ಜೋದ್ಪುರ್ : ರಾಜಸ್ಥಾನದ ಜೋದ್ಪುರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ನಡೆದಿರುವ ಈ ಘಟನೆಯಲ್ಲಿ ಮೂರು ಜನ ಪ್ರಾಣ ಕಣೆದುಕೊಂಡಿದ್ದರೆ, ಓರ್ವ ವ್ಯಕ್ತಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು, ಜಿಲ್ಲಾಧಿಕಾರಿ ಪ್ರಕಾಶ್ ರಾಜ್ಪುರೋಹಿತ್ ತಿಳಿಸಿದ್ದಾರೆ.
ಇನ್ನು ಕಟ್ಟಡದ ಚಾವಣಿ ಕುಸಿತ ಯಾವ ಕಾರಣದಿಂದ ನಡೆಯಿತು ಎಂಬುದು ತಿಳಿದು ಬಂದಿಲ್ಲ. ತನಿಖೆಯ ನಂತರ ಕುಸಿತಕ್ಕೆ ಕಾರಣ ತಿಳಿಸುವುದಾಗಿ ರಾಜ್ಪುರೋಹಿತ್ ತಿಳಿಸಿದರು.