ETV Bharat / bharat

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ರಿಯಾಗೆ 10 ಗಂಟೆಗಳ ಕಾಲ ಸಿಬಿಐ ಡ್ರಿಲ್​​

ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ರಿಯಾ ಚಕ್ರವರ್ತಿಯನ್ನು ಸುಮಾರು ಹತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

author img

By

Published : Aug 29, 2020, 9:05 AM IST

CBI questions Rhea Chakraborty
ಸಿಬಿಐನಿಂದ ರಿಯಾ ಚಕ್ರವರ್ತಿ ವಿಚಾರಣೆ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ರಿಯಾ ಚಕ್ರವರ್ತಿಯನ್ನು ಸಿಬಿಐ ಹತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಮೊದಲ ಬಾರಿಗೆ ಸಿಬಿಐ ಮುಂದೆ ಹಾಜರಾದ ರಿಯಾ ಚಕ್ರವರ್ತಿ, ರಾತ್ರಿ 9 ಗಂಟೆಯ ನಂತರ ಸಾಂತಕ್ರೂಜ್‌ನಲ್ಲಿರುವ ಡಿಆರ್‌ಡಿಒ ಅತಿಥಿ ಗೃಹದಿಂದ ಹೊರ ಬಂದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಆಕೆಯನ್ನು ಮತ್ತೆ ಕರೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ರಿಯಾ ಬೆಳಗ್ಗೆ 10.40ಕ್ಕೆ ಕೇಂದ್ರೀಯ ತನಿಖಾ ತಂಡ ಇರುವ ಅತಿಥಿ ಗೃಹವನ್ನು ತಲುಪಿದರು. ಆಕೆಯ ಆಗಮನದ ಮೊದಲು ‌ ಫ್ಲಾಟ್‌ಮೇಟ್ ಸಿದ್ಧಾರ್ಥ್ ಪಿಥಾನಿ ಮತ್ತು ಮ್ಯಾನೇಜರ್ ಸಮುಯಲ್ ಮಿರಾಂಡಾ ಡಿಆರ್‌ಡಿಒ ಅತಿಥಿ ಗೃಹವನ್ನು ತಲುಪಿದ್ದರು.

ಸುಶಾಂತ್ ಸಾವಿನ ಪ್ರಕರಣದ ತನಿಖೆಗಾಗಿ ಕಳೆದ ಎಂಟು ದಿನಗಳಿಂದ ನಗರದಲ್ಲಿದ್ದ ಸಿಬಿಐ ತಂಡ ಗುರುವಾರ ರಿಯಾ ಸಹೋದರ ಶೋಯಿಕ್ ಚಕ್ರವರ್ತಿಯ ಹೇಳಿಕೆಯನ್ನು ದಾಖಲಿಸಿದೆ. ಸಿಬಿಐ ಇದುವರೆಗೆ ಸಿದ್ದಾರ್ಥ್ ಪಿಥಾನಿ, ಸುಶಾಂತ್ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ನೀರಜ್ ಸಿಂಗ್ ಮತ್ತು ಮನೆ ಕೆಲಸದ ಸಹಾಯ ದೀಪೇಶ್ ಸಾವಂತ್ ಮತ್ತು ಇತರರನ್ನು ತನಿಖೆಯ ಭಾಗವಾಗಿ ಪ್ರಶ್ನಿಸಿದೆ.

ಸುಶಾಂತ್ ಚಾರ್ಟರ್ಡ್ ಅಕೌಂಟೆಂಟ್ ಸಂದೀಪ್ ಶ್ರೀಧರ್ ಮತ್ತು ಅಕೌಂಟೆಂಟ್ ರಜತ್ ಮೇವತಿ ಅವರ ಹೇಳಿಕೆಗಳನ್ನು ಸಿಬಿಐ ದಾಖಲಿಸಿದೆ. ಸಿಬಿಐ ತನಿಖೆ ಕೈಗೆತ್ತಿಕೊಳ್ಳುವ ಮೊದಲು ಮುಂಬೈ ಪೊಲೀಸರು ಸುಶಾಂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿಯ ಹೇಳಿಕೆಯನ್ನು ದಾಖಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.