ನವದೆಹಲಿ: ಬೆಕ್ಕುಗಳಿಗೆ ಕೊರೊನಾ ಸೋಂಕು ಹರಡುವುದಿಲ್ಲ ಎಂದು ಬಿಜೆಪಿ ಮುಖಂಡೆ ಮೇನಕಾ ಗಾಂಧಿ ಹೇಳಿದ್ದಾರೆ.
ಬೆಕ್ಕುಗಳು ಕೊರೊನಾ ಹರಡುವುದಿಲ್ಲ ಹಾಗೆ ಅವು ಕೂಡ ಸೋಂಕಿಗೆ ಒಳಗಾಗುವುದಿಲ್ಲ. ಮೃಗಾಲಯವೊಂದರಲ್ಲಿ ಹುಲಿಗೆ ಈ ಸೋಂಕು ತಗುಲಿದೆ ಎಂಬ ಬಗ್ಗೆ ನೀವೆಲ್ಲಾ ಮಾಧ್ಯಮದ ಮುಖಾಂತರ ತಿಳಿದುಕೊಂಡಿದ್ದೀರಿ. ಆದರೆ, ಬೆಕ್ಕು ಹುಲಿಯಲ್ಲ ಬೆಕ್ಕಿಗೂ ಹುಲಿಗೂ ಯಾವುದೇ ಸಂಬಂಧ ಇಲ್ಲ ಎಂದು ಮೇನಕಾ ಗಾಂಧಿಯವರು ವಿಡಿಯೋವೊಂದನ್ನು ಮಾಡಿ ಹಂಚಿದ್ದಾರೆ.
- — Maneka Sanjay Gandhi (@Manekagandhibjp) April 7, 2020 " class="align-text-top noRightClick twitterSection" data="
— Maneka Sanjay Gandhi (@Manekagandhibjp) April 7, 2020
">— Maneka Sanjay Gandhi (@Manekagandhibjp) April 7, 2020
ಇನ್ನು ಅಮೆರಿಕದ ಮೃಗಾಲಯವೊಂದರಲ್ಲಿ ಹುಲಿಗೆ ಈ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಕೇಂದ್ರ ಮೃಗಾಲಯ ಪ್ರಾಧಿಕಾರವು, ದೇಶಾದ್ಯಂತದ ಇರುವ ಎಲ್ಲಾ ಮೃಗಾಲಯಗಳಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕು ಎಂದು ಹೇಳಿದೆ. ಜಗತ್ತಿನಲ್ಲಿ ಕೊರೊನಾ ಸೋಂಕಿಗೆ ಒಳಗಾದ ಮೊದಲ ಪ್ರಾಣಿ ಈ ಹುಲಿಯಾಗಿದೆ.