ಶ್ರೀಹರಿಕೋಟ (ಆಂಧ್ರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಡಾವಣೆ ಈಗಾಗಲೇ ಯಶಸ್ವಿಯಾಗಿದ್ದು, ಮೊದಲ ಭೂ ಪರಿಮಿತಿ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ-2 ಕ್ಕೆ ಆನ್ಬೋರ್ಡ್ ಪ್ರೊಪಲ್ಷನ್ ಸಿಸ್ಟಂ ಬಳಸಿ, 57 ಸೆಕೆಂಡುಗಳ ಫೈರಿಂಗ್ ಅವಧಿಯನ್ನು ಯೋಜಿಸಿದಂತೆ ಮುಗಿಸಿ, 2 ಗಂಟೆ 52 ಸೆಕೆಂಡ್ಗಳ ಕಾಲ ಮೊದಲ ಭೂ ಪರಿಮಿತಿ ಕಕ್ಷೆ ವೀಕ್ಷಣೆ ನಡೆಸಲಾಯಿತು ಎಂದು ತಿಳಿಸಿದೆ.
ಇನ್ನು ಎರಡನೇ ಕಕ್ಷೆಯನ್ನು ಜುಲೈ 26 ರಂದು ಬೆಳಗ್ಗೆ 9 ಗಂಟೆ ತಲುಪಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದ್ದು, ಈ ವರ್ಷದ ಸೆಪ್ಟೆಂಬರ್ 6 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಇಳಿಯುವ ನಿರೀಕ್ಷೆಯಿದೆ ಎನ್ನಲಾಗಿದೆ.