ನವದೆಹಲಿ: ಬರೋಬ್ಬರಿ 1,400 ಕೋಟಿ ರೂ. ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರತಿಷ್ಠಿತ ಐಸ್ ಕ್ರೀಮ್ ಕಂಪನಿ ವಿರುದ್ಧ ಸಿಬಿಐ ದೂರು ದಾಖಲು ಮಾಡಿದೆ.
ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ವಿವಿಧ ಬ್ಯಾಂಕ್ಗಳಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಸಿಬಿಐ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಪ್ರಮುಖವಾಗಿ ನವದೆಹಲಿ, ಬುಲಂದ್ಶಹರ್, ಶಹರನ್ಪುರ್, ಅಜ್ಮೇರ್ ಮತ್ತು ಪಲ್ವಾಲ್ ಸೇರಿದಂತೆ ಐಸ್ಕ್ರೀಮ್ ಕಂಪನಿಗೆ ಸೇರಿದ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯಾ ನಡೆಸಿದೆ.
ಇದಕ್ಕೆ ಸಂಬಂಧಿಸಿದಂತೆ ಸಿಬಿಐ ದೂರು ದಾಖಲು ಮಾಡಿಕೊಂಡಿದ್ದು, ಕಂಪನಿ ನಿರ್ದೇಶನರಾಗಿರುವ ಸಂಜಯ್ ಧಿಂಗ್ರ, ಸಿದ್ಧಂತ್ ಗುಪ್ತಾ, ಅರುಣ್ ಶ್ರೀವಾತ್ಸವ್ ಹೆಸರು ಉಲ್ಲೇಖಗೊಂಡಿದೆ.
ತೆರಿಗೆ ಉಳಿಸಿಕೊಳ್ಳುವ ಉದ್ದೇಶದಿಂದ ಬ್ಯಾಂಕ್ ಫಂಡ್ಗಳನ್ನ ಬೇರೆಡೆ ತಿರುಗಿಸಿರುವುದು, ಅಕ್ರಮ ಹಣ ವರ್ಗಾವಣೆ ಹಾಗೂ ನಕಲಿ ದಾಖಲೆ ಹಾಗೂ ರಶೀದಿ ವಿಚಾರದಲ್ಲಿ ಮೋಸ ಮಾಡಿರುವುದು ಕಂಡು ಬಂದಿದೆ. ಪ್ರಮುಖವಾಗಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಆಂಧ್ರ ಬ್ಯಾಂಕ್ ,ಕಾರ್ಪೋರೇಷನ್ ಬ್ಯಾಂಕ್,ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮೀ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸೇರಿವೆ.