ರಾಮೇಶ್ವರಂ(ತಮಿಳುನಾಡು) : ಇಲ್ಲಿನ ಸಂಗುಮಲ್ ಕಡಲ ತೀರದಲ್ಲಿ ಆಲಿವ್ ರಿಡ್ಲೇ ಜಾತಿಯ ಅಪರೂಪದ ಆಮೆಯೊಂದರ ಕಳೇಬರ ಪತ್ತೆಯಾಗಿದೆ.
ಆಲಿವ್ ರಿಡ್ಲೇ, ಆಮೆ ಪ್ರಭೇದದಲ್ಲೇ ಎರಡನೇ ಚಿಕ್ಕ ಜಾತಿಯ ಆಮೆಯಾಗಿದ್ದು, ಸಮುದ್ರ ಆಮೆಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಆಮೆಗಳಾಗಿವೆ. ಆದ್ರೆ ಈ ಸಮುದ್ರ ಜೀವಿ ಇದೀಗ ರೆಡ್‌ಬುಕ್‌ನಲ್ಲಿ ಅಳಿವಿನಂಚಿನ ಪ್ರಭೇದ ಎಂದು ಗುರುತಿಸಿಕೊಂಡಿದೆ. ಈ ಪ್ರಭೇದಕ್ಕೆ ಸೇರಿದ ಆಮೆಗಳು ಬೆಚ್ಚ ಮತ್ತು ಉಷ್ಣವಲಯದ ನೀರಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮುಖ್ಯವಾಗಿ ಪೆಸಿಫಿಕ್, ಭಾರತೀಯ ಸಾಗರಗಳು ಹಾಗೂ ಅಟ್ಲಾಂಟಿಕ್ ಸಾಗರದ ಬೆಚ್ಚಗಿನ ನೀರಿನಲ್ಲಿ ಇವುಗಳನ್ನು ನೋಡಬಹುದು.
ಸಮುದ್ರದಲ್ಲಿ ಈಜುತ್ತಾ ಬಂದು ಆಮೆ ದಡಕ್ಕೆ ಅಪ್ಪಳಿಸಿರಬಹುದು ಎಂದು ಈ ಭಾಗದ ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ಸೀಸನ್ನಲ್ಲಿ ಈ ರೀತಿ ಸಂಭವಿಸುತ್ತದೆ ಎಂದು ಮೀನುಗಾರರು ತಿಳಿಸಿದ್ದಾರೆ.