ETV Bharat / bharat

ಬರೀ 30 ರೂಪಾಯಿಗೆ ಒಂದು ಕೆ.ಜಿ : ಪ್ರಸಿದ್ಧಿ ಪಡೆದ ಜಾರ್ಖಂಡ್‌ನ 'ಜಮ್ತರಾ ಗೋಡಂಬಿ'..! - ಜಾರ್ಖಂಡ್​​​ನ ಜಮ್ತರಾ ಗೋಡಂಬಿ

ಜಾರ್ಖಂಡ್‌ನ ಜಮ್ತರಾದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಗೋಡಂಬಿ ತೋಟವಿದ್ದು, ಗೋಡಂಬಿ ಪ್ರತಿ ವರ್ಷ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಆದ್ದರಿಂದ ಸ್ಥಳೀಯರು ಕಚ್ಚಾ ಗೋಡಂಬಿಯನ್ನು ಅತ್ಯಲ್ಪ ದರದಲ್ಲಿ ಮಾರಾಟ ಮಾಡುತ್ತಾರೆ.

Cashew is sold here for 30 rupees kg
ಗೋಡಂಬಿ
author img

By

Published : Oct 19, 2020, 6:03 AM IST

ಜಾರ್ಖಂಡ್​​: ರಾಂಚಿಯಲ್ಲಿ ಗೋಡಂಬಿಯ ಬೆಲೆ ಕೆ.ಜಿ.ಗೆ 600 ರಿಂದ 900 ರೂಪಾಯಿ ಇದೆ. ಆದರೆ ಅಲ್ಲಿಂದ ಕೇವಲ 200 ಕಿ.ಮೀ ದೂರದಲ್ಲಿ ಗೋಡಂಬಿಯು, ಪ್ರತಿ ಕೆ.ಜಿ.ಗೆ ಕೇವಲ 20 ರಿಂದ 30 ರೂ.ಗೆ ಮಾರಾಟವಾಗುತ್ತದೆ ಎಂದರೆ ನಿಮಗೆ ಅಚ್ಚರಿ ಆಗಬಹುದು.

ಹೌದು.., ಅಚ್ಚರಿ ಆದ್ರೂ ಇದು ಸತ್ಯ. ಜಮ್ತರಾದ ನಾಲ ಬ್ಲಾಕ್‌ನಲ್ಲಿ ಗೋಡಂಬಿಯನ್ನು ಬೆಳೆಯಲಾಗುತ್ತದೆ. ಅಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಗೋಡಂಬಿ ತೋಟವಿದ್ದು, ಗೋಡಂಬಿ ಪ್ರತಿ ವರ್ಷ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಆದ್ದರಿಂದ ಸ್ಥಳೀಯರು ಕಚ್ಚಾ ಗೋಡಂಬಿಯನ್ನು ಅತ್ಯಲ್ಪ ದರದಲ್ಲಿ ಮಾರಾಟ ಮಾಡುತ್ತಾರೆ.

ಇನ್ನು ಗೋಡಂಬಿ ತೋಟದ ದತ್ತಿಗಾಗಿ ಸರ್ಕಾರವು 3 ವರ್ಷಗಳ ಗುತ್ತಿಗೆಗೆ ನೀಡುತ್ತದೆ. ಅದು ಕೇವಲ 3 ಲಕ್ಷ ರೂಪಾಯಿಗಳಿಗೆ. ಕಡಿಮೆ ಸಮಯದ ಕಾರಣ ಗುತ್ತಿಗೆದಾರರು ಮರಗಳ ಬಗ್ಗೆ ಸರಿಯಾದ ಕಾಳಜಿ ವಹಿಸುವುದಿಲ್ಲ. ಮತ್ತು ಗೋಡಂಬಿ ಕಳ್ಳತನವೂ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಇದರ ಹೊರತಾಗಿಯೂ, ಪ್ರತಿ ವರ್ಷ 50 ರಿಂದ 60 ಕ್ವಿಂಟಾಲ್ ಗೋಡಂಬಿಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

ಜಾರ್ಖಂಡ್​​​ನ ಜಮ್ತರಾದಲ್ಲಿ 30 ರೂ.ಗೆ ಸಿಗುತ್ತೆ ಕೆ.ಜಿ ಗೋಡಂಬಿ

ಜಿಲ್ಲೆಯಲ್ಲಿ ಸಂಸ್ಕರಣೆಯ ಕೊರತೆಯಿಂದಾಗಿ, ಕಚ್ಚಾ ಗೋಡಂಬಿಯನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗುತ್ತದೆ. ಗುತ್ತಿಗೆದಾರರು ಕಚ್ಚಾ ಗೋಡಂಬಿ ಬೀಜಗಳನ್ನು ರೂ. ಪ್ರತಿ ಕೆಜಿಗೆ 150 ನಂತೆ ಮಾರಾಟ ಮಾಡುತ್ತಾರೆ. ಬಳಿಕ ಸಂಸ್ಕರಿಸಿದ ನಂತರ ಗೋಡಂಬಿಯ ಬೆಲೆ ಹಲವು ಪಟ್ಟು ಹೆಚ್ಚಾಗುತ್ತದೆ. ಸರ್ಕಾರ ಸಹಾಯ ಮಾಡಿದರೆ ಇಲ್ಲಿನ ಜನರ ಜೀವನವನ್ನು ಬದಲಾಯಿಸಬಹುದು ಎಂಬುದು ಸ್ಥಳೀಯರ ಮಾತಾಗಿದೆ.

ಗೋಡಂಬಿ ತೋಟವನ್ನು ಅಭಿವೃದ್ಧಿಪಡಿಸಲು ಮತ್ತು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು, ಹಲವಾರು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಈಟಿವಿ ಭಾರತದ ಜೊತೆಯಲ್ಲಿ ಜಿಲ್ಲಾಧಿಕಾರಿ ಗಣೇಶ್ ಕುಮಾರ್ ಗೋಡಂಬಿ ತೋಟವನ್ನು ಪರಿಶೀಲಿಸಿದ್ದು, ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮತ್ತು ಗೋಡಂಬಿ ಇಳುವರಿಯನ್ನು ಹೆಚ್ಚಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.

ಜಮ್ತರಾದಲ್ಲಿ ಗೋಡಂಬಿ ಬೆಳೆಯಲು ಬಹಳಷ್ಟು ಅವಕಾಶಗಳಿದ್ದು, ಸಂಸ್ಕರಣಾ ಘಟಕ ಸ್ಥಾಪನೆಯಾದರೆ ಜನರಿಗೆ ಉದ್ಯೋಗ ದೊರೆಯಲಿದೆ. ಹಾಗೂ ಗೋಡಂಬಿ ಉತ್ಪಾದನೆಯಲ್ಲಿ ಜಾರ್ಖಂಡ್‌ನ ಹೆಸರು ದೇಶಾದ್ಯಂತ ಪ್ರಸಿದ್ಧಿ ಪಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.