಲ್ಲಿ ನಕಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇನ್‌ವಾಯ್ಸ್ ವಂಚನೆಗಳ ವಿರುದ್ಧ ರಾಷ್ಟ್ರವ್ಯಾಪಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ 258 ಜನರನ್ನು ಬಂಧಿಸಲಾಗಿದೆ. ಈ ಪೈಕಿ ಎಂಟು ಚಾರ್ಟರ್ಡ್ ಅಕೌಂಟೆಂಟ್‌ಗಳೂ ಸೇರಿದ್ದಾರೆ.

Chartered Accountants among 258 arrested
ಜಿಎಸ್‌ಟಿ ನಕಲಿ ಇನ್‌ವಾಯ್ಸ್ ವಂಚನೆ ಪ್ರಕರಣ

ನವದೆಹಲಿ: ಕಳೆದ ಎರಡೂವರೆ ವರ್ಷಗಳಲ್ಲಿ ನಕಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇನ್‌ವಾಯ್ಸ್ ವಂಚನೆಗಳ ವಿರುದ್ಧ ದೇಶಾದ್ಯಂತ ಕಾರ್ಯಾಚರಣೆ ನಡೆಸಲಾಗಿತ್ತು. ಈವರೆಗೆ 258 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಎಂಟು ಚಾರ್ಟರ್ಡ್ ಅಕೌಂಟೆಂಟ್‌ಗಳು ಸೇರಿದ್ದಾರೆ ಎಂದು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಜನರಲ್ (ಡಿಜಿಜಿಐ) ಮೂಲಗಳು ತಿಳಿಸಿವೆ.

ಎಂಟನೇ ಚಾರ್ಟರ್ಡ್ ಅಕೌಂಟೆಂಟ್‌ ಹಾಗೂ ಆತನ ನಾಲ್ಕು ಜನ ಸಹಚರರನ್ನು ಭಾನುವಾರ ಜೈಪುರದಲ್ಲಿ ಬಂಧಿಸಲಾಗಿದೆ. ಸರಕು ಮತ್ತು ಸೇವೆಗಳ ಸರಬರಾಜು ಮಾಡದೇ ನಕಲಿ ಇನ್‌ವಾಯ್ಸ್‌ಗಳ ಮೂಲಕ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ)ನ್ನು ರವಾನಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಡಿಜಿಜಿಐ ಮೂಲಗಳು ಮಾಹಿತಿ ನೀಡಿವೆ.

ಈವರೆಗೆ ಬಂಧಿಸಲಾಗಿರುವ 258 ಜನರಲ್ಲಿ ಕನಿಷ್ಠ ಇಬ್ಬರು ವ್ಯಕ್ತಿಗಳ ವಿರುದ್ಧ ಕೋಫೆಪೋಸಾ (ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಓದಿ:ತೇಜಸ್ ವಿಮಾನವನ್ನು ಖರೀದಿಸಲು ಹಲವು ದೇಶಗಳು ಆಸಕ್ತಿ ತೋರಿವೆ: ಎಚ್​ಎಎಲ್​​ ಅಧ್ಯಕ್ಷ ಆರ್. ಮಾಧವನ್​

ಪ್ರಸ್ತುತ 8,000 ನಕಲಿ ಜಿಎಸ್ಟಿಎನ್ ಘಟಕಗಳ ವಿರುದ್ಧ 2,500 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜಿಎಸ್​​ಟಿ ಗುಪ್ತಚರ ಮತ್ತು ಸಿಜಿಎಸ್​ಟಿ ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ. ಈ ವಂಚಕರಿಂದ ಅಧಿಕಾರಿಗಳು 820 ಕೋಟಿ ರೂ.ವಶಕ್ಕೆ ಪಡೆದಿದ್ದಾರೆ. ಈ ಬಂಧನಗಳ ಬಗ್ಗೆ ಚಾರ್ಟರ್ಡ್ ಅಕೌಂಟೆಂಟ್ಸ್ ರೆಗ್ಯುಲೇಟರಿ ಬಾಡಿ, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ತಮ್ಮದೇ ಆದ ನಿಯಮಗಳ ಪ್ರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಎಸ್ ಗುಪ್ತಾ (ಜೈಪುರ), ದೌಲತ್ ಎಸ್ ಮೆಹ್ತಾ ಮತ್ತು ಚಂದ್ರ ಪ್ರಕಾಶ್ ಪಾಂಡೆ (ಮುಂಬೈ), ಲಲಿತ್ ಪ್ರಜಾಪತಿ (ಅಹಮದಾಬಾದ್), ಎಸ್ ಕೃಷ್ಣಕುಮಾರ್ (ಚೆನ್ನೈ), ನಿತಿನ್ ಜೈನ್ (ದೆಹಲಿ) ಬಿ ಶ್ರೀನಿವಾಸ ರಾವ್ (ಹೈದರಾಬಾದ್) ಮತ್ತು ಅಂಕುರ್ ಗರ್ಗ್ (ಲೂಧಿಯಾನ) ರನ್ನು ಬಂಧಿಸಲಾಗಿದೆ.

ವ್ಯವಸ್ಥಿತ ಬದಲಾವಣೆಗಳ ಮೂಲಕ, ಇಲಾಖೆಯು ಈಗ ವಂಚಕರು ಮತ್ತು ತೆರಿಗೆ ವಂಚಕರ ವಿರುದ್ಧ ಉದ್ದೇಶಿತ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದೆ. ನಕಲಿ ಜಿಎಸ್ಟಿ ಇನ್ವಾಯ್ಸ್ ವಂಚನೆಯ ವಿರುದ್ಧ ರಾಷ್ಟ್ರವ್ಯಾಪಿ ನಡೆಸಿದ ಕಾರ್ಯಚರಣೆಯಿಂದಾಗಿ ತೆರಿಗೆ ಕಟ್ಟದವರನ್ನು ಮತ್ತು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್​​ಗಳನ್ನು ಮೋಸದಿಂದ ಪಡೆಯುವವರನ್ನು ಗುರುತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.