ಮುಂಬೈ: ಬಾಂದ್ರಾ ಪ್ರದೇಶದ ಪಕ್ಕದ ಮನೆಗಳ ಮೇಲೆ ಖಾಲಿ ಕಟ್ಟಡವೊಂದು ಕುಸಿದು ಬಿದ್ದಿದೆ. ಹತ್ತಿರದ ಮನೆಗಳಲ್ಲಿನ ಇಬ್ಬರು ನಿವಾಸಿಗಳು ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದಾರೆ. ಅವರನ್ನ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ, ರಕ್ಷಣಾ ಕಾರ್ಯಾಚರಣೆ ಇಬ್ಬರನ್ನ ರಕ್ಷಿಸಿದೆ. ಸೋಮವಾರ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದೆ.
8 ಅಗ್ನಿಶಾಮಕ ವ್ಯಾನ್‌ಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಿವೆ.