ಮಹಾರಾಷ್ಟ: ದಂಬಾರಿ ಗ್ರಾಮದ ಸಮೀಪ ಜಲಾನಾ-ಮಂಥಾ ರಸ್ತೆಯಲ್ಲಿ ಉದ್ಯಮಿಯೋರ್ವನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಪಾರ್ತೂರಿನ ಉದ್ಯಮಿ ರಾಜೇಶ್ ಮನಕ್ಚಂದ್ ನಹಾರ್ ಅವರಿಗೆ ಅಪರಿಚಿತ ದುಷ್ಕರ್ಮಿಗಳು ದಂಬಾರಿ ಗ್ರಾಮದ ಸಮೀಪ ಜಲಾನಾ-ಮಂಥಾ ರಸ್ತೆಯಲ್ಲಿ ಗುಂಡು ಹಾರಿಸಿದ್ದಾರೆ.
ಶನಿವಾರ ರಾತ್ರಿ 11.45 ಕ್ಕೆ ಈ ಘಟನೆ ಸಂಭವಿಸಿದೆ. ರಾಜೇಶ್ ತಮ್ಮ ವಾಹನದಲ್ಲಿ ಜಲಾನಾದಿಂದ ಪಾರ್ತೂರ್ ಕಡೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.