ಕೊಲ್ಕತ್ತಾ : ಪ. ಬಂಗಾಳ ಜಿಲ್ಲಾ ನ್ಯಾಯಾಂಗದ ಸದಸ್ಯರು ಮತ್ತು ನೋಂದಾವಣೆ ಸಿಬ್ಬಂದಿ ಇನ್ನು ಮುಂದೆ ಕೊಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಲಾರ್ಡ್‌ಶಿಪ್’ ಎಂದು ಸಂಬೋಧಿಸಬೇಕಾಗಿಲ್ಲ. ಸರಳವಾಗಿ ‘ಸರ್’ ಸಾಕು ಎಂದರೆ ಸಾಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ತಿಳಿಸಿದ್ದಾರೆ.
ಈ ಸಂಬಂಧ ಇ-ಮೇಲ್ ಮೂಲಕ ಕಳುಹಿಸಿದ ಪತ್ರದಲ್ಲಿ ಎಲ್ಲಾ ಜಿಲ್ಲಾ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಾಧೀಶರಿಗೆ ಮಾಹಿತಿ ತಿಳಿಸಲಾಗಿದೆ.
ಪತ್ರದ ಪ್ರಕಾರ ಮುಖ್ಯ ನ್ಯಾಯಮೂರ್ತಿಯವರೇ ಈ ನಿರ್ಧಾರ ಕೈಗೊಂಡಿದ್ದಾರೆ.