ETV Bharat / bharat

'ಮಿಷನ್​ ಕರ್ಮಯೋಗಿ'ಗೆ ಅನುಮೋದನೆ ನೀಡಿದ ಕೇಂದ್ರ ಕ್ಯಾಬಿನೆಟ್​... ಏನಿದು ಮಹತ್ವದ ಯೋಜನೆ!? - ಕೇಂದ್ರ ಸಚಿವ ಸಂಪುಟ

ಕೇಂದ್ರ ಸಚಿವ ಸಂಪುಟದಲ್ಲಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇದೇ ವಿಷಯವಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಸುದ್ದಿಗೋಷ್ಠಿ ನಡೆಸಿದರು.

Minister Prakash Javadekar
Minister Prakash Javadekar
author img

By

Published : Sep 2, 2020, 4:47 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಸಲಾಯಿತು. ಇದರಲ್ಲಿ ಮಹತ್ವದ ಮಿಷನ್​ ಕರ್ಮಯೋಗಿ ಎಂಬ ಹೊಸ ಯೋಜನೆಗೆ ಅನುಮೋದನೆ ನೀಡಲಾಗಿದೆ. ನಾಗರಿಕ ಸೇವಾ ಅಧಿಕಾರಿಗಳಿಗೆ ಕರ್ಮಯೋಗಿ ಯೋಜನೆ ಅಡಿಯಲ್ಲಿ ವಿಶೇಷ ತರಬೇತಿ ನೀಡಲಾಗುವುದು. ನಾಗರಿಕ ಸೇವೆಗಳ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸಚಿವ ಸಂಪುಟ ಬಳಿಕ ಜಾವಡೇಕರ್​ ಸುದ್ದಿಗೋಷ್ಠಿ

ಈ ಯೋಜನೆ ಪ್ರಕಾರ ನಾಗರಿಕಾ ಸೇವಾ ಇಲಾಖೆ ಅಧಿಕಾರಿಗಳು ಇನ್ಮುಂದೆ ಕರ್ಮಯೋಗಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ನಾಗರಿಕಾ ಸೇವಾ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗೆ ಈ ರಾಷ್ಟ್ರೀಯ ಕಾರ್ಯಕ್ರಮ ಕೆಲಸ ಮಾಡಲಿದ್ದು, ಭಾರತೀಯ ಸಂಸ್ಕೃತಿ ಗಮನದಲ್ಲಿಟ್ಟುಕೊಂಡು ಅವರಿಗೆ ತರಬೇತಿ ನೀಡಲಾಗುವುದು ಎಂದು ಪ್ರಕಾಶ್​ ಜಾವಡೇಕರ್​ ತಿಳಿಸಿದ್ದಾರೆ.

ಸಚಿವ ಸಂಪುಟದ ಬಳಿಕ ಮಾತನಾಡಿದ ಅವರು, ಮಿಷನ್​ ಕರ್ಮಯೋಗಿ ಭಾರತೀಯ ನಾಗರಿಕಾ ಸೇವಾ ಅಧಿಕಾರಿಗಳನ್ನ ಹೆಚ್ಚು ಸೃಜನಶೀಲ, ರಚನಾತ್ಮಕ, ಪ್ರಗತಿಪರ, ಪಾರದರ್ಶಕ ಮತ್ತು ತಂತ್ರಜ್ಞಾನ ವಿಷಯದಲ್ಲಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸುವುದಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಇದಕ್ಕಾಗಿ ಮಹತ್ವದ ಯೋಜನೆ ರೂಪಿಸಿಕೊಳ್ಳಲಿದೆ ಎಂದು ಅವರು ಹೇಳಿದರು.ಮಿಷನ್​ ಕರ್ಮಯೋಗಿ ವೈಯಕ್ತಿಕವಾಗಿ ಪ್ರತಿ ಅಧಿಕಾರಿ ಸಾಮರ್ಥ್ಯದ ಮೇಲೆ ಕೆಲಸ ಮಾಡಲಿದ್ದು, ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ತಜ್ಞರು ಇಲ್ಲಿ ಕೆಲಸ ಮಾಡಲಿದ್ದಾರೆ.

ಜಮ್ಮು-ಕಾಶ್ಮೀರ ಅಧಿಕೃತ ಭಾಷಾ ಮಸೂದೆ 2020 ಅನುಮೋದನೆ

ಆರ್ಟಿಕಲ್​ 370 ರದ್ಧತಿ ಬಳಿಕ ಇದೀಗ ಕಣಿವೆ ನಾಡಿನಲ್ಲಿ ಹೊಸ ಭಾಷಾ ಮಸೂದೆ ಸಂಸತ್ತಿನಲ್ಲಿ ಪರಿಚಯ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಪ್ರಕಾರ ಉರ್ದು, ಕಾಶ್ಮೀರಿ, ಡೋಗ್ರಿ, ಹಿಂದಿ ಮತ್ತು ಇಂಗ್ಲಿಷ್​​ ಐದು ಭಾಷೆಗಳು ಅಲ್ಲಿ ಅಧಿಕೃತಗೊಳ್ಳಲಿದ್ದು, ಸಾರ್ವಜನಿಕ ಬೇಡಿಕೆ ಆಧಾರದ ಮೇಲೆ ಇದನ್ನು ತಯಾರಿಸಲಾಗಿದೆ ಎಂದು ಕೇಂದ್ರ ಸಚಿವ ಜಾವಡೇಕರ್​ ತಿಳಿಸಿದರು.

ಡೋಗ್ರಿ, ಹಿಂದಿ ಮತ್ತು ಕಾಶ್ಮೀರಿ ಭಾಷೆಗಳು ಇಲ್ಲಿನ ಅಧಿಕೃತ ಭಾಷೆಗಳಾಗಲಿದ್ದು, ಸಾರ್ವಜನಿಕರ ಆಗ್ರಹದ ಮೇಲೆ ಉರ್ದು, ಇಂಗ್ಲಿಷ್​ ಸೇರ್ಪಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.