ETV Bharat / bharat

ಹಥ್ರಾಸ್​ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ದಾಖಲಿಸಿದ ಸಿಬಿಐ - ಹತ್ರಾಸ್​ ಅತ್ಯಾಚಾರ ಕೊಲೆ ಪ್ರಕರಣ ಸುದ್ದಿ

ಹಥ್ರಾಸ್​ ಅತ್ಯಾಚಾರ ಆರೋಪಿಗಳಾದ ನಾಲ್ವರ ವಿರುದ್ಧ ಸಿಬಿಐ ಚಾರ್ಜ್​ಶೀಟ್​ ತಯಾರಿಸಿದೆ.

CBI charges, CBI charges four in Hathras murder case, Hathras murder case, Hathras murder case news, ಸಿಬಿಐ ಚಾರ್ಜ್​ಶೀಟ್​, ಹತ್ರಾಸ್​ ಅತ್ಯಾಚಾರಗಳ ವಿರುದ್ಧ ಸಿಬಿಐ ಚಾರ್ಜ್​ಶೀಟ್, ಹತ್ರಾಸ್​ ಅತ್ಯಾಚಾರ ಕೊಲೆ ಪ್ರಕರಣ, ಹತ್ರಾಸ್​ ಅತ್ಯಾಚಾರ ಕೊಲೆ ಪ್ರಕರಣ ಸುದ್ದಿ,
ಸಂಗ್ರಹ ಚಿತ್ರ
author img

By

Published : Dec 18, 2020, 6:39 PM IST

ಅಲೀಗಢ (ಉತ್ತರ ಪ್ರದೇಶ): ಇಡೀ ದೇಶವೇ ಬೆಚ್ಚಿ ಬಿದ್ದ ಹಥ್ರಾಸ್​ ಘಟನೆಗೆ ಸಂಬಂಧಿಸಿದ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್​ಶೀಟ್​ ರೆಡಿ ಮಾಡಿದೆ.

ಕಳೆದ ತಿಂಗಳು ನವೆಂಬರ್​ನಲ್ಲಿ ಹತ್ರಾಸ್​ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಪಾಲಿಗ್ರಾಫ್ ಮತ್ತು ಬ್ರೈನ್​ ಮ್ಯಾಪಿಂಗ್​ ಪರೀಕ್ಷೆಗಾಗಿ ಕೇಂದ್ರ ತನಿಖಾ ದಳ (ಸಿಬಿಐ) ತಂಡ ಗುಜರಾತ್​​ನ ಗಾಂಧಿ ನಗರಕ್ಕೆ ಕರೆದೊಯ್ದಿತ್ತು. ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅಲಹಾಬಾದ್​ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಈ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಈಗ ಪ್ರಕರಣದ ಆರೋಪಿಗಳಾದ ಸಂದೀಪ್​, ಲವಕುಶ, ರವಿ ಮತ್ತು ರಾಮು ವಿರುದ್ಧ ಸಿಬಿಐ ಚಾರ್ಜ್​ಶೀಟ್​ ತಯಾರಿಸಿದೆ.

ಸೆ. 14 ರಂದು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 19 ವರ್ಷದ ಯುವತಿ ಸಾವಿಗೂ ಮುನ್ನ ಆರೋಪಿಗಳ ವಿರುದ್ಧ ಹೇಳಿಕೆಗಳನ್ನು ದಾಖಲಿಸಿದ್ದರು. ಬಳಿಕ ಸೆ.29 ರಂದು ದೆಹಲಿಯ ಸಫ್ದರ್​ಜಂಗ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಕುಟುಂಬದ ವಿರೋಧ ನಡುವೆಯೂ ಯುವತಿಯ ಮೃತ ದೇಹದ ಅಂತ್ಯಕ್ರಿಯೆಯನ್ನು ಉತ್ತರ ಪ್ರದೇಶ ಪೊಲೀಸರು ರಾತ್ರೋ ರಾತ್ರಿ ಮಾಡಿದ್ದರು.

ಚಾರ್ಜ್​ಶೀಟ್​ನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳವ ನಿರ್ಧಾರವನ್ನು ಸಿಬಿಐ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.