ETV Bharat / bharat

ಕೃಷಿ ಮಸೂದೆಗಳ ಬಗ್ಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ... ಸಂಶಯಗಳಿಗೆ ಇಲ್ಲಿದೆ ಉತ್ತರ - ಕೃಷಿ ಮಸೂದೆಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಕೃಷಿ ಮಸೂದೆಗಳಲ್ಲಿನ ಗೊಂದಲಗಳನ್ನು ನಿವಾರಿಸಲು ಮೋದಿ ಸರ್ಕಾರವು ಈ ಕುರಿತು ಅಧಿಸೂಚನೆ ಹೊರಡಿಸಿದೆ. ಎಂಎಸ್​ಪಿ ವ್ಯವಸ್ಥೆ ಉಳಿಯುತ್ತದೆ ಮತ್ತು ಸರ್ಕಾರದ ಖರೀದಿ ಮುಂದುವರೆಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Central government issues clarification on agriculture bills
ಕೃಷಿ ಮಸೂದೆಗಳ ಬಗ್ಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ
author img

By

Published : Sep 21, 2020, 7:43 AM IST

ನವದೆಹಲಿ: ಪಂಜಾಬ್, ಹರಿಯಾಣದ ರೈತರು ಮತ್ತು ಪ್ರತಿಪಕ್ಷಗಳು 'ರೈತ ವಿರೋಧಿ' ಎಂದು ಹೇಳಿಕೊಂಡು ಕೃಷಿ ಮಸೂದೆಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯ ಮಧ್ಯೆ ಕೇಂದ್ರ ಸರ್ಕಾರವು ಕೃಷಿ ಮಸೂದೆಗಳ ಬಗ್ಗೆ ಸ್ಪಷ್ಟೀಕರಣ ನೀಡಿದೆ.

ಕೇಂದ್ರ ಸರ್ಕಾರವು ತನ್ನ ಸ್ಪಷ್ಟೀಕರಣದಲ್ಲಿ ಮಸೂದೆಗಳು 'ರೈತ ಪರ' ಮತ್ತು ಮಧ್ಯವರ್ತಿಗಳ ಹಿಡಿತದಿಂದ ರೈತರನ್ನು ಮುಕ್ತವಾಗಿಸುತ್ತವೆ ಎಂದು ಹೇಳಿದೆ.

Central government issues clarification on agriculture bills
ಕೃಷಿ ಮಸೂದೆಗಳ ಬಗ್ಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ

1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ

ನಿಬಂಧನೆಗಳು

  • ರೈತರು ಮತ್ತು ವ್ಯಾಪಾರಿಗಳು ರಾಜ್ಯಗಳ ಎಪಿಎಂಸಿಗಳ ಅಡಿಯಲ್ಲಿ ನೋಂದಾಯಿತ ಮಂಡಿಗಳ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಸ್ವಾತಂತ್ರ್ಯವನ್ನು ಹೊಂದಿರುವ ಪರಿಸರ ವ್ಯವಸ್ಥೆಯನ್ನು ರಚಿಸುವುದು.
  • ರೈತರ ಉತ್ಪನ್ನಗಳನ್ನು ರಾಜ್ಯದ ಒಳಗೆ ಮತ್ತು ಅಂತರ್​ ರಾಜ್ಯ ಮಟ್ಟದಲ್ಲಿ ತಡೆ ಮುಕ್ತ ವ್ಯಾಪಾರವನ್ನು ಉತ್ತೇಜಿಸುವುದು.
  • ಮಾರ್ಕೆಟಿಂಗ್ ಅಥವಾ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಉತ್ತಮ ಬೆಲೆಗಳನ್ನು ಪಡೆಯಲು ರೈತರಿಗೆ ಸಹಾಯ ಮಾಡುವುದು.

ಸಂಶಯಗಳು:

  • ಕನಿಷ್ಠ ಬೆಂಬಲ ಬೆಲೆಯಲ್ಲಿ ಸಂಗ್ರಹಣೆ ನಿಲ್ಲುತ್ತದೆ
  • ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಂಡಿಗಳ ಹೊರಗೆ ಮಾರಾಟ ಮಾಡಿದರೆ ಇವುಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ
  • ಇ-ನ್ಯಾಮ್‌ನಂತಹ ಸರ್ಕಾರಿ ಎಲೆಕ್ಟ್ರಾನಿಕ್ ಟ್ರೇಡಿಂಗ್ ಪೋರ್ಟಲ್‌ನ ಭವಿಷ್ಯ ಕೆಡುವ ಸಾಧ್ಯತೆ

ಸ್ಪಷ್ಟೀಕರಣ:

  • ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮುಂದುವರೆಯುತ್ತದೆ
  • ಮಂಡಿಗಳು ಮತ್ತು ಇ-ನ್ಯಾಮ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಿಲ್ಲ
  • ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೃಷಿ ಉತ್ಪನ್ನಗಳ ವ್ಯಾಪಾರ ಹೆಚ್ಚಾಗುತ್ತದೆ

2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಮಸೂದೆ

ನಿಬಂಧನೆಗಳು

  • ರೈತರು ಕೃಷಿ ವ್ಯವಹಾರ ಸಂಸ್ಥೆಗಳು ಮತ್ತು ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು
  • ಮಾರುಕಟ್ಟೆಯ ಅನಿರೀಕ್ಷಿತತೆಯ ಅಪಾಯವನ್ನು ಪ್ರಾಯೋಜಕರಿಗೆ ವರ್ಗಾಯಿಸುತ್ತದೆ
  • ಆಧುನಿಕ ತಂತ್ರಜ್ಞಾನವನ್ನು ಪ್ರವೇಶಿಸಲು ರೈತನಿಗೆ ಅನುವು ಮಾಡಿಕೊಡುತ್ತದೆ
  • ಮಾರುಕಟ್ಟೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ರೈತರ ಆದಾಯವನ್ನು ಸುಧಾರಿಸುತ್ತದೆ

ಸಂಶಯಗಳು

  • ಗುತ್ತಿಗೆ ಕೃಷಿಯ ಅಡಿಯಲ್ಲಿ ರೈತರು ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಅವರಿಗೆ ಬೆಲೆಗಳನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ
  • ಸಣ್ಣ ರೈತರು ಗುತ್ತಿಗೆ ಕೃಷಿಯನ್ನು ಹೇಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ, ಪ್ರಾಯೋಜಕರು ಅವರಿಂದ ದೂರ ಸರಿಯುತ್ತಾರೆ
  • ವಿವಾದದ ಸಂದರ್ಭದಲ್ಲಿ ದೊಡ್ಡ ಕಂಪನಿಗಳು ಪ್ರಯೋಜನ ಪಡೆಯುತ್ತವೆ

ಸ್ಪಷ್ಟೀಕರಣ:

  • ತನ್ನ ಆಯ್ಕೆಯ ಮಾರಾಟ ಬೆಲೆಯನ್ನು ನಿಗದಿಪಡಿಸುವ ಒಪ್ಪಂದದಲ್ಲಿ ರೈತನಿಗೆ ಸಂಪೂರ್ಣ ಅಧಿಕಾರವಿರುತ್ತದೆ
  • ಒಪ್ಪಂದಕ್ಕೆ ಸಹಿ ಹಾಕಿದ ನಂತರ ರೈತ ವ್ಯಾಪಾರಿಗಳನ್ನು ಹುಡುಕಬೇಕಾಗಿಲ್ಲ.
  • ರೈತ ಉತ್ಪಾದನಾ ಸಂಸ್ಥೆ, ಸಣ್ಣ ರೈತರನ್ನು ಒಟ್ಟುಗೂಡಿಸುತ್ತದೆ

3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ, 2020

ನಿಬಂಧನೆಗಳು

  • ಸಿರಿಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಈರುಳ್ಳಿ ಮುಂತಾದ ಸರಕುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕುವುದು
  • ಈ ನಿಬಂಧನೆಯು ಖಾಸಗಿ ವಲಯ ಅಥವಾ ಎಫ್‌ಡಿಐಗಳನ್ನು ಕೃಷಿ ಕ್ಷೇತ್ರಕ್ಕೆ ಆಕರ್ಷಿಸುತ್ತದೆ
  • ಕೋಲ್ಡ್ ಸ್ಟೋರೇಜ್​ನಂತಹ ಕೃಷಿ ಮೂಲ ಸೌಕರ್ಯಕ್ಕಾಗಿ ಹೂಡಿಕೆ ತರಲು ಸಹಕಾರಿ
  • ಸ್ಪರ್ಧಾತ್ಮಕ ಮಾರುಕಟ್ಟೆ ವಾತಾವರಣ ಸೃಷ್ಟಿ

ಸಂಶಯಗಳು

  • ಅಸಾಮಾನ್ಯ ಸನ್ನಿವೇಶಗಳಿಗೆ ಬೆಲೆ ಮಿತಿಗಳು ತುಂಬಾ ಹೆಚ್ಚಾಗಿದ್ದು, ಅವು ಎಂದಿಗೂ ಪ್ರಚೋದಿಸಲ್ಪಡುವುದಿಲ್ಲ
  • ಕೃಷಿ ಮಾರುಕಟ್ಟೆಯಲ್ಲಿ ದೊಡ್ಡ ಕಂಪನಿಗಳು ಪ್ರಾಬಲ್ಯ ಸಾಧಿಸಲಿವೆ
  • ಈರುಳ್ಳಿ ರಫ್ತು ನಿಷೇಧದ ಇತ್ತೀಚಿನ ನಿರ್ಧಾರವು ಅದರ ಅನುಷ್ಠಾನದ ಬಗ್ಗೆ ಅನುಮಾನಗಳನ್ನು ಹೊಂದಿದೆ

ಸ್ಪಷ್ಟೀಕರಣ:

  • ಇದು ಸ್ಟಾಕ್ ಹೋಲ್ಡಿಂಗ್ ಮಿತಿಗಳನ್ನು ಹೇರುವುದನ್ನು ದೂರ ಮಾಡುತ್ತದೆ
  • ಇದು ಬೆಲೆ ಸ್ಥಿರತೆಯನ್ನು ತರುವ ಮೂಲಕ ರೈತರಿಗೆ ಮತ್ತು ಗ್ರಾಹಕರಿಗೆ ಸಹಾಯ ಮಾಡುತ್ತದೆ
  • ವ್ಯವಹಾರ ಕಾರ್ಯಾಚರಣೆಗಳಲ್ಲಿ ಅತಿಯಾದ ನಿಯಂತ್ರಕ ಹಸ್ತಕ್ಷೇಪದ ಖಾಸಗಿ ಹೂಡಿಕೆದಾರರ ಭಯವನ್ನು ಈ ಮಸೂದೆ ತೆಗೆದುಹಾಕುತ್ತದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.