ETV Bharat / bharat

ಕೋವಿಡ್ ಸಂಕಷ್ಟ; ಚುನಾವಣೆ ನಡೆಸುವುದೇ ಸವಾಲು!

ರಾಜ್ಯಸಭಾ ಚುನಾವಣೆಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲು ಅವಕಾಶವಿದೆ. ಆದರೆ ಲೋಕಸಭೆ ಹಾಗೂ ರಾಜ್ಯ ವಿಧಾನ ಪರಿಷತ್ ಚುನಾವಣೆಗಳನ್ನು ಚುನಾವಣಾ ಆಯೋಗ 6 ತಿಂಗಳು ಕಾಲ ಮಾತ್ರ ಮುಂದೂಡಬಹುದು. ಸಂವಿಧಾನದ ಆರ್ಟಿಕಲ್ 45 (1) ಮತ್ತು ಆರ್ಟಿಕಲ್ 174 (1) ರ ಅಡಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಳ್ಳಬಹುದು. 6 ತಿಂಗಳಿಗೂ ಹೆಚ್ಚು ಕಾಲ ಚುನಾವಣೆ ಮುಂದೂಡುವ ಪರಿಸ್ಥಿತಿ ಎದುರಾದಲ್ಲಿ ಆಗ ಎರಡು ಆಯ್ಕೆಗಳು ತೆರೆದುಕೊಳ್ಳುತ್ತವೆ. ಮೊದಲನೆಯದಾಗಿ, ಆರ್ಟಿಕಲ್ 172 (1) ರ ಪ್ರಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ಚುನಾವಣೆಗಳನ್ನು ಒಂದು ವರ್ಷ ಮುಂದೂಡಬಹುದು ಹಾಗೂ ತುರ್ತು ಪರಿಸ್ಥಿತಿ ತೆರವುಗೊಳಿಸಿದ ನಂತರ ಮತ್ತೊಮ್ಮೆ 6 ತಿಂಗಳವರೆಗೆ ಚುನಾವಣೆ ಮುಂದೂಡಬಹುದು. ಆದರೆ ದೇಶದ ಸುರಕ್ಷತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಘೋಷಿಸಲಾದ ತುರ್ತು ಪರಿಸ್ಥಿತಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ. ಸಾಂಕ್ರಾಮಿಕ ರೋಗ ಅಥವಾ ಇನ್ನಾವುದೋ ಬಿಕ್ಕಟ್ಟಿನ ತುರ್ತು ಪರಿಸ್ಥಿತಿಗೆ ಇದು ಅನ್ವಯವಾಗಲ್ಲ.

Challenges of conducting elections
Challenges of conducting elections
author img

By

Published : Jun 24, 2020, 7:51 PM IST

ಕೊರೊನಾ ವೈರಸ್​ನ ಬಿಕ್ಕಟ್ಟು ಚುನಾವಣೆಗಳ ಮೇಲೂ ತನ್ನ ಪ್ರಭಾವ ಬೀರಿದೆ. ಭಾರತ ಮಾತ್ರವಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ನಡೆಯಬೇಕಿದ್ದ ಚುನಾವಣೆಗಳನ್ನು ಮುಂದೂಡಲಾಗಿದೆ. ಇನ್ನೂ ಹಲವಾರು ರಾಷ್ಟ್ರಗಳು ಚುನಾವಣೆ ನಡೆಸುವುದಾ ಅಥವಾ ಬೇಡವಾ ಎಂಬ ಸಂದಿಗ್ಧದಲ್ಲಿವೆ.

66 ದೇಶಗಳಲ್ಲಿನ ಚುನಾವಣೆಗಳು ಮುಂದೂಡಿಕೆ!

ಫೆಬ್ರವರಿ 21, 2020 ರಿಂದ ಜೂನ್ 21, 2020 ರ ಅವಧಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನಡೆಯಬೇಕಿದ್ದ ಚುನಾವಣೆಗಳು ಮುಂದೂಡಿಕೆಯಾಗಿವೆ. ಜಗತ್ತಿನ ಒಟ್ಟು 66 ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಅಥವಾ ಪ್ರಾದೇಶಿಕ ಚುನಾವಣೆಗಳನ್ನು ಮುಂದೂಡಿವೆ. ಇಷ್ಟಾದರೂ 34 ರಾಷ್ಟ್ರಗಳು ಮಾತ್ರ ಕೋವಿಡ್​-19 ಬೆದರಿಕೆಗೆ ಜಗ್ಗದೆ ಪೂರ್ವನಿಗದಿಯಂತೆ ಚುನಾವಣೆಗಳನ್ನು ನಡೆಸಲು ಧೈರ್ಯ ತೋರಿವೆ. 19 ರಾಷ್ಟ್ರಗಳು ಈಗಾಗಲೇ ಕೋವಿಡ್​ ಬಿಕ್ಕಟ್ಟಿನಲ್ಲಿಯೂ ಚುನಾವಣೆಗಳನ್ನು ನಡೆಸಿವೆ.

ಭಾರತದಲ್ಲಿ ಮುಂಬರಲಿರುವ ಚುನಾವಣೆಗಳ ಪಟ್ಟಿ

ಭಾರತದಲ್ಲಿ ನವೆಂಬರ್ 29, 2020 ರೊಳಗೆ ಬಿಹಾರ ವಿಧಾನಸಭೆ, ಮೇ 30, 2021 ರೊಳಗೆ ಪಶ್ಚಿಮ ಬಂಗಾಳ ವಿಧಾನಸಭೆ, ಮೇ 31, 2021 ರೊಳಗೆ ಅಸ್ಸಾಂ, ಜೂನ್ 1, 2021 ರೊಳಗೆ ಕೇರಳ ವಿಧಾನಸಭೆ, ಮೇ 24, 2021 ರೊಳಗೆ ತಮಿಳುನಾಡು ವಿಧಾನಸಭೆ ಹಾಗೂ ಜೂನ್ 8, 2021 ರೊಳಗೆ ಪುದುಚೇರಿ ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳನ್ನು ಮುಗಿಸಬೇಕಿದೆ.

ಭಾರತದಲ್ಲಿ ಚುನಾವಣೆ ಮುಂದೂಡಿಕೆಗೆ ಇರುವ ಸಾಂವಿಧಾನಿಕ ಆಯ್ಕೆಗಳು

ರಾಜ್ಯಸಭಾ ಚುನಾವಣೆಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲು ಅವಕಾಶವಿದೆ. ಆದರೆ ಲೋಕಸಭೆ ಹಾಗೂ ರಾಜ್ಯ ವಿಧಾನ ಪರಿಷತ್ ಚುನಾವಣೆಗಳನ್ನು ಚುನಾವಣಾ ಆಯೋಗ 6 ತಿಂಗಳು ಕಾಲ ಮಾತ್ರ ಮುಂದೂಡಬಹುದು. ಸಂವಿಧಾನದ ಆರ್ಟಿಕಲ್ 45 (1) ಮತ್ತು ಆರ್ಟಿಕಲ್ 174 (1) ರ ಅಡಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಳ್ಳಬಹುದು.

6 ತಿಂಗಳಿಗೂ ಹೆಚ್ಚು ಕಾಲ ಚುನಾವಣೆ ಮುಂದೂಡುವ ಪರಿಸ್ಥಿತಿ ಎದುರಾದಲ್ಲಿ ಆಗ ಎರಡು ಆಯ್ಕೆಗಳು ತೆರೆದುಕೊಳ್ಳುತ್ತವೆ.

ಮೊದಲನೆಯದಾಗಿ, ಆರ್ಟಿಕಲ್ 172 (1) ರ ಪ್ರಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ಚುನಾವಣೆಗಳನ್ನು ಒಂದು ವರ್ಷ ಮುಂದೂಡಬಹುದು ಹಾಗೂ ತುರ್ತು ಪರಿಸ್ಥಿತಿ ತೆರವುಗೊಳಿಸಿದ ನಂತರ ಮತ್ತೊಮ್ಮೆ 6 ತಿಂಗಳವರೆಗೆ ಚುನಾವಣೆ ಮುಂದೂಡಬಹುದು. ಆದರೆ ದೇಶದ ಸುರಕ್ಷತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಘೋಷಿಸಲಾದ ತುರ್ತು ಪರಿಸ್ಥಿತಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ. ಸಾಂಕ್ರಾಮಿಕ ರೋಗ ಅಥವಾ ಇನ್ನಾವುದೋ ಬಿಕ್ಕಟ್ಟಿನ ತುರ್ತು ಪರಿಸ್ಥಿತಿಗೆ ಇದು ಅನ್ವಯವಾಗಲ್ಲ.

ಎರಡನೇ ಆಯ್ಕೆ ಎಂದರೆ, ಆರ್ಟಿಕಲ್ 356 (1) ರ ಅನ್ವಯ ಆಯಾ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಘೋಷಣೆ ಮಾಡಬಹುದು. ಆದರೆ ರಾಷ್ಟ್ರಪತಿ ಆಡಳಿತ ಹೇರುವ ಪ್ರಕ್ರಿಯೆಯು ಹಲವಾರು ಬಾರಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದು, ಇದನ್ನು ಜಾರಿಗೊಳಿಸುವುದು ಸುಲಭವಲ್ಲ.

ದಕ್ಷಿಣ ಕೋರಿಯಾ ಚುನಾವಣೆ ಮಾದರಿ

ಕೊರೊನಾ ಬಿಕ್ಕಟ್ಟಿನ ಮಧ್ಯದಲ್ಲೂ ದಕ್ಷಿಣ ಕೋರಿಯಾ ರಾಷ್ಟ್ರೀಯ ಚುನಾವಣೆಗಳನ್ನು ನಡೆಸಿದ್ದು, ಸುಮಾರು 44 ಮಿಲಿಯನ್ ಮತದಾರರು ಮತ ಚಲಾಯಿಸಿದ್ದಾರೆ. ಅತ್ಯಂತ ಕಟ್ಟು ನಿಟ್ಟಾದ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಚುನಾವಣೆ ನಡೆಸಿದ ದಕ್ಷಿಣ ಕೋರಿಯಾ ಭಾರತಕ್ಕೂ ಪ್ರೇರಣೆಯಾಗಬಹುದು. ಅತ್ಯಂತ ಶಿಸ್ತು ಬದ್ಧವಾಗಿ ನಡೆದ ಕೋರಿಯಾ ಚುನಾವಣೆಯಲ್ಲಿ ಕಳೆದ 28 ವರ್ಷಗಳಲ್ಲೇ ಅತಿ ಹೆಚ್ಚು ಶೇ 66.2 ರಷ್ಟು ಮತದಾನವಾಗಿದೆ.

2019 ರ ಭಾರತ ಸಾರ್ವತ್ರಿಕ ಚುನಾವಣೆಯ ಒಂದು ಹಿನ್ನೋಟ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ 900 ಮಿಲಿಯನ್ ಅರ್ಹ ಮತದಾರರಿದ್ದಾರೆ. 2,354 ಕ್ಕೂ ಅಧಿಕ ನೋಂದಾಯಿತ ರಾಜಕೀಯ ಪಕ್ಷಗಳಿವೆ. ದೇಶದಲ್ಲಿನ ಅತಿ ಸೂಕ್ಷ್ಮ ಹಾಗೂ ಹಿಂಸಾಚಾರ ನಡೆಬಹುದಾದ ಮತಗಟ್ಟೆಗಳನ್ನು ಚುನಾವಣಾ ಆಯೋಗವು ಮೊದಲೇ ಗುರುತಿಸಿತ್ತು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ 5 ಲಕ್ಷ ಭದ್ರತಾ ಸಿಬ್ಬಂದಿಯನ್ನು ಆಗ ನೇಮಿಸಲಾಗಿತ್ತು.

ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಇದು ಸಕಾಲ!

ಕೊರೊನಾ ವೈರಸ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂದಿನ ಕೆಲ ತಿಂಗಳಾದರೂ ಸಾರ್ವಜನಿಕ ಸ್ಥಳಗಳಲ್ಲಿ ಜನತೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ. ಇಂಥ ಸಮಯದಲ್ಲಿ ಚುನಾವಣೆ ನಡೆಸುವುದಾದರೆ ಮತದಾನ ಸಮಯದಲ್ಲಿ ಅವರು ಮಾಸ್ಕ್ ತೆಗೆದು ಮುಖ ತೋರಿಸುವುದು ಅನಿವಾರ್ಯ. ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಾಗ ಮಾಸ್ಕ್ ಧರಿಸಿದ್ದು, ಮತ ಪೆಟ್ಟಿಗೆ ಬಳಿ ತೆರಳಿದ ನಂತರ ಮಾಸ್ಕ್ ತೆಗೆದು ವ್ಯಕ್ತಿಯು ತನ್ನ ಗುರುತನ್ನು ಸ್ಥಳದಲ್ಲಿರುವ ಚುನಾವಣಾಧಿಕಾರಿಗೆ ಖಚಿತ ಪಡಿಸಬಹುದು. ಇದರ ಜೊತೆಗೆ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸಾಧ್ಯವಿರುವ ಕಡೆಯೆಲ್ಲ ಸ್ಯಾನಿಟೈಜರ್ ಬಳಸುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ಇಂಥ ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸುವ ಮುನ್ನ ಸಂಬಂಧಿತ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಪರಿಣಿತರೊಂದಿಗೆ ಚುನಾವಣಾ ಆಯೋಗ ಸಮಗ್ರ ಚರ್ಚೆ ನಡೆಸಬೇಕಾಗುತ್ತದೆ. ಇದರ ಜೊತೆಗೆ ರಾಜಕೀಯ ಪಕ್ಷಗಳು ಹಾಗೂ ಜನರ ನಿರ್ಧಾರವನ್ನೂ ಪರಿಗಣಿಸಬೇಕಾಗುತ್ತದೆ.

ಚುನಾವಣಾ ಚಾಲೆಂಜ್!

ಕೋವಿಡ್ ಬಿಕ್ಕಟ್ಟು ಬಹುತೇಕ ಮುಂದಿನ ಎರಡು ವರ್ಷಗಳವರೆಗಾದರೂ ಮುಂದುವರೆಯಬಹು ಎನ್ನುತ್ತಾರೆ ತಜ್ಞರು. ಆದರೆ ಅಷ್ಟೊಂದು ದೀರ್ಘಾವಧಿಗೆ ಚುನಾವಣೆ ನಡೆಸದಿದ್ದರೆ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಅಪಾಯವಾಗಬಹುದು. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೋವಿಡ್​ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಸವಾಲಿನ ವಿಷಯವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.