ETV Bharat / bharat

ಮದ್ಯ ಮಾರಾಟಕ್ಕೆ ಅನುಮತಿ ಅಸಾಧ್ಯ: ಪಂಜಾಬ್ ಸಿಎಂ ಮನವಿ ತಿರಸ್ಕರಿಸಿದ ಕೇಂದ್ರ - ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ

ಅನುಮತಿ ನೀಡಿದರೆ ಸಾಮಾಜಿಕ ಅಂತರದ ಷರತ್ತನ್ನು ಪಾಲಿಸಿಕೊಂಡು ಮನೆ ಮನೆಗೆ ಮದ್ಯ ತಲುಪಿಸುವ ವ್ಯವಸ್ಥೆ ಮಾಡುದಾಗಿ ಪಂಜಾಬ್ ಸಿಎಂ ಕ್ಯಾ. ಅಮರಿಂದರ್​ ಸಿಂಗ್ ಕೇಂದ್ರ ಗೃಹ ಸಚಿವಾಲಯಕ್ಕೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿದ ಸಚಿವಾಲಯ, ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದೆ.

ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ
author img

By

Published : Apr 24, 2020, 2:48 PM IST

ನವದೆಹಲಿ : ನಿಯಮಿತ ಮಾರಾಟಗಾರರ ಮೂಲಕ ಅಥವಾ ಹೋಂ ಡೆಲಿವರಿ ಮೂಲಕ ರಾಜ್ಯದಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡುವಂತೆ ಕೋರಿ ಪಂಜಾಬ್ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಗೃಹ ಇಲಾಖೆ ತಿರಸ್ಕರಿಸಿದೆ.

ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಪತ್ರ ಬರೆದಿದ್ದ ಸಿಎಂ ಕ್ಯಾ.ಅಮರಿಂದರ್​ ಸಿಂಗ್​, ಲಾಕ್ ಡೌನ್​ನಿಂದಾಗಿ ಮದ್ಯ ಮಾರಾಟದಿಂದ ಮಾಸಿಕ ಬರುತ್ತಿದ್ದ 550 ಕೋಟಿ ಆದಾಯ ಕಡಿತಗೊಂಡಿದೆ. ಇದರಿಂದ ರಾಜ್ಯದ ಆರ್ಥಿಕತೆಯ ಮೇಲೆ ತೀವ್ರ ಹೊಡೆತ ಬೀಳುತ್ತದೆ. ಆದ್ದರಿಂದ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದರೆ ಸಾಮಾಜಿಕ ಅಂತರದ ಷರತ್ತನ್ನು ಪಾಲಿಸಿಕೊಂಡು ಮನೆ ಮನೆಗೆ ಮದ್ಯ ತಲುಪಿಸುವ ವ್ಯವಸ್ಥೆ ಮಾಡುದಾಗಿ ತಿಳಿಸಿದ್ದರು. ಅಮರಿಂದರ್​ ಸಿಂಗ್ ಪತ್ರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಇಲಾಖೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದೆ.

ಇದರ ಜೊತೆಗೆ ಸಿಂಗ್ ಕೇಂದ್ರಕ್ಕೆ ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದು, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿದ್ದ 7,400 ಕೋಟಿ ಹಾಗೂ ಕೋವಿಡ್​ ಪರಿಹಾರ ಕಾರ್ಯಕ್ಕಾಗಿ 3 ಸಾವಿರ ಕೋಟಿ ವಿಶೇಷ ಅನುದಾನ ನೀಡುವಂತೆ ಕೋರಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿಗೂ ಒಂದು ಪತ್ರ ಬರೆದಿರುವ ಸಿಂಗ್, ಕೋವಿಡ್​ ಬಿಕ್ಕಟಿನಿಂದ ಹೊರ ಬರಲು 3 ಹಂತದ ಕಾರ್ಯತಂತ್ರಗಳನ್ನು ಸೂಚಿಸಿದ್ದಾರೆ. ಅದರಲ್ಲಿ 3 ತಿಂಗಳ ವಿಶೇಷ ಹಣಕಾಸು ಪ್ಯಾಕೇಜ್ ಮತ್ತು 15 ನೇ ಹಣಕಾಸು ಆಯೋಗಕ್ಕೆ ಅಂತಿಮ ವರದಿ ಸಲ್ಲಿಸಲು 2021 ರ ಅಕ್ಟೋಬರ್​​​ವರೆಗೆ ಸಮಯ ವಿಸ್ತರಣೆ ಮಾಡುವುದು ಸೇರಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.