ಡಿಯೋರಿಯಾ(ಉ.ಪ್ರದೇಶ): ಉತ್ತರ ಪ್ರದೇಶದಲ್ಲಿ ಉಪ ಚುನಾವಣೆ ಕಾವೇರುತ್ತಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಸ್ವತಂತ್ರ ಅಭ್ಯರ್ಥಿ ರಾಜನ್ ಯಾದವ್ ಅಕಾ ಆರ್ತಿ ಬಾಬಾ ಕೊಂಚ ಭಿನ್ನ. ಇವರು ಡಿಯೋರಿಯಾ ಜಿಲ್ಲೆಯಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ವಿಶೇಷ ರೀತಿಯ ಮತಬೇಟೆ ಮಾಡುತ್ತಿದ್ದಾರೆ.
ರಾಜನ್ ಯಾದವ್ ಅವರದ್ದು ಕ್ಷೇತ್ರಾದ್ಯಂತ ಏಕಾಂಗಿ ಪ್ರಚಾರ ಕಾರ್ಯ. ವಿಶೇಷವಾದ ಸಂಗತಿಯೆಂದರೆ, ಮತದಾರರನ್ನು ಸೆಳೆಯಲು ರೈತರ ಹೊಲಗಳಲ್ಲಿ ಕೆಲಸ ಮಾಡುವುದು, ವಯಸ್ಸಾದವರ ಶೂ ಪಾಲಿಷ್ ಮಾಡುವುದು, ಫಸಲು ಕೊಯ್ಲು ಮಾಡಲು ಇವರು ಜನರಿಗೆ ಸಹಾಯ ಮಾಡುತ್ತಿದ್ದಾರೆ.
ರಾಜನ್ ಹೇಳುವುದೇನು?
ಈ ಸಮಯದಲ್ಲಿ ನಾನು ಮಹಿಳೆಯರು ಮತ್ತು ವೃದ್ಧರ ಪಾದಗಳನ್ನು ತೊಳೆಯುತ್ತಿದ್ದೇನೆ. ಅವರು ನಮ್ಮ ಮತದಾರರು. ಅವರು ನಮ್ಮ ದೇವರಂತೆ. ಅವರ ಮತಗಳಿಂದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಂಗಲೆ, ಗಾಡಿ ಮತ್ತು ಎಲ್ಲವನ್ನೂ ಪಡೆಯುತ್ತೇವೆ. ಆದ್ದರಿಂದ ನಾನು ಅವರ ಪಾದಗಳನ್ನು ತೊಳೆಯುತ್ತಿದ್ದೇನೆ. ಜೊತೆಗೆ ಅವರ ಕಾಲಿನ ಚಪ್ಪಲಿಗಳನ್ನೂ ಸ್ವಚ್ಛಗೊಳಿಸುತ್ತಿದ್ದೇನೆ ಎಂದು ರಾಜನ್ ಯಾದವ್ ಹೇಳುತ್ತಾರೆ.