ನವದೆಹಲಿ: ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿರುವ ಜಮಾ ಮಸ್ಜಿದ್ನ ಶಹಿ ಇಮಾಮ್ ಆದ ಸೈಯದ್ ಅಹ್ಮದ್ ಬುಖಾರಿ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
2017ರ ಅಲ್ವರ್ ದಾಳಿಯನ್ನು ಉಲ್ಲೇಖಿಸಿದ ಅವರು, ಮೃತ ಪೆಹ್ಲು ಖಾನ್ ಮೇಲೆ ಚಾರ್ಜ್ಶೀಟ್ ಸಲ್ಲಿಸಿದ್ದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ, ಜನರು ಕಾನೂನು ಸುವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಏನನ್ನೂ ಮಾಡದೆ ಮೂಕ ಪ್ರೇಕ್ಷಕನಂತೆ ಕುಳಿತಿದೆ ಎಂದರು.
ಸರ್ಕಾರದ ತಾರತಮ್ಯ ನೀತಿಯಿಂದಾಗಿ ಭಾರತದಲ್ಲಿನ ಮುಸ್ಲಿಮರು ನೋವು ಅನುಭವಿಸುತ್ತಿದ್ದಾರೆ. ನಿತ್ಯ ತಮ್ಮ ಉಳಿವಿಗಾಗಿ ಯುದ್ಧವನ್ನೇ ಮಾಡುತ್ತಿದ್ದಾರೆ. ಆದರೂ ಅವರನ್ನು ಉಗ್ರರಂತೆ ಕಾಣಲಾಗ್ತಿದೆ ಎಂದು ಆರೋಪಿಸಿದರು. ದೇಶದಕ್ಕೆ ಸ್ವಾತಂತ್ರ್ಯ ದೊರೆತು ಹಲವು ವರ್ಷಗಳು ಕಳೆದರೂ, ಮುಸ್ಲಿಮರಿಗೆ ಮಾತ್ರ ನ್ಯಾಯ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಮೊದಲು ಬುಖಾರಿ ಅವರು, ಮುಸ್ಲಿಮರು, ದಲಿತರು ಸೇರಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಧಾನಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದರು. ರಾಹುಲ್ ಗಾಂಧಿ ಅವರಿಗೂ ಈ ಪತ್ರ ರವಾನಿಸಿದ್ದರು.