ETV Bharat / bharat

ಚಂದ್ರನ ಸನಿಹಕೆ ಚಂದ್ರಯಾನ-2: ಸೆಪ್ಟೆಂಬರ್​ 7ರಂದು ಲ್ಯಾಂಡ್​!

ವೈಜ್ಞಾನಿಕ ಅಧ್ಯಯನಕ್ಕಾಗಿ ಉಡಾವಣೆ ಮಾಡಿರುವ ಚಂದ್ರಯಾನ-2 ಬಾಹ್ಯಾಕಾಶ ಯೋಜನೆ ಬಹುತೇಕ ಯಶಸ್ವಿಯಾಗಿದ್ದು, ಇದೀಗ ಅದು ಚಂದಮಾಮನೂರಿಗೆ ಮತ್ತಷ್ಟು ಹತ್ತಿರವಾಗಿದೆ.

ಚಂದ್ರಯಾನ-2
author img

By

Published : Sep 4, 2019, 7:21 AM IST

Updated : Sep 4, 2019, 9:34 AM IST

ಹೈದರಾಬಾದ್​: ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ಬಹುತೇಕ ಯಶಸ್ವಿಯಾಗಿ ಸಾಗುತ್ತಿದ್ದು, ಇದೀಗ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ. ಈ ನೌಕೆ ಶಶಿಗೆ ಮತ್ತಷ್ಟು ಹತ್ತಿರವಾಗಿದೆ.

ಎರಡನೇ ಕಕ್ಷೆಯಿಂದ ಚಂದ್ರಯಾನ-2 ಯಶಸ್ವಿಯಾಗಿ ಬೇರ್ಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಇಸ್ರೋ ಮಾಹಿತಿ ನೀಡಿದೆ. ನಿನ್ನೆಯಷ್ಟೇ ಚಂದ್ರಯಾನ-2 ಆರ್ಬಿಟರ್​ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದ ವಿಜ್ಞಾನಿಗಳು, ಇದೀಗ ಮೂನ್ ಲ್ಯಾಂಡರ್​ ಎಂಜಿನ್‌ ಚಾಲನೆ ಮಾಡುವ ಮೂಲಕ ನೌಕೆಯನ್ನು 96 X 125ಕಿ.ಮೀ ವ್ಯಾಪ್ತಿಯೊಳಗೆ ತಳ್ಳಿದ್ದಾರೆ. ಇದು ಅತ್ಯಂತ ಸಂಕೀರ್ಣ ಕಾರ್ಯಾಚರಣೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಮೂನ್ ಲ್ಯಾಂಡರ್ ಮತ್ತು ರೋವರನ್ನು ಇಳಿಸುವ ಕಾರ್ಯಾಚರಣೆಯಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.

  • Indian Space Research Organisation (ISRO): The second de-orbiting maneuver for #Chandrayan2 spacecraft was performed successfully today, beginning at 3:42 am as planned, using the on-board propulsion system. The duration of the maneuver was 9 seconds. pic.twitter.com/OK1mqtOjG2

    — ANI (@ANI) September 4, 2019 " class="align-text-top noRightClick twitterSection" data=" ">

ಬೆಳಗ್ಗೆ 3ಗಂಟೆ 42 ನಿಮಿಷಕ್ಕೆ ಪ್ರಾರಂಭವಾದ ಈ ಪ್ರಕ್ರಿಯೆ ಕೇವಲ 9 ಸೆಕೆಂಡುಗಳಲ್ಲಿ ಮುಕ್ತಾಯಗೊಂಡಿದೆ ಎಂದು ತಿಳಿದು ಬಂದಿದೆ.

ಇದರ ಮಧ್ಯೆ ಸೆಪ್ಟೆಂಬರ್​ 7ರಂದು ಚಂದ್ರನ ಮೇಲೆ ಚಂದ್ರಯಾನ-2 ನೌಕೆ ಇಳಿಯಲಿದ್ದು, ಅದು ತುಂಬಾ ರೋಚಕತೆಯಿಂದ ಕೂಡಿರುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ನೌಕೆಯನ್ನು ಹೊತ್ತು ಕಳೆದ ಜುಲೈ 22ರ ಮಧ್ಯಾಹ್ನ 2.45 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶದಿಂದ ಉಡಾವಣೆಗೊಂಡಿತ್ತು.

Intro:Body:

ಚಂದ್ರನ ಅಂಗಳಕ್ಕೆ ಮತ್ತಷ್ಟು ಹತ್ತಿರ ಚಂದ್ರಯಾನ-2: ಸೆಪ್ಟೆಂಬರ್​ 7ರಂದು ಲ್ಯಾಂಡ್​! 

ಹೈದರಾಬಾದ್​: ಚಂದ್ರಯಾನ-2 ಯೋಜನೆ ಬಹುತೇಕ ಯಶಸ್ವಿಯಾಗಿ ಸಾಗುತ್ತಿದ್ದು, ಇದೀಗ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿರುವ ಅದು ಚಂದ್ರನ ಅಂಗಳಕ್ಕೆ ಮತ್ತಷ್ಟು ಹತ್ತಿರವಾಗಿದೆ. 

ಎರಡನೇ ಆರ್ಬಿಟ್​​ನಿಂದ ಚಂದ್ರಯಾನ-2 ಯಶಸ್ವಿಯಾಗಿ ಬೇರ್ಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಇಸ್ರೋ ಮಾಹಿತಿ ನೀಡಿದೆ. ನಿನ್ನೆಯಷ್ಟೇ ಚಂದ್ರಯಾನ 2 ಆರ್ಬಿಟರ್​ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದ ವಿಜ್ಞಾನಿಗಳು, ಇದೀಗ ಮೂನ್ ಲ್ಯಾಂಡರ್​ ಎಂಜಿನ್ ಅನ್ನು ಚಾಲನೆ ಮಾಡುವ ಮೂಲಕ  96 X 125ಕಿ,ಮೀ ವ್ಯಾಪ್ತಿಯೊಳಗೆ ತಳ್ಳಲಾಗಿದೆ. ಇದು ತೀರಾ ಸೂಕ್ಷ್ಮ ಕಾರ್ಯಾಚರಣೆಯಾಗಿದ್ದು, ಚಂದ್ರನ ದಕ್ಷಿಣ ತುದಿಯಲ್ಲಿ ಮೂನ್ ಲ್ಯಾಂಡರ್ ಮತ್ತು ರೋವರ್ ಅನ್ನು ಇಳಿಸುವ ಕಾರ್ಯಾಚರಣೆಯಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

ಬೆಳಗ್ಗೆ 3ಗಂಟೆ 42 ನಿಮಿಷಕ್ಕೆ ಪ್ರಾರಂಭವಾದ ಈ ಪ್ರಕ್ರಿಯೆ ಕೇವಲ 9 ಸೆಕೆಂಡುಗಳಲ್ಲಿ ಮುಕ್ತಾಯಗೊಂಡಿದೆ ಎಂದು ತಿಳಿದು ಬಂದಿದೆ.

ಇದರ ಮಧ್ಯೆ ಸೆಪ್ಟೆಂಬರ್​ 7ರಂದು ಚಂದ್ರನ ಮೇಲೆ ಚಂದ್ರಯಾನ-2 ನೌಕೆ ಇಳಿಯಲಿದ್ದು, ಅದು ತುಂಬಾ ರೋಚಕತೆಯಿಂದ ಕೂಡಿರುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.ಚಂದ್ರಯಾನ-2 ನೌಕೆಯನ್ನು ಹೊತ್ತು ಕಳೆದ ಜುಲೈ 22ರ ಮಧ್ಯಾಹ್ನ 2.45 ನಿಮಿಷಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶದಿಂದ ಉಡಾವಣೆಗೊಂಡಿತ್ತು.

Conclusion:
Last Updated : Sep 4, 2019, 9:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.