ಗುವಾಹತಿ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಗುಂಪೊಂದರ ಮೇಲೆ ಪೊಲೀಸರ ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾಗಿರುವ ಘಟನೆ ಅಸ್ಸೋಂನ ಗುವಾಹತಿಯಲ್ಲಿ ನಡೆದಿದೆ.
ಗುವಾಹತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಧಿಕಾರಿವೋರ್ವರು ನೀಡಿರುವ ಮಾಹಿತಿ ಪ್ರಕಾರ, ಓರ್ವ ಗಾಯಾಳು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದು, ಇನ್ನೋರ್ವ ವ್ಯಕ್ತಿ ಚಿಕಿತ್ಸೆ ನೀಡುತ್ತಿರುವ ವೇಳೆ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ ಮೃತರಲ್ಲಿ ಒಬ್ಬರನ್ನು ಸೇನಾ ಕ್ಯಾಂಟೀನ್‌ನ ಉದ್ಯೋಗಿ ದೀಪಾಂಜಲ್ ದಾಸ್ ಎಂದು ಹೇಳಲಾಗಿದ್ದು, ಇನ್ನೋರ್ವ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ದೊತೆತಿಲ್ಲ.
ಕೇಂದ್ರ ಸರ್ಕಾರದ ಐತಿಹಾಸಿಕ ಪೌರತ್ವ ಕಾಯ್ದೆ ವಿರೋಧಿಸಿ ಅಸ್ಸೋಂನಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನಾಕಾರರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗುವಾಹತಿಯಲ್ಲಿ ಬುಧವಾರ ಸಂಜೆ 6.15 ರಿಂದ ಕರ್ಫ್ಯೂ ಹೇರಿದ್ದರು.