ವಾರಣಾಸಿ (ಉತ್ತರ ಪ್ರದೇಶ): ಹೂಡಿಕೆದಾರ ಸಹಾಯಕ್ಕಾಗಿ ಹೂಡಿಕೆ ಕ್ಲಿಯರೆನ್ಸ್ ಸೆಲ್ ರಚಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದು ಹೂಡಿಕೆದಾರರಿಗೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಭಾರತವನ್ನು ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ ಮಾಡಲು ಕೇಂದ್ರ ಇಂಥ ತೀರ್ಮಾನ ಕೈಗೊಂಡಿದೆ ಎಂದು ವಾರಣಾಸಿಯಲ್ಲಿ ನಡೆದ ಕಾಶಿ ಏಕ್ ರೂಪ್ ಅನೇಕ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ದೇಶದ ಸಂಪತ್ತು ಸೃಷ್ಟಿಕರ್ತರು ತೆರಿಗೆ ಸಂಗ್ರಹದ ಕಷ್ಟಗಳನ್ನು ಎದುರಿಸದಂತೆ ಮೊದಲ ಬಾರಿಗೆ ತೆರಿಗೆದಾರರ ಚಾರ್ಟರ್ ಸಿದ್ಧಪಡಿಸಲಾಗುತ್ತಿದೆ. ಉತ್ಪಾದನೆಯನ್ನು ಉತ್ತೇಜಿಸಲು, ತೆರಿಗೆಯನ್ನು ಶೇಕಡಾ 15 ಕ್ಕೆ ಇಳಿಸಲಾಗಿದೆ. ಕಾರ್ಪೊರೇಟ್ ತೆರಿಗೆ ಕಡಿಮೆ ಇರುವ ಕೆಲವೇ ದೇಶಗಳಲ್ಲಿ ಈಗ ಭಾರತವೂ ಸೇರಿದೆ ಎಂದಿದ್ದಾರೆ.
ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಬಲಪಡಿಸುವ ಏಕ ಗವಾಕ್ಷಿ ಇ-ಲಾಜಿಸ್ಟಿಕ್ಸ್ ಮಾರುಕಟ್ಟೆಯನ್ನು ರಚಿಸಲು ದೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದಿದ್ದಾರೆ.