ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಇಂದು ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ 6 ಜನರು ಬಲಿಯಾಗಿದ್ದಾರೆ.
-
Uttar Pradesh government's Additional Chief Secretary, Awanish Kumar Awasthi: 5 people died today in the violence during protests against #CitizenshipAmendmentAct, across the state. (file pic) pic.twitter.com/ZryS0VaZ02
— ANI UP (@ANINewsUP) December 20, 2019 " class="align-text-top noRightClick twitterSection" data="
">Uttar Pradesh government's Additional Chief Secretary, Awanish Kumar Awasthi: 5 people died today in the violence during protests against #CitizenshipAmendmentAct, across the state. (file pic) pic.twitter.com/ZryS0VaZ02
— ANI UP (@ANINewsUP) December 20, 2019Uttar Pradesh government's Additional Chief Secretary, Awanish Kumar Awasthi: 5 people died today in the violence during protests against #CitizenshipAmendmentAct, across the state. (file pic) pic.twitter.com/ZryS0VaZ02
— ANI UP (@ANINewsUP) December 20, 2019
ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ಇಬ್ಬರು, ಕಾನ್ಪುರ, ಸಂಭಾಲ್ ಮತ್ತು ಫಿರೋಜಾಬಾದ್ನಲ್ಲಿ ತಲಾ ಓರ್ವ ಸೇರಿದಂತೆ 6 ಜನರು ಬಲಿಯಾಗಿದ್ದಾರೆ. ಈ ಮೂಲಕ ಪೌರತ್ವ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಹಲವೆಡೆ ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
-
#WATCH Bahraich: Police resort to lathi-charge to disperse the protesters who were demonstrating against #CitizenshipAmendmentAct. pic.twitter.com/EXtkD61xJO
— ANI UP (@ANINewsUP) December 20, 2019 " class="align-text-top noRightClick twitterSection" data="
">#WATCH Bahraich: Police resort to lathi-charge to disperse the protesters who were demonstrating against #CitizenshipAmendmentAct. pic.twitter.com/EXtkD61xJO
— ANI UP (@ANINewsUP) December 20, 2019#WATCH Bahraich: Police resort to lathi-charge to disperse the protesters who were demonstrating against #CitizenshipAmendmentAct. pic.twitter.com/EXtkD61xJO
— ANI UP (@ANINewsUP) December 20, 2019
ಇತ್ತ ಬುಲಂದ್ ಶಹರ್ನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರು ಪೊಲೀಸ್ ವಾಹನವನ್ನ ಸುಟ್ಟು ಹಾಕಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಬುಲಂದ್ ಶಹರ್ ಜಿಲ್ಲಾಡಳಿತ, ಜಿಲ್ಲೆಯಾದ್ಯಂತ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಯನ್ನ ಸ್ಥಗಿತಗೊಳಿಸಿದೆ.
ನಿನ್ನೆಯಿಂದಲೇ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಈ ನಡುವೆಯೂ ಪ್ರತಿಭಟನೆಗಳು ನಡೆಯುತ್ತಿವೆ.