ನವದೆಹಲಿ: ಬಜೆಟ್ ಅಧಿವೇಶನದ ದ್ವಿತೀಯಾರ್ಧ ಕಲಾಪ ಇಂದಿನಿಂದ ಆರಂಭವಾಗಿದೆ. ದೆಹಲಿ ಹಿಂಸಾಚಾರ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
-
Budget Session: Rajya Sabha and Lok Sabha adjourned till 11 am tomorrow following uproar over #DelhiViolence pic.twitter.com/jO829TjogL
— ANI (@ANI) March 2, 2020 " class="align-text-top noRightClick twitterSection" data="
">Budget Session: Rajya Sabha and Lok Sabha adjourned till 11 am tomorrow following uproar over #DelhiViolence pic.twitter.com/jO829TjogL
— ANI (@ANI) March 2, 2020Budget Session: Rajya Sabha and Lok Sabha adjourned till 11 am tomorrow following uproar over #DelhiViolence pic.twitter.com/jO829TjogL
— ANI (@ANI) March 2, 2020
ಮಧ್ಯಾಹ್ನ ಲೋಕಸಭೆಯಲ್ಲಿ ದೆಹಲಿ ಗಲಭೆ ಕುರಿತು ಚರ್ಚಿಸಲು ಕಾಂಗ್ರೆಸ್ ನೋಟಿಸ್ ನೀಡಿದೆ. ದೆಹಲಿಯಲ್ಲಿನ ಗಲಭೆಗಳ ಬಗ್ಗೆ ಚರ್ಚಿಸಲು ಸದನದ ಎಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸುವಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ನೀಡಿದರು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ನಿಯಮಗಳ ಪ್ರಕಾರ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದರು.
ಆದರೆ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು, ಪೋಸ್ಟರ್ಗಳನ್ನ ಪ್ರದರ್ಶಿಸಿದ್ರು. ಕೆಲ ಕಾಲ ವಿವಾದ್ ಸೆ ವಿಶ್ವಾಸ್ ಬಿಲ್ ಕುರಿತು ಚರ್ಚೆ ನಡೆಸಲಾಯಿತು. ಆದರೆ ಕಾಂಗ್ರೆಸ್ ಸದಸ್ಯರ ಗದ್ದಲದಿಂದಾಗಿ ಅಧಿವೇಶನವನ್ನು ನಾಳೆಗೆ ಮೂಂಡೂಡಲಾಯಿತು.
ಇತ್ತ ರಾಜ್ಯಸಭೆಯಲ್ಲೂ ದೆಹಲಿ ವಿಚಾರದಲ್ಲಿ ಗದ್ದಲ ಉಂಟಾಗಿದ್ದರಿಂದ ನಾಳೆ ಬೆಳಗ್ಗೆ 11 ಗಂಟೆವರೆಗೆ ಅಧಿವೇಶನವನ್ನು ಮುಂದೂಡಲಾಯಿತು.