ETV Bharat / bharat

'ಎಂಇಆರ್‌ಎಸ್'‌ ಆ್ಯಂಟಿಬಾಡಿ ಅಭಿವೃದ್ಧಿಗೆ ಸೆಲ್ಟ್ರಿಯನ್ ಕಂಪನಿ ಆಯ್ಕೆ! - ಎಂಇಆರ್‌ಎಸ್‌ ಆ್ಯಂಟಿಬಾಡಿ ಚಿಕಿತ್ಸೆಯ CT-P38 ನ ಅಭಿವೃದ್ಧಿ

ಸೆಲ್ಟ್ರಿಯನ್ ಕಂಪನಿಯು ಎಂಇಆರ್‌ಎಸ್‌ ಆ್ಯಂಟಿಬಾಡಿ ಚಿಕಿತ್ಸೆಯ CT-P38 ನ ಅಭಿವೃದ್ಧಿಯನ್ನು ವೇಗಗೊಳಿಸಿದ್ದು, ಇದರ ಒಟ್ಟು ವೆಚ್ಚ 3.7 ಬಿಲಿಯನ್ ವೊನ್ (ದಕ್ಷಿಣ ಕೊರಿಯಾದ ಕರೆನ್ಸಿ) ಆಗಿದ್ದು, ಇದರಲ್ಲಿ ಸರ್ಕಾರದಿಂದ 2.2 ಬಿಲಿಯನ್ ವೊನ್ ಭರಿಸಲಾಗಿದೆ.

Celltrion selected as national project for development of MERS
'ಎಂಇಆರ್‌ಎಸ್'‌ ಆ್ಯಂಟಿಬಾಡಿ ಅಭಿವೃದ್ಧಿಗೆ ಸೆಲ್ಟ್ರಿಯನ್ ಕಂಪನಿ ಆಯ್ಕೆ
author img

By

Published : May 16, 2020, 11:38 AM IST

ಹೈದರಾಬಾದ್: ದಕ್ಷಿಣ ಕೊರಿಯಾದ ಸೆಲ್ಟ್ರಿಯನ್ ಎಂಬ ಜೈವಿಕ ತಂತ್ರಜ್ಞಾನ ಕಂಪನಿಯು 'ಎಂಇಆರ್‌ಎಸ್‌' (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್) ಕೊರೊನಾ ವೈರಸ್​​ ಪ್ರತಿಕಾಯವನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಈ ಕಂಪನಿಯು ಮುಖ್ಯವಾಗಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಕ್ಷೇತ್ರದಲ್ಲಿ ಗಮನ ಹರಿಸಿದೆ.

ಈ ರಾಷ್ಟ್ರೀಯ ಯೋಜನೆಯು ತಂತ್ರಜ್ಞಾನ ಅಭಿವೃದ್ಧಿ ಹಾಗೂ ಬಗೆಹರಿಸದ ಚಿಕಿತ್ಸೆಯ ಸವಾಲನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು. ಸೆಲ್ಟ್ರಿಯನ್ ಕಂಪನಿಯು ಎಂಇಆರ್‌ಎಸ್‌ ಆ್ಯಂಟಿಬಾಡಿ ಚಿಕಿತ್ಸೆಯ CT-P38 ನ ಅಭಿವೃದ್ಧಿಯನ್ನು ವೇಗಗೊಳಿಸಿದ್ದು, ಇದರ ಒಟ್ಟು ವೆಚ್ಚ 3.7 ಬಿಲಿಯನ್ ವೊನ್ (ದಕ್ಷಿಣ ಕೊರಿಯಾದ ಕರೆನ್ಸಿ) ಯಾಗಿದ್ದು, ಇದರಲ್ಲಿ ಸರ್ಕಾರದಿಂದ 2.2 ಬಿಲಿಯನ್ ವೊನ್ ಭರಿಸಲಾಗಿದೆ.

ಹಾಗೂ ಸೆಲ್ಟ್ರಿಯನ್ ಈ ವರ್ಷದಿಂದ 2022 ರವರೆಗೆ ಕೊರಿಯಾ ವಿಶ್ವವಿದ್ಯಾಲಯದೊಂದಿಗೆ ಕೈಜೋಡಿಸಲು ನಿರ್ಧರಿಸಿದ್ದು, ಸಿಟಿ-ಪಿ 38 ಕ್ಲಿನಿಕಲ್ ಅಲ್ಲದ ಪ್ರಯೋಗಗಳು ಮತ್ತು ಹಂತ 1 ಕ್ಲಿನಿಕಲ್ ಪ್ರಯೋಗಗಳನ್ನು ಸ್ವಾಧೀನಪಡಿಸಿಕೊಳ್ಳುವ ಗುರಿ ಹೊಂದಿದೆ.

2018 ರ ನವೆಂಬರ್‌ನಲ್ಲಿ ವಾಷಿಂಗ್ಟನ್ ಡಿ.ಸಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸೋಂಕು ಮತ್ತು ಇತರ ಉಸಿರಾಟದ ಕಾಯಿಲೆಗಳ ಸಂಘ (ಐಎಸ್‌ಐಆರ್​​​​​​​​​​ವಿ) ಪ್ರಕಟಿಸಿದ ಅಧ್ಯಯನವೊಂದರಲ್ಲಿ, ಬಹುರಾಷ್ಟ್ರೀಯ ಔಷಧೀಯ ಕಂಪನಿಗಳು ಅಭಿವೃದ್ಧಿಪಡಿಸಿದ ಎಂಇಆರ್‌ಎಸ್‌ ಪ್ರತಿಕಾಯಗಳಿಗೆ ಹೋಲಿಸಿದರೆ, ಸಿಟಿ-ಪಿ 38 ಪ್ರಾಣಿಗಳಲ್ಲಿ ಉತ್ತಮ ಪರಿಣಾಮ ತೋರಿದೆ ಎಂಬ ಅಂಶವು ಎಲ್ಲರ ಗಮನ ಸೆಳೆದಿದ್ದವು.

ಎಂಇಆರ್‌ಎಸ್‌ ಪ್ರತಿಕಾಯ ಚಿಕಿತ್ಸಕಗಳನ್ನು ಅಭಿವೃದ್ಧಿಪಡಿಸಲು ಸೆಲ್ಟ್ರಿಯಾನ್ ಕಂಪನಿಯು, ಮಧ್ಯಪ್ರಾಚ್ಯ ದೇಶಗಳಲ್ಲಿನ ಸರ್ಕಾರಗಳು ಮತ್ತು ಪಾಲುದಾರರೊಂದಿಗೆ ಅಭಿವೃದ್ಧಿ ವೆಚ್ಚಗಳನ್ನು ಚರ್ಚಿಸಲು ಯೋಜಿಸಿದೆ, ಮತ್ತು ಪ್ರತಿಕಾಯ-ಔಷಧ ಅಭಿವೃದ್ಧಿಯಲ್ಲಿ ಸಂಗ್ರಹವಾದ ಕ್ಲಿನಿಕಲ್ ಜ್ಞಾನವನ್ನು ಮಾರಾಟ ಮಾಡುವ ಮೂಲಕ ವೆಚ್ಚದ ಅಂಶದಲ್ಲಿ ಸಮರ್ಥ ಅಭಿವೃದ್ಧಿಯನ್ನು ಉತ್ತೇಜಿಸಲು ಯೋಜಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ವಿಶ್ವದ 27 ದೇಶಗಳಲ್ಲಿ ಎಂಇಆರ್‌ಎಸ್‌ ಅಭಿವೃದ್ಧಿಗೊಂಡಿದೆ. ಮತ್ತು ಸೌದಿ ಅರೇಬಿಯಾದಲ್ಲಿ 84% ಪ್ರಕರಣಗಳು ಮಧ್ಯಪ್ರಾಚ್ಯದಲ್ಲಿ ಸ್ಥಳೀಯ ವೈರಸ್‌ಗಳಾಗಿ ಮಾರ್ಪಟ್ಟಿವೆ. ಎಂಇಆರ್‌ಎಸ್‌ ಮುಖ್ಯವಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಪ್ರಚಲಿತದಲ್ಲಿದೆ. ಆದರೆ ಇದು ಕೊರಿಯಾದಲ್ಲಿ ಯಾವುದೇ ಸಮಯದಲ್ಲಿ ಮತ್ತೆ ಸಂಭವಿಸಬಹುದು ಎಂಬ ಕಾರಣದಿಂದ, ಸರ್ಕಾರದೊಂದಿಗೆ ದೃಢವ ಸಹಕಾರದ ಮೂಲಕ ಚಿಕಿತ್ಸಕಗಳನ್ನು ಅಭಿವೃದ್ಧಿಪಡಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಸೆಲ್ಟ್ರಿಯನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.