ನವದೆಹಲಿ: 36 ರಫೇಲ್ ಯುದ್ಧ ವಿಮಾನಗಳನ್ನು ಕೊಳ್ಳಲು 1000 ಕೋಟಿ ರೂ ಹೆಚ್ಚುವರಿ ಹಣ ನೀಡಲಾಗಿದೆ ಎಂಬ ಆರೋಪಕ್ಕೆ ಕೇಂದ್ರ ಸರ್ಕಾರ ಸಿಎಜಿ ವರದಿ ಮೂಲಕ ಸುಪ್ರೀಂಕೋರ್ಟ್ನಲ್ಲಿ ಲಿಖಿತ ವರದಿ ಸಲ್ಲಿಸಿದೆ.
ಯುಪಿಎ ಸರ್ಕಾರದಲ್ಲಿ ನಡೆದ ಮೀಡಿಯಂ ಮಲ್ಟಿ ರೋಲ್ ಕಂಬಾಟ್ ಏರ್ಕ್ರಾಫ್ಟ್ ಒಪ್ಪಂದಕ್ಕಿಂತ 1000 ಕೋಟಿ ರೂ ಹೆಚ್ಚುವರಿಯಾಗಿ ನೀಡಿ, ಎನ್ಡಿಎ ಸರ್ಕಾರ 36 ರಫೇಲ್ ಯುದ್ಧ ವಿಮಾನಗಳ ಒಪ್ಪಂದ ಮಾಡಿಕೊಂಡಿದೆ ಎಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ನಡೆದ ವಿಚಾರಣೆಯಲ್ಲಿ ಲಿಖಿತ ವರದಿ ನೀಡಿದ ಕೇಂದ್ರ, ಇಂತಹ ಅರ್ಜಿಗಳಲ್ಲಿನ ಆರೋಪವನ್ನು ಸಿಎಜಿ ವರದಿ ತಳ್ಳಿಹಾಕಿದೆ ಎಂದು ಹೇಳಿದೆ.
ಅರ್ಜಿದಾರರ ವಾದಕ್ಕೆ ಸಿಎಜಿ (ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ವರದಿ ಪೂರಕವಾಗಿಲ್ಲ. ಅಲ್ಲದೆ, 36 ರಫೇಲ್ ವಿಮಾನಗಳ ಒಪ್ಪಂದದಿಂದ ಶೇ. 2.86ರಷ್ಟು ಹಣ ಕಡಿಮೆಯಾಗಿದೆ. ಇದರಿಂದ ಅನುಕೂಲವೇ ಆಗಿದೆ ಎಂದು 39 ಪುಟಗಳಲ್ಲಿ ಉತ್ತರ ಸಲ್ಲಿಸಿದೆ.
ವರದಿ ಸಲ್ಲಿಕೆಯಾದ ನಂತರ, ರಫೇಲ್ ವಿವಾದಿಂದ ಕೇಂದ್ರ ಸರ್ಕಾರಕ್ಕೆ ಕ್ಲೀನ್ಚಿಟ್ ನೀಡಿದ ಡಿಸೆಂಬರ್ 14ರ ತೀರ್ಪನ್ನು ಮರುಪರುಶೀಲಿಸುವ ಅರ್ಜಿಗಳ ಮೇಲಿನ ತೀರ್ಪನ್ನು ಮೀಸಲಿರಿಸಿತು. ರಫೇಲ್ ಡೀಲ್ ವಿಚಾರವಾಗಿಯೇ ಪ್ರಧಾನಿ ಮೋದಿ ಅವರನ್ನು ಚೌಕೀದಾರ್ ಚೋರ್ ಹೈ ಎಂದೂ ರಾಹುಲ್ ಗಾಂಧಿ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ಕುರಿತ ತೀರ್ಪನ್ನೂ ಈ ಸಂದರ್ಭದಲ್ಲಿ ಮೀಸಲಿರಿಸಿತು.