ETV Bharat / bharat

ಸಿಬಿಎಸ್​​ಇ 12ನೇ ತರಗತಿ ಪರೀಕ್ಷೆಯಲ್ಲಿ ಒಂದೇ ಫಲಿತಾಂಶ ಪಡೆದ ಅವಳಿ ಮಕ್ಕಳು! - ಅವಳಿ ವಿದ್ಯಾರ್ಥಿನಿಯರು

ಅವಳಿ ವಿದ್ಯಾರ್ಥಿನಿಯರಿಬ್ಬರು ಪರೀಕ್ಷೆಯಲ್ಲಿ ಸಮವಾದ ಫಲಿತಾಂಶ ಪಡೆದುಕೊಂಡಿರುವ ವಿಚಿತ್ರ ಘಟನೆ ನಡೆದಿದೆ

CBSE Class 12 Exams
CBSE Class 12 Exams
author img

By

Published : Jul 15, 2020, 4:59 PM IST

Updated : Jul 15, 2020, 7:09 PM IST

ನೋಯ್ಡಾ: ಕಳೆದ ಎರಡು ದಿನಗಳ ಹಿಂದೆ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಬಹಿರಂಗಗೊಂಡಿದ್ದು, ಶೇ.88.78ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಸಿಬಿಎಸ್​​ಇ 12ನೇ ತರಗತಿ ಪರೀಕ್ಷೆಯಲ್ಲಿ ಒಂದೇ ಫಲಿತಾಂಶ

ಆದರೆ ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ನೋಯ್ಡಾದ ಇಬ್ಬರು ಅವಳಿ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಒಂದೇ ರೀತಿಯ ಫಲಿತಾಂಶ ಪಡೆದುಕೊಂಡಿದ್ದಾರೆ.

ನೋಯ್ಡಾದ ಮಾನ್ಸಿ ಹಾಗೂ ಮಾನ್ಯಾ ಈ ಸಾಧನೆ ಮಾಡಿದ್ದು, ಪರೀಕ್ಷೆಯಲ್ಲಿ ಶೇ.95.8ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ಇಬ್ಬರು ಗ್ರೇಟರ್​​ ನೋಯ್ಡಾದ ಆಸ್ಟರ್ ಪಬ್ಲಿಕ್ ಸ್ಕೂಲ್​​ನಲ್ಲಿ ವ್ಯಾಸಂಗ ಮಾಡಿದ್ದು, ಇಂಗ್ಲಿಷ್​ ಹಾಗೂ ಕಂಪ್ಯೂಟರ್​ ಸೈನ್ಸ್​​ನಲ್ಲಿ 98, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ದೈಹಿಕ ಶಿಕ್ಷಣ ವಿಷಯದಲ್ಲಿ ಕ್ರಮವಾಗಿ 95 ಅಂಕ ಗಳಿಸಿದ್ದಾರೆ.

  • Greater Noida: Twin sisters Mansi & Manya have scored same percentage, 95.8 per cent, & same marks in all five subjects in CBSE Class 12 exams. Mansi Singh says, "It came as a surprise. We expected good marks but not the same, that too, in all subjects. It's just a coincidence." pic.twitter.com/7rwXP1HhDF

    — ANI UP (@ANINewsUP) July 15, 2020 " class="align-text-top noRightClick twitterSection" data=" ">

ಈ ಹಿಂದಿನ ಪರೀಕ್ಷೆಗಳಲ್ಲಿ ಇವರು ಒಂದೇ ರೀತಿಯ ಅಂಕಗಳಿಸಿಲ್ಲ. ಇದೇ ವಿಷಯವಾಗಿ ಮಾತನಾಡಿರುವ ವಿದ್ಯಾರ್ಥಿನಿಯರು ಉತ್ತಮ ಅಂಕ ಪಡೆದುಕೊಳ್ಳುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ ಇಬ್ಬರೂ ಒಂದೇ ರೀತಿಯಲ್ಲಿ ಅಂಕ ಪಡೆದುಕೊಳ್ಳುತ್ತೇವೆ ಎಂಬುದು ಗೊತ್ತಿರಲಿಲ್ಲ ಎಂದಿದ್ದಾರೆ. ಇದೀಗ ಇಂಜಿನಿಯರಿಂಗ್​ ಮಾಡುವ ಕನಸು ಕಾಣ್ತಿರುವ ಇವರು ಜೆಇಇ ಪರೀಕ್ಷೆಗಾಗಿ ಕಾಯುತ್ತಿದ್ದಾರೆ.

Last Updated : Jul 15, 2020, 7:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.