ETV Bharat / bharat

35 ಕೋಟಿ ರೂ. ಮೌಲ್ಯದ ಚರಸ್ ವಶ: ಮೂವರು ನೇಪಾಳಿಗಳ ಬಂಧನ

author img

By

Published : Feb 7, 2021, 8:42 PM IST

ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಭಾನುವಾರ 35 ಕೋಟಿ ರೂ. ಮೌಲ್ಯದ ಚರಸ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನೇಪಾಳಿಗಳನ್ನು ಬಂಧಿಸಲಾಗಿದೆ.

Charas seized in Gopalgunj Bihar
ಬಿಹಾರದಲ್ಲಿ ಮೂವರು ನೇಪಾಳಿಗರ ಬಂಧನ

ಗೋಪಾಲ್‌ಗಂಜ್ (ಬಿಹಾರ): ಜಿಲ್ಲೆಯಲ್ಲಿ ಮೂವರು ನೇಪಾಳಿಗಳನ್ನು ಬಂಧಿಸಿ, ಅವರಿಂದ 265 ಕೆಜಿ ಚರಸ್​ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್​ ತಂಡ, ಕುಚೈಕೋಟ್ ಪೊಲೀಸ್ ಠಾಣೆ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 28ರ ಬಾಲ್ತಾರಿ ಚೆಕ್ ಪೋಸ್ಟ್‌ನಲ್ಲಿ ಪಿಕ್​​ಅಪ್ ವ್ಯಾನ್​ ತಪಾಸಣೆ ನಡೆಸಿದಾಗ 35 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ ಎಂದು ಎಸ್‌ಹೆಚ್‌ಒ ಅಶ್ವಿನಿ ಕುಮಾರ್ ತಿವಾರಿ ತಿಳಿಸಿದ್ದಾರೆ.

ಓದಿ : ಜಮ್ಮು-ಕಾಶ್ಮೀರ: ಪೂಂಚ್​​ನಲ್ಲಿ ಪಾಕ್​​ ಸೇನೆಯಿಂದ ಶೆಲ್ ದಾಳಿ

ಪಿಕ್​​ಅಪ್ ವ್ಯಾನ್ ನೇಪಾಳದ ಬಿರ್ಗಂಜ್​ನಿಂದ ಬರುತ್ತಿದ್ದು, ಉತ್ತರ ಪ್ರದೇಶದ ಬರೇಲಿಗೆ ಮಾದಕ ವಸ್ತು ರವಾನಿಸಲಾಗುತ್ತಿತ್ತು ಎನ್ನಲಾಗಿದೆ. ಬಂಧಿತ ವ್ಯಕ್ತಿಗಳು ನೇಪಾಳದ ನಿವಾಸಿಗಳು ಎಂದು ತಿವಾರಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.