ರಾಯಪುರ (ಛತ್ತೀಸ್ಗಢ) : ನಕ್ಸಲ್ ಪೀಡಿತ ದಂತೇವಾಡ ಜಿಲ್ಲೆಯಲ್ಲಿ ಶಿಬಿರದಿಂದ ಹೊರಬಂದಿದ್ದ ಛತ್ತೀಸ್ಗಢ ಸಶಸ್ತ್ರ ಪಡೆಯ ಹೆಡ್ ಕಾನ್‌ಸ್ಟೇಬಲ್ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಹೆಡ್ ಕಾನ್‌ಸ್ಟೇಬಲ್ ಕನೇಶ್ವರ್ ನೇತಂ (32) ಆಗಸ್ಟ್ 28ರಂದು ಯಾರಿಗೂ ಮಾಹಿತಿ ನೀಡದೆ ಶಿಬಿರದಿಂದ ಹೊರ ಬಂದಿದ್ದರು. ಈ ವೇಳೆ ಅರಣ್ಯದಲ್ಲಿನ ನಕ್ಸಲರ ಸ್ಥಳವನ್ನು ಕನೇಶ್ವರ್ ಪ್ರವೇಶಿಸಿದ್ದು, ನಕ್ಸಲರು ಇವರನ್ನು ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇಂದು ಬೆಳಗ್ಗೆ ಬೋಡ್ಲಿ ಹಾಗೂ ಕಾಡೆಮೆಟಾ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದ ಪಕ್ಕದಲ್ಲಿ ಯೋಧನ ಮೃತದೇಹ ಪತ್ತೆಯಾಗಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.