ETV Bharat / bharat

ಶಾಸಕರ ರಾಜೀನಾಮೆ: ದೆಹಲಿ ಪ್ರವಾಸ ಕೈಗೊಂಡ ಮಧ್ಯಪ್ರದೇಶ ಕಾರ್ಯಕಾರಿ ಸಿಎಂ - ಮಧ್ಯಪ್ರದೇಶ ಬಿಜೆಪಿ ಆಪರೇಷನ್​

ಮಧ್ಯಪ್ರದೇಶದಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡಿದೆ. ದೆಹಲಿ ಪ್ರವಾಸದಲ್ಲಿರುವ ಕಾರ್ಯಕಾರಿ ಮುಖ್ಯಮಂತ್ರಿ ಕಮಲ್​ ನಾಥ್​ ರಾಜಕೀಯ ಘಟನಾವಳಿಗಳ ಕುರಿತು ಹೈಕಮಾಂಡ್​​​ ಜೊತೆ ಚರ್ಚಿಸಲಿದ್ದಾರೆ. ಇನ್ನು ಅಧಿಕಾರಕ್ಕೇರಲು ಹರಸಾಹಸ ಮಾಡುತ್ತಿರುವ ಬಿಜೆಪಿ ಉಪ ಚುನಾವಣೆಯಲ್ಲಿ ಗೆಲ್ಲುವ ತಂತ್ರವನ್ನು ರೂಪಿಸುತ್ತಿದೆ.

caretaker-chief-minister-kamal-nath-visits-delhi-in-bhopal
ಮುಖ್ಯಮಂತ್ರಿ ಕಮಲ್​ ನಾಥ್​
author img

By

Published : Mar 21, 2020, 7:54 PM IST

ಭೋಪಾಲ್: ಮಧ್ಯಪ್ರದೇಶದ ಕಾರ್ಯಕಾರಿ ಸಿಎಂ ಕಮಲ್​ ನಾಥ್​ ದೆಹಲಿ ಪ್ರವಾಸದಲ್ಲಿದ್ದು, ಹೈಕಮಾಂಡ್​ ಭೇಟಿಯಾಗಿ ಕಳೆದ 15 ರಿಂದ 20 ದಿನಗಳಲ್ಲಿ ನಡೆದ ರಾಜಕೀಯ ಘಟನೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಮಧ್ಯಪ್ರದೇಶದ ರಾಜಕೀಯದಲ್ಲಿ ನಡೆದ ನಾಟಕೀಯ ಬೆಳವಣಿಗೆಯಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್​ ಕೆಳಗಿಳಿದಿದೆ. ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರುವ ಹರಸಾಹಸದಲ್ಲಿದೆ. ಇನ್ನೂ 25 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಅದರ ಫಲಿತಾಂಶದ ಆಧಾರದ ಮೇಲೆ ಮಧ್ಯಪ್ರದೇಶದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದು ತಿಳಿಯುತ್ತದೆ.

ಇನ್ನು ಸರ್ಕಾರ ರಚನೆಗೆ ಮಾಡುವ ಕನಸು ಹೊತ್ತಿರುವ ಬಿಜೆಪಿ ಬಹುಮತ ಸಾಬೀತಿಗೆ ಸುಮಾರು 10 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಇನ್ನು ಪ್ರತಿತಂತ್ರ ರೂಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್​ ಯಾವ ನಿರ್ಧಾರ ತೆಗೆದುಕೊಂಡಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಉಪಚುನಾವಣೆ ರಣಕಣದಲ್ಲಿ ಮತದಾರ ಯಾರ ಪರವಾಗಿ ಮತದಾನ ಮಾಡಲಿದ್ದಾನೆ ಎಂಬುವುದನ್ನ ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.